25Mudigere1A

 

 

ಮೂಡಿಗೆರೆ ಪಟ್ಟಣದ ತಾ.ಪಂ. ಸಭಾಂಗಣದಲ್ಲಿ ಬುಧವಾರ ಶಾಸಕಿ ನಯನಾ ಮೋಟಮ್ಮ ಅಧ್ಯಕ್ಷತೆಯಲ್ಲಿ ತ್ರೈಮಾಸಿಕ ಕೆಡಿಪಿ ಸಭೆ ನಡೆಯಿತು. ಸಭೆಯಲ್ಲಿ ಜೆಜೆಎಂ ಕಾಮಗಾರಿ, ಸಮುದಾಯಭವನ, ವಿದ್ಯುತ್, ಮಳೆಯಿಂದ ಕುಸಿತಗೊಂಡ ರಸ್ತೆ, ಮನೆ ಸೇರಿದಂತೆ ವಿವಿಧ ವಿಚಾರ ಬಗ್ಗೆ ಗಂಭೀರ ಚರ್ಚೆ ನಡೆಯಿತು.

ಆರಂಭದಲ್ಲಿ ವಿವಿಧ ಇಲಾಖೆ ಅಧಿಕಾರಿಗಳು ತಮ್ಮ ಇಲಾಖೆ ವ್ಯಾಪ್ತಿಯ ಪ್ರಗತಿ ಹಾಗೂ ಅಭಿವೃದ್ಧಿ ಕಾಮಗಾರಿ ಬಗ್ಗೆ ಮಾಹಿತಿ ನೀಡಿದರು. ಅಲ್ಲದೇ ಸಭೆಯಲ್ಲಿದ್ದ ನಾಮ ಕೆಡಿಪಿ ನಿರ್ದೇಶನ ಸದಸ್ಯರು, ಜೆಜೆಎಂ ಕಾಮಗಾರಿಯಿಂದ ಯಾರಿಗೂ ಉಪಯೋಗವಾಗುತ್ತಿಲ್ಲ. ಪ್ರಭಾವಿ ಮನೆಗಳಿಗೆ ನಲ್ಲಿ ಹಾಕಿಸಿ 50ರಿಂದ 100 ಮನೆಗಳಿರುವ ಗ್ರಾಮಗಳಲ್ಲಿ ಜೆಜೆಎಂ ಪೈಪ್ ಅಳವಡಿಸಿದ್ದರೂ ನಲ್ಲಿ ಹಾಕದೇ ಹಾಗೆಯೇ ಬಿಡಲಾಗಿದೆ. ಶಿಕ್ಷಣ ಇಲಾಖೆ ಸಿಆರ್‍ಪಿಗಳು ಒಂದು ಗಂಟೆ ಶಾಲೆಗೆ ಭೇಟಿ ನೀಡಿ ನಂತರ ಪಟ್ಟಣದಲ್ಲಿ ಓಡಾಡಿಕೊಂಡಿರುತ್ತಾರೆ. ಇದನ್ನು ಕೆಲ ಶಿಕ್ಷಕರು ಕೂಡ ಮಾಡುತ್ತಿದ್ದಾರೆ. ಇವರಿಂದ ಮಕ್ಕಳ ಶಿಕ್ಷಣಕ್ಕೆ ತೊಡಕುಂಟಾಗುತ್ತಿದೆ ಎಂದು ವಿವಿಧ ಇಲಾಖೆಗಳ ಬಗ್ಗೆ ಸಭೆಯಲ್ಲಿ ಆರೋಪ ಮಾಡಿದರು. ಅಲ್ಲದೇ ಸಭೆಯಲ್ಲಿ ಕೆಲ ಅಧಿಕಾರಿಗಳು ಸರಿಯಾದ ಮಾಹಿತಿ ನೀಡದೇ ಹಾಗೂ ಕಾಮಗಾರಿ ವಿಳಂಬ ಮಾಡಿರುವ ಬಗ್ಗೆ ಶಾಸಕರ ಗಮನಕ್ಕೆ ತಂದರು.

ಇದರಿಂದ ಕೆಂಡಾಮಂಡಲರಾದ ಶಾಸಕಿ ನಯನಾ ಮೋಟಮ್ಮ ಮಾತನಾಡಿ, ಮೂಲರಹಳ್ಳಿ ಕಾಲುಸಂಕ ಕುಸಿತಗೊಳ್ಳಲು ಸಿದ್ದವಾಗಿದೆ. ಅದು ತುಂಡಾದರೆ ಅನೇಕ ಗ್ರಾಮಗಳ ಸಂಪರ್ಕ ಕಡಿತಗೊಳ್ಳುತ್ತದೆ. ಜಾಣಿಗೆ ಹಾರ್ಮಕ್ಕಿ ರಸ್ತೆ ಕುಸಿದಿದ್ದು, 30 ಮನೆಗಳಿಗೆ ಸಂಪರ್ಕ ಇಲ್ಲದಂತಾಗಿದೆ. ಬಾಳೂರು ಚನ್ನಡ್ಲು ಸಮೀಪ ರಸ್ತೆ ಕುಸಿದಿದೆ. ಕಾರ್ಬೈಲ್ ರಸ್ತೆಗೆ ಹಾಕಿದ್ದ ಪ್ಯಾಚ್ ಒಂದೇ ಮಳೆಗೆ ಕಿತ್ತುಹೋಗಿದೆ. ಇದೇ ರೀತಿಯಲ್ಲಿ ಮಳೆಯಿಂದ ಹಾನಿಯಾದ ರಸ್ತೆ, ಮನೆಗಳು ಸೇರಿದಂತೆ ಅನೇಕ ಸ್ಥಳಕ್ಕೆ ಭೇಟಿ ನೀಡಿ ಕೂಡಲೇ ದುರಸ್ತಿಪಡಿಸಲು ತಿಳಿಸಿದ್ದರೂ ಯಾವ ಕೆಲಸ ಕೂಡ ಮಾಡಿಲ್ಲ. ತಾನು ಬೇರೆ ಎಂಎಲ್‍ಎ ತರ ಅಲ್ಲ. ಕೆಲಸ ಮುಗಿಸಿ ಜನರಿಗೆ ತೋರಿಸಬೇಕಿದೆ ಎಂದು ಅಧಿಕಾರಿಗಳಿಗೆ ತರಾಟೆಗೆ ತೆಗೆದುಕೊಂಡರು.

ಈಗಿರುವ ಅನುದಾನದಲ್ಲಿ ನಡೆಯಬೇಕಿದ್ದ ಜೆಜೆಎಂ ಕಾಮಗಾರಿ ವಿಳಂಬ ಮಾಡದ ಗುತ್ತಿಗೆದಾರರಿಗೆ ನೋಟೀಸು ಕಳಿಸಿ ಬೇರೆ ಗುತ್ತಿಗೆದಾರರೊಂದಿಗೆ ಕಾಮಗಾರಿ ಪೂರ್ಣಗೊಳಿಸಬೇಕು. ಬಾಕಿ ಕಾಮಗಾರಿಗೆ ಸರಕಾರದಿಂದ ಹೆಚ್ಚುವರಿ ಅನುದಾನದ ತರಲು ಶ್ರಮಿಸುತ್ತೇನೆ. ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆಯಿಂದ ಟೆಂಡರ್ ಆಗಿದ್ದ 4 ಹೊಸ ಸಮುದಾಯಭವನ ಕಾಮಗಾರಿ ಶೀಘ್ರದಲ್ಲೇ ಪ್ರಾರಂಭಿಸಬೇಕು. 22 ಸಮುದಾಯ ಭವನ ದುರಸ್ತಿ ಕಾರ್ಯ ಕೂಡ ಮುಗಿಸಬೇಕು. ಸುಂಕಸಾಲೆ ಟ್ರಾನ್ಸ್‍ಫಾರ್ಮರ್ ಹಾಳಾಗಿ ಒಂದೂವರೆ ವರ್ಷ ಕಳೆದಿದೆ. ಇಂದಿಗೂ ಸರಿಪಡಿಸಿಲ್ಲ. ಕೃಷಿ ಮತ್ತು ತೋಟಗಾರಿಕೆ ಇಲಾಖೆಯಲ್ಲಿ ಸಿಗುವ ಸೌಲಭ್ಯದ ಬಗ್ಗೆ ರೈತರಿಗೆ ತಿಳಿಯುವಂತೆ ಹೆಚ್ಚಿನ ಪ್ರಚಾರ ನೀಡಬೇಕು. ಮಳೆಯಿಂದ ಅವಘಡ ಸಂಭವಿಸುವ ಶಾಲೆಗಳ ಪಟ್ಟಿ ತಯಾರಿಸಿ ಕೂಡಲೇ ವರದಿ ಸಲ್ಲಿಸಬೇಕು. ಶಿಕ್ಷಣ ಇಲಾಖೆಯ ಸಿಆರ್‍ಪಿಗಳು ಹಾಗೂ ಕೆಲ ಶಿಕ್ಷಕರ ಮೇಲೆ ಯಾವುದೇ ದೂರು ಬರದಂತೆ ಎಚ್ಚರವಹಿಸಬೇಕೆಂದು ಸಂಬಂಧಿಸಿದ ಅಧಿಕಾರಿಗಳಿಗೆ ಸೂಚನೆ ನೀಡಿದರು.

ತಹಸೀಲ್ದಾರ್ ರಾಜಶೇಖರ್ ಮೂರ್ತಿ, ತಾ.ಪಂ. ಇಒ ದಯಾವತಿ, ಕೆಡಿಪಿ ಅಧಿಕಾರಿ ಮಹೇಶ್‍ಕುಮಾರ್ ಸೇರಿದಂತೆ ಕೆಡಿಪಿ ನಾಮನಿರ್ದೇಶನ ಸದಸ್ಯರು ಹಾಗೂ ವಿವಿಧ ಇಲಾಖೆ ಅಧಿಕಾರಿಗಳು ಉಪಸ್ಥಿತರಿದ್ದರು.

Leave a Reply

Your email address will not be published. Required fields are marked *

ಕ್ಷಮಿಸಿ ಹಕ್ಕು ಸೌಮ್ಯ ಕಾಯ್ದಿರಿಸಲಾಗಿದೆ
ಕ್ಷಮಿಸಿ ಹಕ್ಕು ಸೌಮ್ಯ ಕಾಯ್ದಿರಿಸಲಾಗಿದೆ
ಕ್ಷಮಿಸಿ ಹಕ್ಕು ಸೌಮ್ಯ ಕಾಯ್ದಿರಿಸಲಾಗಿದೆ
ಕ್ಷಮಿಸಿ ಹಕ್ಕು ಸೌಮ್ಯ ಕಾಯ್ದಿರಿಸಲಾಗಿದೆ
ಕ್ಷಮಿಸಿ ಹಕ್ಕು ಸೌಮ್ಯ ಕಾಯ್ದಿರಿಸಲಾಗಿದೆ
ಕ್ಷಮಿಸಿ ಹಕ್ಕು ಸೌಮ್ಯ ಕಾಯ್ದಿರಿಸಲಾಗಿದೆ
ಕ್ಷಮಿಸಿ ಹಕ್ಕು ಸೌಮ್ಯ ಕಾಯ್ದಿರಿಸಲಾಗಿದೆ