kaandya 1

 

 

ಶ್ರೀ ಕ್ಷೇತ್ರ ಧರ್ಮಸ್ಥಳ ಜನಜಾಗೃತಿ ವೇದಿಕೆಯಿಂದ ವತಿಯಿಂದ 1935ನೆ ಮದ್ಯವರ್ಜನ ಶಿಬಿರದ ಸಮಾರೋಪ ಕಾರ್ಯಕ್ರಮವು ಚಿಕ್ಕಮಗಳೂರು ತಾಲೂಕು ಖಾಂಡ್ಯ ಕ್ಷೇತ್ರದಲ್ಲಿ ನಡೆಯಿತು.

ಕಾರ್ಯಕ್ರಮದಲ್ಲಿ ದಿಕ್ಸೂಚಿ ಭಾಷಣ ಮಾಡಿದ ಶ್ರೀ ಧರ್ಮಸ್ಥಳ ಮಂಜುನಾಥೇಶ್ವರ ಧರ್ಮೋತ್ತನ ಟ್ರಸ್ಟಿನ ಟ್ರಸ್ಟಿಯಾದ ಪ್ರಶಾಂತ್ ಚಿಪ್ರಗುತ್ತಿ ಯವರು ಮಾತನಾಡುತ್ತಾ, ಈಗ ಜಗತ್ತಿನಲ್ಲಿ ಯುದ್ಧಗಳು ನಡೆಯುತ್ತಿದೆ. ತಮ್ಮ ತಮ್ಮ ಶತ್ರುಗಳನ್ನ ನಾಶ ಮಾಡುವಂಥ ಕೆಲಸದಲ್ಲಿ ತೊಡಗಿದ್ದಾರೆ. ನಮ್ಮ ನಿಜವಾದ ಶತ್ರು ನಮ್ಮ ಒಳಗೆ ಇರುವ ಮಾದಕ ವಸ್ತುಗಳು ಹಾಗೂ ಮಾದಕ ವಿಷಯಗಳು.  ನಮ್ಮ ಮನಸ್ಸು ಬುದ್ದಿ ದೇಹದ ಒಳಗಿನ ಶತ್ರುಗಳನ್ನು ನಾವು ಮೊದಲು ಒಳ್ಳೆಯ ಸಂಸ್ಕಾರ ಮೌಲ್ಯಗಳ ಅಸ್ತ್ರದ ಮೂಲಕ ಯುದ್ಧ ಮಾಡಿ ನಾಶ ಮಾಡಬೇಕಾಗಿದೆ. ಹೊರಗಿನ ಶತ್ರು ಗಿಂತ ನಮ್ಮ ಒಳಗೆ ಇರುವ ಶತ್ರುವೆ ಹೆಚ್ಚು ಅಪಾಯಕಾರಿ ಅದನ್ನು ನಾಶ ಮಾಡಬೇಕೆಂದು ಮದ್ಯ ಹಾಗೂ ಮಾದಕ ವಸ್ತುಗಳ ವ್ಯಾಸನಿಗಳಿಗೆ ಕರೆ ನೀಡಿದರು.

ಪ್ರಾದೇಶಿಕ ನಿರ್ದೇಶಕರಾದ ಶ್ರೀಮತಿ ಗೀತಾ ರವರು ಮಾತನಾಡಿ ಒಳ್ಳೆಯ ವ್ಯಕ್ತಿಗಳ ಸಹವಾಸದಿಂದ ಒಳ್ಳೆಯ ಸಂಸ್ಕಾರಗಳು ಬರುತ್ತದೆ, ತಾವುಗಳು ಒಳ್ಳೆಯ ಸಂಸ್ಕಾರವಂತರ ಸಹವಾಸ ಮಾಡಬೇಕೆಂದು ಕರೆ ನೀಡಿದರು.

ಮದ್ಯವರ್ಜನ ಶಿಬಿರದ ವ್ಯವಸ್ಥಾಪನ ಸಮಿತಿಯ ಅಧ್ಯಕ್ಷರಾದ ಬಿ.ಎಸ್. ರತ್ನಾಕರ್ ಅವರು ಮಾತನಾಡಿ ಶ್ರೀ ಕ್ಷೇತ್ರ ಧರ್ಮಸ್ಥಳ ಸಂಸ್ಥೆಯು ಮನುಕುಲಕ್ಕೆ ಮಾಡುತ್ತಿರುವ ಉಪಕಾರಗಳ ಬಗ್ಗೆ ಸ್ಮರಿಸಿ ಈ ಶಿಬಿರವನ್ನು ಯಶಸ್ವಿಗೊಳಿಸಲು ಸಹಕಾರಿ ಹಿಡಿದ ಎಲ್ಲರಿಗೂ ಕೃತಜ್ಞತೆಗಳನ್ನು ಸಲ್ಲಿಸಿದರು.

ಕಾರ್ಯಕ್ರಮದಲ್ಲಿ ಯೋಜನಾಧಿಕಾರಿ ಸುಧೀರ್ ಜೈನ್, ವಿಪತ್ತು ತಂಡದ ಚಂದ್ರಶೇಖರ್ ರೈ ಮೇಲ್ವಿಚಾರಕರಾದ ಸುರೇಶ್ ಹಾಗೂ ಇತರರು ಇದ್ದರು. ಶಿಬಿರದಲ್ಲಿ ಮದ್ಯಸೇವನೆ ಸೇರಿದಂತೆ ವಿವಿಧ ರೀತಿಯ ಮಾದಕ ವ್ಯಸನಗಳಿಂದ ಬಳಲುತ್ತಿದ್ದ ಅನೇಕ ಮಂದಿ ಭಾಗವಹಿಸಿ  ಮಾದಕ ವ್ಯಸನದಿಂದ ದೂರವಿರುವ ಸಂಕಲ್ಪ ಮಾಡಿದರು.

Leave a Reply

Your email address will not be published. Required fields are marked *

ಕ್ಷಮಿಸಿ ಹಕ್ಕು ಸೌಮ್ಯ ಕಾಯ್ದಿರಿಸಲಾಗಿದೆ
ಕ್ಷಮಿಸಿ ಹಕ್ಕು ಸೌಮ್ಯ ಕಾಯ್ದಿರಿಸಲಾಗಿದೆ
ಕ್ಷಮಿಸಿ ಹಕ್ಕು ಸೌಮ್ಯ ಕಾಯ್ದಿರಿಸಲಾಗಿದೆ
ಕ್ಷಮಿಸಿ ಹಕ್ಕು ಸೌಮ್ಯ ಕಾಯ್ದಿರಿಸಲಾಗಿದೆ
ಕ್ಷಮಿಸಿ ಹಕ್ಕು ಸೌಮ್ಯ ಕಾಯ್ದಿರಿಸಲಾಗಿದೆ
ಕ್ಷಮಿಸಿ ಹಕ್ಕು ಸೌಮ್ಯ ಕಾಯ್ದಿರಿಸಲಾಗಿದೆ
ಕ್ಷಮಿಸಿ ಹಕ್ಕು ಸೌಮ್ಯ ಕಾಯ್ದಿರಿಸಲಾಗಿದೆ