Screenshot_20250614-133500_2

 

 

ಚಿಕ್ಕಮಗಳೂರು  ನಗರದ ವಿಶ್ವವಿದ್ಯಾಲಯ ವಿದ್ಯಾಸಂಸ್ಥೆಗೆ ಬೆಂಗಳೂರಿನ ಬ್ರಿಗೇಡ್ ಫೌಂಡೇಶನ್ ಕೊಡಮಾಡಿರುವ ಶಾಲಾವಾಹನವನ್ನು ಅಧ್ಯಕ್ಷ ಎಂ.ಆರ್.ಜಯಶಂಕರ್ ಶಾಲೆಗೆ ಹಸ್ತಾಂತರಿಸಿದರು.

104ವರ್ಷಗಳ ಇತಿಹಾಸವನ್ನು ಹೊಂದಿರುವ ನಗರದ ಹೃದಯಭಾಗದ ವಿಶ್ವವಿದ್ಯಾಲಯ ಅನುದಾನಿತ ಹಿರಿಯ ಪ್ರಾಥಮಿಕ ಕನ್ನಡ ಮಾಧ್ಯಮ ಶಾಲೆಯ ಸರ್ವಾಂಗೀಣ ಅಭಿವೃದ್ಧಿಗೆ ಕಂಕಣಬದ್ಧರಾಗಿರುವ ಎಂ.ಆರ್. ಜಯಶಂಕರ್, ಮೂಲತಃ ಚಿಕ್ಕಮಗಳೂರಿನವರು. ಕಾಫಿ ಬೆಳೆಗಾರರ ಕುಟುಂಬದವರು.  ಇದೇ ಶಾಲೆಯ ಹಳೆಯ ವಿದ್ಯಾರ್ಥಿ.

ಎಂ.ಆರ್.ಜೈಶಂಕರ್ ಅವರು 1986 ರಲ್ಲಿ ಸ್ಥಾಪಿಸಿದ ದಕ್ಷಿಣ ಭಾರತದ ರಿಯಲ್ ಎಸ್ಟೇಟ್ ಸಂಸ್ಥೆ ಬ್ರಿಗೇಡ್ ಎಂಟರ್‌ಪ್ರೈಸಸ್‌ನ ಅಧ್ಯಕ್ಷರಾಗಿದ್ದಾರೆ. ಬ್ರಿಗೇಡ್ ದಕ್ಷಿಣ ಭಾರತದ ರಾಜ್ಯಗಳಾದ ಕರ್ನಾಟಕ, ತಮಿಳುನಾಡು, ತೆಲಂಗಾಣ ಮತ್ತು ಕೇರಳದಲ್ಲಿ ವಸತಿ, ಕಚೇರಿ, ಚಿಲ್ಲರೆ ವ್ಯಾಪಾರ ಮತ್ತು ಆತಿಥ್ಯದಲ್ಲಿ ಯೋಜನೆಗಳನ್ನು ಹೊಂದಿದೆ. ಬ್ರಿಗೇಡ್ ಚೆನ್ನೈನಲ್ಲಿರುವ ಹಾಲಿಡೇ ಇನ್ ಸೇರಿದಂತೆ ಐದು ನಗರಗಳಲ್ಲಿ 1,500 ಕೊಠಡಿಗಳನ್ನು ಹೊಂದಿರುವ ಹೋಟೆಲ್‌ಗಳನ್ನು ಸಹ ನಡೆಸುತ್ತಿದೆ.

ತಾನು ಓದಿದ ಶಾಲೆಗೆ ಅಭಿವೃದ್ಧಿಗೆ ಜಯಶಂಕರ್ ಅವರು ಮುಂದೆ ಬಂದಿದ್ದಾರೆ. ಸ್ವಾತಂತ್ರ್ಯ ಹೋರಾಟದ ಸಮಯದಲ್ಲಿ ಆರಂಭಗೊಂಡ ವಿಶ್ವವಿದ್ಯಾಲಯ ಶಾಲೆ ಸೌಲಭ್ಯಗಳ ಕೊರತೆ ಸೇರಿದಂತೆ ವಿವಿಧ ಕಾರಣಗಳಿಂದ ಇತ್ತೀಚಿನ ದಶಕಗಳಲ್ಲಿ ಸೊರಗಿತ್ತು. ಐತಿಹಾಸಿಕ ಶಾಲೆಯನ್ನು ಉಚ್ಛ್ರಾಯಸ್ಥಿತಿಗೆ ಕೊಂಡೊಯ್ಯುವ ಸಂಕಲ್ಪದೊಂದಿಗೆ ಕಾಲಬದ್ಧ ಮಿತಿಯಲ್ಲಿ ಅಭಿವೃದ್ಧಿ ಕಾರ್ಯಗಳಿಗೆ ಆರ್ಥಿಕ ನೆರವನ್ನು ಜಯಶಂಕರ ಘೋಷಿಸಿದರು.

ಶಾಲೆಯ ಆಡಳಿತಮಂಡಳಿ, ಶಿಕ್ಷಕವೃಂದ ಹಾಗೂ ವಿದ್ಯಾರ್ಥಿಗಳೊಂದಿಗೆ ಸಮಾಲೋಚಿಸಿ ಸುಮಾರು 60ಲಕ್ಷಗಳ ವೆಚ್ಚದಲ್ಲಿ ಶಾಲಾ ನವೀಕರಣ ಕೈಗೊಳ್ಳಲಾಗಿದೆ. ಆಟೋಪಕರಣ-ಪಾಠೋಪಕರಣ-ಪೀಠೋಪಕರಣ, ಪ್ರಯೋಗಾಲಯ, ಗ್ರಂಥಾಲಯ, ಕಂಪ್ಯೂಟರ್‍ಲ್ಯಾಬ್ ಮತ್ತಿತರ ಮೂಲಭೂತ ಸೌಕರ್ಯಗಳನ್ನು ಬ್ರಿಗೇಡ್ ಫೌಂಡೇಶನ್ ಕಲ್ಪಿಸಲು ಯೋಜಿಸಿದೆ. ಹೆಚ್ಚುವರಿ ಶಿಕ್ಷಕರು ಹಾಗೂ ಇತರೆ ಸಿಬ್ಬಂದಿಗಳ ವೇತನ ನೀಡುವುದರ ಜೊತೆಗೆ ಶಾಲೆಯ ಎಲ್ಲ ಅಗತ್ಯತೆಗಳನ್ನು ಪೂರೈಸುವ ನಿಟ್ಟಿನಲ್ಲಿ ಜಯಶಂಕರ್ ಕಾರ್ಯಪ್ರವೃತ್ತರಾಗಿದ್ದಾರೆ.

25ಲಕ್ಷರೂ. ಅಂದಾಜುವೆಚ್ಚದ ಶಾಲಾವಾಹನವನ್ನು ವಿಶ್ವವಿದ್ಯಾಲಯದ ಅಧ್ಯಕ್ಷ ಹೇಮಂತಕುಮಾರ, ಕಾರ್ಯದರ್ಶಿ ಲಕ್ಷ್ಮೀನಾರಾಯಣರಾವ್ ಮತ್ತು ಖಜಾಂಚಿ ಜಯಂತಿಶರ್ಮ ಅವರಿಗಿಂದು ಹಸ್ತಾಂತರಿಸಿದ ಬ್ರಿಗೇಡ್ ಫೌಂಡೇಶನ ಅಧ್ಯಕ್ಷ ಎಂ.ಆರ್.ಜಯಶಂಕರ್, ಅಕ್ಟೋಬರ್ 2ರ ಗಾಂಧಿಜಯಂತಿಯ ವೇಳೆಗೆ ಅಭಿವೃದ್ಧಿ ಕಾರ್ಯಗಳನ್ನು ಪೂರ್ಣಗೊಳಿಸಲು ಸಲಹೆ ನೀಡಿದರು.

ಬ್ರಿಗೇಡ್ ಫೌಂಡೇಶನ ನಿರ್ದೇಶಕ ಎಂ.ಆರ್.ಗುರುಮೂರ್ತಿ, ಹಿರಿಯ ಪ್ರಾಥಮಿಕ ಶಾಲಾ ಮುಖ್ಯಶಿಕ್ಷಕಿ ಮೈತ್ರಿ, ವಿದ್ಯಾಸಂಸ್ಥೆಯ ಉಪಾಧಕ್ಷರಾದ ಚಂದ್ರಮೌಳಿ ಮತ್ತು ಶೇಷೇಗೌಡ ಸದಸ್ಯರಾದ ಪ್ರೇಮಕುಮಾರ, ಸುನಿಲಕುಮಾರ್, ವಾಸುದೇವ, ಸುಬ್ಬೇಗೌಡ ಮತ್ತಿತರರು ಸಾಕ್ಷೀಕರಿಸಿದರು.

Leave a Reply

Your email address will not be published. Required fields are marked *

ಕ್ಷಮಿಸಿ ಹಕ್ಕು ಸೌಮ್ಯ ಕಾಯ್ದಿರಿಸಲಾಗಿದೆ
ಕ್ಷಮಿಸಿ ಹಕ್ಕು ಸೌಮ್ಯ ಕಾಯ್ದಿರಿಸಲಾಗಿದೆ
ಕ್ಷಮಿಸಿ ಹಕ್ಕು ಸೌಮ್ಯ ಕಾಯ್ದಿರಿಸಲಾಗಿದೆ
ಕ್ಷಮಿಸಿ ಹಕ್ಕು ಸೌಮ್ಯ ಕಾಯ್ದಿರಿಸಲಾಗಿದೆ
ಕ್ಷಮಿಸಿ ಹಕ್ಕು ಸೌಮ್ಯ ಕಾಯ್ದಿರಿಸಲಾಗಿದೆ
ಕ್ಷಮಿಸಿ ಹಕ್ಕು ಸೌಮ್ಯ ಕಾಯ್ದಿರಿಸಲಾಗಿದೆ
ಕ್ಷಮಿಸಿ ಹಕ್ಕು ಸೌಮ್ಯ ಕಾಯ್ದಿರಿಸಲಾಗಿದೆ