ಮನೆ ಕಳವು ಪ್ರಕರಣದಲ್ಲಿ ಆರೋಪಿಗೆ 3 ವರ್ಷ ಜೈಲು ಶಿಕ್ಷೆ ಮತ್ತು ಹತ್ತು ಸಾವಿರ ದಂಡ ವಿಧಿಸಿ ಮೂಡಿಗೆರೆ ನ್ಯಾಯಾಲಯ ತೀರ್ಪು ನೀಡಿದೆ.
ದಿನಾಂಕ 23.12.2019 ರಂದು ಮೂಡಿಗೆರೆ ಪೊಲೀಸ್ ಠಾಣಾ ಸರಹದ್ದಿನಲ್ಲಿರುವ ಹಳೆಕೋಟೆ ಗ್ರಾಮದಲ್ಲಿ ಮನೆಯೊಂದರ ಹಿಂಭಾಗದ ಬಾಗಿಲನ್ನು ಕಬ್ಬಿಣದ ರಾಡ್ ನಿಂದ ಮೀಟಿ ತೆಗೆದು ಮನೆಯೊಳಗೆ ಪ್ರವೇಶಿಸಿ, ಮನೆಯಲ್ಲಿದ್ದ ರೂ. 4 ಲಕ್ಷ ಬೆಲೆ ಬಾಳುವ 134 ಗ್ರಾಂ ತೂಕದ ಚಿನ್ನಾಭರಣಗಳನ್ನು ಕಳವು ಮಾಡಿದ್ದ ಪ್ರಕರಣಕ್ಕೆ ಸಂಬಂಧಪಟ್ಟಂತೆ ಮೂಡಿಗೆರೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು.
ಸದರಿ ಪ್ರಕರಣದಲ್ಲಿ ಆರೋಪಿ ಸುರೇಶ ಎ ಬಿನ್ ಆಂಜನೇಯಪ್ಪ, 27 ವರ್ಷ ವಯಸ್ಸು, ವಾಸ ಚಂದಾಪುರ, ಆನೇಕಲ್ ತಾಲ್ಲೂಕ್, ಬೆಂಗಳೂರು ಗ್ರಾಮಾಂತರ ಜಿಲ್ಲೆ ಈತನನ್ನು ದಸ್ತಗಿರಿ ಮಾಡಿ, ಪ್ರಕರಣದ ತನಿಖೆ ಪೂರ್ಣಗೊಳಿಸಿದ ಜಗನ್ನಾಥ್ ಹೆಚ್ ಎಂ, ಪೊಲೀಸ್ ವೃತ್ತ ನಿರೀಕ್ಷಕರು, ಮೂಡಿಗೆರೆ ವೃತ್ತ ರವರು ಘನ ನ್ಯಾಯಾಲಯಕ್ಕೆ ದೋಷಾರೋಪನಾ ಪಟ್ಟಿಯನ್ನು ಸಲ್ಲಿಸಿದ್ದರು.
ಸದರಿ ಪ್ರಕರಣದಲ್ಲಿ ಪ್ರಧಾನ ಸಿ.ಜೆ. ಮತ್ತು ಜೆ.ಎಂ.ಎಫ್.ಸಿ. ನ್ಯಾಯಾಲಯ, ಮೂಡಿಗೆರೆ ಆರೋಪಿಗೆ 3 ವರ್ಷ ಜೈಲು ಶಿಕ್ಷೆ ಹಾಗೂ ರೂ.10,000.00 ದಂಡ ವಿಧಿಸಿ ದಿನಾಂಕ 13.06.2025 ರಂದು ತೀರ್ಪು ನೀಡಿರುತ್ತದೆ.
ಪ್ರಧಾನ ಸಹಾಯಕ ಸರ್ಕಾರಿ ಅಭಿಯೋಜಕರಾದ ಶ್ರೀಮತಿ, ರೂಪ ಟಿ ರವರು ನ್ಯಾಯಾಲಯದಲ್ಲಿ ವಾದ ಮಂಡಿಸಿರುತ್ತಾರೆ. ಪ್ರಕರಣದ ಕೋರ್ಟ್ ಮಾನಿಟರಿಂಗ್ ಅನ್ನು ಶ್ರೀನಾಥ್ ರೆಡ್ಡಿ, ಪಿ.ಎಸ್.ಐ. ಮೂಡಿಗೆರೆ ಪೊಲೀಸ್ ಠಾಣೆ, ಕೋರ್ಟ್ ಕರ್ತವ್ಯವನ್ನು ಸಂತೋಷ್ ಕುಮಾರ್ ಹೆಚ್. ಎಲ್, ಸಿ.ಪಿ.ಸಿ. ಮತ್ತು ಪ್ರೋಸೆಸ್ ಕರ್ತವ್ಯವನ್ನು ಜಗದೀಶ ಎಸ್ ಜಿ, ಸಿ.ಹೆಚ್.ಸಿ. ಮತ್ತು ಮಹೇಂದ್ರ, ಸಿ.ಪಿ.ಸಿ. ರವರು ನಿರ್ವಹಿಸಿರುತ್ತಾರೆ.
ಪೊಲೀಸ್ ಅಧಿಕಾರಿ ಸಿಬ್ಬಂದಿಗಳು ಮತ್ತು ಪ್ರಧಾನ ಸಹಾಯಕ ಸರ್ಕಾರಿ ಅಭಿಯೋಜಕರಿಗೆ ಚಿಕ್ಕಮಗಳೂರು ಪೊಲೀಸ್ ಅಧೀಕ್ಷಕರವರು ಶ್ಲಾಘನೆ ವ್ಯಕ್ತಪಡಿಸಿದ್ದಾರೆ.



