ತೋಟಗಾರಿಕೆ ಇಲಾಖೆವತಿಯಿಂದ 2025-26ನೇ ಸಾಲಿನ MIDH ಯೋಜನೆಯಡಿ ಅಡಿಕೆ ಎಲೆ ಚುಕ್ಕೆ ರೋಗವನ್ನು ನಿಯಂತ್ರಣ ಮಾಡುವ ಔಷಧಿಯನ್ನು ಖರೀದಿಸಿದ್ದಕ್ಕಾಗಿ ಶೇಕಡಾ.30 ರಷ್ಟು ಸಹಾಯಧನವನ್ನು ನೀಡಲಾಗುವುದು ಎಂದು ತೋಟಗಾರಿಕಾ ಇಲಾಖೆ ಪ್ರಕಟಣೆಯಲ್ಲಿ ತಿಳಿಸಿದೆ.
ಈ ಬಗ್ಗೆ ಮೂಡಿಗೆರೆ ಹಿರಿಯ ಸಹಾಯಕ ತೋಟಗಾರಿಕಾ ನಿರ್ದೇಶಕರ ಕಛೇರಿಯಿಂದ ಪ್ರಕಟಣೆ ಹೊರಡಿಸಲಾಗಿದೆ. ಮೂಡಿಗೆರೆ ಹಾಗೂ ಕಳಸ ತಾಲ್ಲೂಕಿನ ರೈತರು ಈ ಯೋಜನೆಯಡಿ ಅರ್ಜಿ ಸಲ್ಲಿಸಿ ಸದುಪಯೋಗಪಡಿಸಕೊಳ್ಳಲು ಕೋರಲಾಗಿದೆ.
ಈ ಸಂಬಂಧ ರೈತರು ಖರೀದಿಸಿದ ಮೈಲುತುತ್ತಾ/ಪ್ರೋಪಿಕೊನಜೋಲ್/ ಹೆಕ್ಕಕೊನಜೋಲ್ /ಸಾಫ್ ಇತರ ಶಿಫಾರಸ್ಸು ಮಾಡಿದ ಔಷಧಿಯನ್ನು ಖರೀದಿಸಹುದಾಗಿರುತ್ತದೆ. ಈ ಕಾರ್ಯಕ್ರಮಕ್ಕೆ ಅರ್ಜಿಗಳನ್ನು ದಿನಾಂಕ: 23-06-2025 ರಿಂದ 08-07-2025 ರವರೆಗೆ ಪಡೆದು ದಿನಾಂಕ:09-07-2025ರ ಒಳಗಾಗಿ ಕಛೇರಿಗೆ ಸಲ್ಲಿಸಲು ಕೋರಿದೆ.
ಬೇಕಾಗುವ ದಾಖಲಾತಿಗಳು:
1) ಅರ್ಜಿ (ಕಛೇರಿಯಿಂದ ನೀಡಲಾಗುವುದು)
2) ಪಹಣಿ (RTC) ಪ್ರತಿ (ಪಹಣಿಯಲ್ಲಿ.. ಅಡಿಕೆ ಬೆಳೆ ನಮೂದಾಗದಿದ್ದಲಿ, ಬೆಳೆ ದೃಢೀಕರಣ)
3) ಆಧಾರ್ ಕಾರ್ಡ್ ಪ್ರತಿ
4) ಬ್ಯಾಂಕ್ ಪಾಸ್ ಬುಕ್ ಪ್ರತಿ
5) GST ನಮೂದಾಗಿರುವ ಔಷಧಿ ಖರೀದಿಸಿದ ಬಿಲ್ (1 ಎಕರೆಗೆ ರೂ.2000/- ಮೊತ್ತದ ಬಿಲ್)
6) ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡದ ಫಲಾನುಭವಿಗಳು ಇತ್ತೀಚಿನ RD ನಂಬರ್ ಇರುವ ಜಾತಿ ಪ್ರಮಾಣ ಪತ್ರದ ನಕಲನ್ನು ಲಗತ್ತಿಸಬೇಕು
7) ಜಂಟಿ ಖಾತೆಯಿದ್ದಲಿ ರೂ. 100/-ಗಳ ಬಾಂಡ್ ಪೇಪರ್ ಒಪ್ಪಿಗೆ ಪತ್ರ ಸಲ್ಲಿಸಲಬೇಕೆಂದು ಪ್ರಕಟಣೆಯಲ್ಲಿ ತಿಳಿಸಲಾಗಿದೆ.
ಅರ್ಜಿಗಳನ್ನು ಕಚೇರಿಯ ಕೆಲಸದ ಅವಧಿಯಲ್ಲಿ ಮೂಡಿಗೆರೆ ಹಿರಿಯ ಸಹಾಯಕ ತೋಟಗಾರಿಕಾ ನಿರ್ದೇಶಕರ ಕಛೇರಿಯಲ್ಲಿ ಪಡೆಯಬಹುದಾಗಿರುತ್ತದೆ ಎಂದು ತಿಳಿಸಲಾಗಿದೆ.



