ಅಂತರರಾಷ್ಟ್ರೀಯ ಬೂಕರ್ ಪ್ರಶಸ್ತಿಯನ್ನು ಕನ್ನಡಕ್ಕೆ ತಂದುಕೊಟ್ಟ ಸಾಹಿತಿ ಪತ್ರಕರ್ತೆ ಹಾಸನದ ಬಾನು ಮುಷ್ತಾಕ್ ಅವರನ್ನು ಚಿಕ್ಕಮಗಳೂರು ಮಾಧ್ಯಮ ಸಂಸ್ಕøತಿ ಪ್ರತಿಷ್ಠಾನದ ಅಧ್ಯಕ್ಷ ಪ್ರಭುಲಿಂಗಶಾಸ್ತ್ರಿ ಅಭಿನಂದಿಸಿದ್ದಾರೆ.
ಹೆಣ್ಣುಮಕ್ಕಳು ವಿಶೇಷವಾಗಿ ಅಲ್ಪಸಂಖ್ಯಾತರೂ ಸೇರಿದಂತೆ ಶ್ರೀಸಾಮಾನ್ಯರ ಬದುಕು ಬವಣೆ ಕುರಿತಂತೆ ಬಾನು ಬರೆದ ಕಥೆಗಳ ಗುಚ್ಛ ‘ಹೃದಯದ ಹಣತೆ’ಯನ್ನು ದೀಪಾಬಸ್ತಿ ಇಂಗ್ಲೀಷ್‍ಗೆ ಹಾರ್ಟ್ ಲ್ಯಾಪ್ ಹೆಸರಿನಲ್ಲಿ ಅನುವಾದಿಸಿದ ಕೃತಿಗೆ ಸುಮಾರು 55ಲಕ್ಷರೂ.ಗಳನ್ನೊಳಗೊಂಡ ಪ್ರಪ್ರಥಮ ಪ್ರತಿಷ್ಠಿತ ಬೂಕರ್ ಪ್ರಶಸ್ತಿ ಕನ್ನಡದ ಹಿರಿಮೆಯನ್ನು ಹೆಚ್ಚಿಸಿದೆ. ಜಿಲ್ಲೆಯೊಂದಿಗೆ ನಿಕಟ ಸಂಬಂಧ ಹೊಂದಿರುವ ಬಾನು ಹಲವು ಕಾರ್ಯಕ್ರಮಗಳಲ್ಲೂ ಪಾಲ್ಗೊಂಡಿದ್ದರೆಂದು ಸ್ಮರಿಸಲಾಯಿತು.
ಲಂಡನ್‍ನಲ್ಲಿ ಪ್ರಶಸ್ತಿ ಸ್ವೀಕರಿಸಿ ಭಾರತಕ್ಕೆ ಆಗಮಿಸಿದ ಬಾನು ಅವರನ್ನು ಬೆಂಗಳೂರಿನ ಗಾಂಧಿಭವನದಲ್ಲಿ ಕೆಯುಡಬ್ಲ್ಯೂಜೆ ನೇತೃತ್ವದಲ್ಲಿ ಬರಮಾಡಿಕೊಂಡ ಸಂದರ್ಭದಲ್ಲಿ ಪ್ರತಿಷ್ಠಾನ ಗೌರವ ಸಲ್ಲಿಸಿದೆ. ಹಿರಿಯಪತ್ರಕರ್ತ ಕಂ.ಕ.ಮೂರ್ತಿ, ನಾಗರಾಜಭಟ್, ಅಜ್ಜಂಪುರ ಶಶಿಕಲಾ ಹಾಗೂ ಲಕ್ಷ್ಮಿನಾರಾಯಣ ದೇಶಪಾಂಡೆ ಜಿಲ್ಲೆಯ ಪರವಾಗಿ ಭಾನು ಅವರನ್ನು ಅಭಿನಂದಿಸಿದರು.



