ಮೂಡಿಗೆರೆಯಲ್ಲಿ ವಿಶ್ವ ಪರಿಸರ ದಿನಾಚರಣೆ ಅಂಗವಾಗಿ ಪಟ್ಟಣದ ಯೂರೋ ಕಿಡ್ಸ್ ಮತ್ತು ವುಡ್‍ಬ್ರಿಡ್ಜ್ ಸ್ಕೂಲ್ ಆಫ್ ಲರ್ನಿಂಗ್ ಶಾಲೆಯಲ್ಲಿ ಪರಿಸರ ಸಂರಕ್ಷಣೆ ಬಗ್ಗೆ ಜಾಗೃತಿ ಜಾಥಾ ನಡೆಸಲಾಯಿತು.
ಶಾಲೆಯ ಶಿಕ್ಷಕರು ಮತ್ತು ವಿದ್ಯಾರ್ಥಿಗಳು ಪಟ್ಟಣದ ಪ್ರಮುಖ ರಸ್ತೆಗಳಲ್ಲಿ ಮೆರವಣಿಗೆ ನಡೆಸಿ ನಂತರ ಲಯನ್ಸ್ ವೃತ್ತದಲ್ಲಿ ಪರಿಸರ ಸಂರಕ್ಷಣೆ ಕುರಿತು ಜಾಗೃತಿ ಮೂಡಿಸಲಾಯಿತು.
ಈ ಸಂದರ್ಭದಲ್ಲಿ ಶಾಲೆಯ ವ್ಯವಸ್ಥಾಪರಾದ ಎ.ಡಿ.ದೀಪಕ್, ಎಂ.ಎಸ್.ಲಹರಿ, ಎಂ.ಸಿ.ಸುಮನ್, ಪಿ.ರಶ್ಮೀ ಮತ್ತಿತರರಿದ್ದರು.



