ವಿದ್ಯಾರ್ಥಿಗಳು ಉನ್ನತ ಮಟ್ಟದಲ್ಲಿ ಸಾಧನೆ ಹಾಗೂ ಯಶಸ್ಸು ಕಾಣಲು ಪ್ರತಿಭಾ ಪುರಸ್ಕಾರದಂತಹ ಕಾರ್ಯಕ್ರಮಗಳು ಹೆಚ್ಚಾಗಿ ನಡೆಯಬೇಕೆಂದು ಮೂಡಿಗೆರೆ ತಾಲ್ಲೂಕು ಗ್ಯಾರಂಟಿ ಅನುಷ್ಟಾನ ಸಮಿತಿ ಅಧ್ಯಕ್ಷ ಬಿ.ಎಸ್.ಜಯರಾಂ ಹೇಳಿದರು.
ಅವರು ಮಂಗಳವಾರ ಸಂಜೆ ಮೂಡಿಗೆರೆ ಪಟ್ಟಣದ ತಾ.ಪಂ. ಸಭಾಂಗಣದಲ್ಲಿ ವಿಎಂಪಿಎಂ ಟ್ರಸ್ಟ್ ವತಿಯಿಂದ ಏರ್ಪಡಿಸಿದ್ದ ಪ್ರತಿಭಾ ಪುರಸ್ಕಾರ ಹಾಗೂ ಬಡ ವಿದ್ಯಾರ್ಥಿಗಳಿಗೆ ವಿದ್ಯಾಭ್ಯಾಸ ಪರಿಕರ ವಿತರಣೆ ಕಾರ್ಯಕ್ರಮದಲ್ಲಿ ಮಾತನಾಡಿದರು.
ಪ್ರಸಕ್ತ ಕಾಲದಲ್ಲಿ ವಾಹನಗಳ ಸಂಖ್ಯೆ ಅಧಿಕಗೊಳ್ಳುತ್ತಿದ್ದು, ಪ್ಲಾಸ್ಟಿಕ್ ಬಳಕೆ ಕೂಡ ಅತಿಯಾಗಿದೆ. ಇದರಿಂದ ಪರಿಸರದ ಮೇಲೆ ಬಾರಿ ಪರಿಣಾಮ ಬೀರುತ್ತಿದೆ. ಈ ಬಗ್ಗೆ ವಿದ್ಯಾರ್ಥಿಗಳಲ್ಲಿ ಜಾಗೃತಿ ಮೂಡಿಸುವ ಅವಶ್ಯಕತೆಯಿದೆ ಎಂದ ಅವರು, ಪರಿಸರ ನಾಶದಿಂದ ಜೀವ ಸಂಕುಲಗಳು ನಶಿಸಿಹೋಗುವ ಜತೆಗೆ ಮುಖ್ಯವಾಗಿ ಜೇನು ನೋಣಗಳ ಸಂಖ್ಯೆ ಕಡಿಮೆಯಾಗಿದೆ. ಇದರಿಂದ ಮುಂದಿನ ಆಹಾರ ಉತ್ಪನ್ನಕ್ಕೆ ಬಾರಿ ಕಂಟಕ ಎದುರಾಗಲಿದೆ ಎಂದು ಹೇಳಿದರು.
ತಹಸೀಲ್ದಾರ್ ರಾಜಶೇಖರ್ ಮೂರ್ತಿ ಮಾತನಾಡಿ, ಇಂದಿನ ತಂತ್ರಜ್ಞಾನ ಯುಗದಲ್ಲಿ ಶೈಕ್ಷಣಿಕ ಆಂದೋಲನ ಆಗಬೇಕಿದೆ. ಮೊಬೈಲ್ ಬಳಕೆ ಅವಶ್ಯಕತೆಗೆ ಮಾತ್ರ ಉಪಯೋಗಿಸಿ ಪುಸ್ತಕ ಓದುವ ಅಭ್ಯಾಸ ಮಾಡಿಕೊಳ್ಳಬೇಕು. ಆಗ ಮಾತ್ರ ವಿದ್ಯಾರ್ಥಿಗಳು ಮುಂದಿನ ಉಜ್ವಲ ಭವಿಷ್ಯ ರೂಪಿಸಿಕೊಳ್ಳಲು ಸಾಧ್ಯವಾಗುತ್ತದೆ ಎಂದು ಹೇಳಿದರು.
ಕಾರ್ಯಕ್ರಮದ ಅಧ್ಯಕ್ಷತೆಯನ್ನು ಟ್ರಸ್ಟ್‍ನ ಅಧ್ಯಕ್ಷ ವಿ.ಪಿ.ನಾರಾಯಣ್ ವಹಿಸಿದ್ದರು. ಕಸಾಪ ಅಧ್ಯಕ್ಷ ಡಿ.ಕೆ.ಲಕ್ಷ್ಮಣ್‍ಗೌಡ, ಸಾಹಿತಿ ಡಿ.ಎಂ.ಮಂಜುನಾಥಸ್ವಾಮಿ, ಪ್ರಾದ್ಯಾಪಕ ಡಾ.ಟಿ.ಎನ್.ಕೇಶವಮೂರ್ತಿ, ಕೃಷಿಕರ ಚಿಂತಕ ಬಿ.ಎಲ್.ಪ್ರಭಾಕರ್, ಪತ್ರಕರ್ತರ ಸಂಘದ ಅಧ್ಯಕ್ಷ ಪ್ರಸನ್ನಕುಮಾರ್, ಬಿ.ಎಲ್.ಪ್ರಭಾಕರ್, ಮುರುಳೇಶಪ್ಪ, ಭಾಗ್ಯ ನಾರಾಯಣ್, ಎಚ್.ವಿ.ಮಹೇಶ್, ಕವಿತಾ ಲೋಕೇಶ್, ಹೊರಟಿ ರಘು, ಎಂ.ಎಸ್.ನಾಗರಾಜ್ ಮತ್ತಿತರರಿದ್ದರು.



