January 15, 2026

 

 

ಚಿನ್ನಕ್ಕಾಗಿ ಗುತ್ತಿಗೆದಾರನ ಬರ್ಬರ ಹತ್ಯೆ ಮಾಡಿ, ಮೈಮೇಲಿದ್ದ ಚಿನ್ನದ ಒಡವೆಗಳನ್ನು ದೋಚಿ ಆರೋಪಿಗಳು ಪರಾರಿಯಾಗಿರುವ ಘಟನೆ ಹಾಸನ ಜಿಲ್ಲೆ ಅರಸೀಕೆರೆ   ಪಟ್ಟಣದ ಕೆಎಸ್‌ಆರ್‌ಟಿಸಿ ಬಸ್ ನಿಲ್ದಾಣದ ಮುಂಭಾಗ ನಡೆದಿದೆ.

ವಿಜಯಕುಮಾರ್ (46) ಬರ್ಬರವಾಗಿ ಕೊಲೆಯಾದ ಕಂಟ್ರಾಕ್ಟರ್. ಬಿಹಾರ ಮೂಲದ ವಿಕ್ರಂ ಮತ್ತು ಸಚಿನ್ ಕೊಲೆ ಆರೋಪಿಗಳು.

ಅರಸೀಕೆರೆ ಪಟ್ಟಣದ ವಿಜಯಕುಮಾರ್, ಕಟ್ಟಡ ಹಾಗೂ ಲೇಬರ್ ಗುತ್ತಿಗೆದಾರರಾಗಿದ್ದರು. ಕೆಎಸ್‌ಆರ್‌ಟಿಸಿ ಮುಂಭಾಗ ನಿರ್ಮಾಣವಾಗುತ್ತಿರುವ ಹೊಸ ಹೋಟೆಲ್ ಕಟ್ಟಡದ ಗಾರೆ ಕೆಲಸಕ್ಕೆ ಬಿಹಾರ ಮೂಲದ ವಿಕ್ರಂ ಹಾಗೂ ಸಚಿನ್‌ನನ್ನು ಕರೆ ತಂದಿದ್ದರು. ಕೆಲವು ದಿನಗಳಿಂದ ವಿಕ್ರಂ ಹಾಗೂ ಸಚಿನ್, ವಿಜಯ್‌ಕುಮಾರ್ ಜೊತೆಯಲ್ಲೇ ಕೆಲಸ ಮಾಡುತ್ತಿದ್ದರು.

ವಿಜಯಕುಮಾರ್ ಯಾವಾಗಲೂ ಕೊರಳಿನಲ್ಲಿ ದಪ್ಪದಾದ ಚಿನ್ನದ ಸರ, ನಾಲ್ಕೈದು ಚಿನ್ನದ ಉಂಗುರಗಳನ್ನು ಹಾಕಿಕೊಳ್ಳುತ್ತಿದ್ದರು. ವಿಜಯಕುಮಾರ್ ಮೈಮೇಲಿದ್ದ ಚಿನ್ನದ ಒಡವೆಗಳ ಮೇಲೆ ವಿಕ್ರಂ ಹಾಗೂ ಸಚಿನ್ ಕಣ್ಣು ಹಾಕಿದ್ದು ಅದನ್ನು ಪಡೆಯಲು ಮಾಸ್ಟರ್ ಪ್ಲಾನ್ ಮಾಡಿದ್ದರು.

ಶುಕ್ರವಾರ ತಡರಾತ್ರಿ ವಿಕ್ರಂ ಹಾಗೂ ಸಚಿನ್, ವಿಜಯಕುಮಾರ್ ಅವರಿಗೆ ಕರೆ ಮಾಡಿ ನಮಗೆ ಆರೋಗ್ಯ ಸರಿಯಲ್ಲಿ ನಮ್ಮನ್ನು ಆಸ್ಪತ್ರೆಗೆ ಕರೆದುಕೊಂಡು ಹೋಗಿ, ನಾವು ಹೊರಗಡೆ ಹೋದರೆ ಅನುಮಾನ ಪಡುತ್ತಾರೆ ಎಂದಿದ್ದರು. ತಕ್ಷಣವೇ ವಿಜಯಕುಮಾರ್ ಕಟ್ಟಡದ ಮಾಲೀಕ ಶ್ರೀನಿವಾಸ್‌ಗೆ ಕರೆ ಮಾಡಿ ವಿಷಯ ತಿಳಿಸಿದ್ದರು.

ಶ್ರೀನಿವಾಸ್ ಈಗ ಹೋಗುವುದು ಬೇಡ ನಾಳೆ ನೋಡೋಣ ಬಿಡು ಎಂದಿದ್ದರು. ಆದರೆ ವಿಜಯಕುಮಾರ್ ಕಾರ್ಮಿಕರಿಗೆ ಏನಾದರೂ ಹೆಚ್ಚು ಕಡಿಮೆ ಆದರೆ ನಾನು ಹೋಣೆಗಾರನಾಗಬೇಕಾಗುತ್ತದೆ. ಹೋಗಿ ನೋಡಿಕೊಂಡು ಬರುತ್ತೇನೆ ಎಂದು ತಮ್ಮ ಸ್ಕೂಟಿಯಲ್ಲಿ ಕಟ್ಟಡದ ಬಳಿಗೆ ತೆರಳಿದ್ದರು.

ವಿಜಯಕುಮಾರ್  ಸ್ಕೂಟಿ ನಿಲ್ಲಿಸಿ ಒಳಗೆ ಹೋಗುತ್ತಿದ್ದಂತೆ ಆರೋಪಿಗಳು, ಕಬ್ಬಿಣದ ರಾಡ್‌ನಿಂದ ಬಲವಾಗಿ ತಲೆಗೆ ಹೊಡೆದಿದ್ದು, ಪರಿಣಾಮ ಆ ಕೂಡಲೇ ವಿಜಯಕುಮಾರ್ ನೆಲಕ್ಕೆ ಬಿದ್ದಿದ್ದರು. ನಂತರ ಸಣ್ಣ ಗ್ಯಾಸ್ ಸಿಲಿಂಡರ್‌ನಿಂದ ತಲೆ, ಮುಖವನ್ನು ಜಜ್ಜಿ ಭೀಕರವಾಗಿ ಕೊಲೆ ಮಾಡಿದ್ದರು.

ವಿಜಯಕುಮಾರ್ ಮೃತಪಟ್ಟ ನಂತರ ಆರೋಪಿಗಳು ಅವರ ಕೊರಳಿನಲ್ಲಿದ್ದ ಚಿನ್ನದ ಚೈನ್, ಕೈಯಲ್ಲಿದ್ದ ಮೂರು ಉಂಗರುಗಳನ್ನು ಕಸಿದುಕೊಂಡಿದ್ದರು. 1 ಉಂಗುರ ಬೆರಳಿನಿಂದ ಬಾರದಿದ್ದಾಗ ಬೆರಳನ್ನು ತುಂಡರಿಸಿ ಬೆರಳಿನ ಸಮೇತ ಉಂಗುರವನ್ನು ಎತ್ತಿಕೊಂಡು ವಿಜಯಕುಮಾರ್ ಅವರ ಸ್ಕೂಟಿಯಲ್ಲಿಯೇ ಸ್ಥಳದಿಂದ ಹೊರಟಿದ್ದರು. ಬಳಿಕ ಪಟ್ಟಣದ ಹೋಟೆಲ್‌ವೊಂದರ ಮುಂದೆ ಸ್ಕೂಟಿ ನಿಲ್ಲಿಸಿ ಎಸ್ಕೇಪ್ ಆಗಿದ್ದಾರೆ.

ಈ ಘಟನೆ ಅರಸಿಕೆರೆ ನಗರವನ್ನು ಬೆಚ್ಚಿಬೀಳಿಸಿದೆ. ಆರೋಪಿಗಳಿಗಾಗಿ ಪೊಲೀಸರು ಬಲೆ ಬೀಸಿದ್ದಾರೆ.

Leave a Reply

Your email address will not be published. Required fields are marked *

ಕ್ಷಮಿಸಿ ಹಕ್ಕು ಸೌಮ್ಯ ಕಾಯ್ದಿರಿಸಲಾಗಿದೆ
ಕ್ಷಮಿಸಿ ಹಕ್ಕು ಸೌಮ್ಯ ಕಾಯ್ದಿರಿಸಲಾಗಿದೆ
ಕ್ಷಮಿಸಿ ಹಕ್ಕು ಸೌಮ್ಯ ಕಾಯ್ದಿರಿಸಲಾಗಿದೆ
ಕ್ಷಮಿಸಿ ಹಕ್ಕು ಸೌಮ್ಯ ಕಾಯ್ದಿರಿಸಲಾಗಿದೆ
ಕ್ಷಮಿಸಿ ಹಕ್ಕು ಸೌಮ್ಯ ಕಾಯ್ದಿರಿಸಲಾಗಿದೆ
ಕ್ಷಮಿಸಿ ಹಕ್ಕು ಸೌಮ್ಯ ಕಾಯ್ದಿರಿಸಲಾಗಿದೆ
ಕ್ಷಮಿಸಿ ಹಕ್ಕು ಸೌಮ್ಯ ಕಾಯ್ದಿರಿಸಲಾಗಿದೆ