27Mudigere2A

 

 

ಬೆಂಗಳೂರು ಮಹಾನಗರವನ್ನು ಸುಂದರ ನಗರವನ್ನಾಗಿ ಹುಟ್ಟು ಹಾಕಿ ವಿಶ್ವವೇ ತಿರುಗಿ ನೋಡುವಂತೆ ಮಾಡಿದ ನಾಡಪ್ರಭು ಕೆಂಪೇಗೌಡ ಅವರ ಸಾಮಾಜಿಕ ಪ್ರಜ್ಷೆ, ದಕ್ಷ ಹಾಗೂ ಸಮರ್ಥ ಆಡಳಿತವನ್ನು ಎಷ್ಟು ಕೊಂಡಾಡಿದರೂ ಸಾಲದು, ಅದು ವಿಶ್ವಕ್ಕೆ ಮಾದರಿಯಾದುದು ಎಂದು ಬಾಣಾವರದ ಸರಕಾರಿ ಪ್ರಥಮ ದರ್ಜೆ ಕಾಲೇಜು ಪ್ರಾಂಶುಪಾಲ ಡಾ.ದೊರೇಶ್ ಹೇಳಿದರು.

ಅವರು ಶುಕ್ರವಾರ ಮೂಡಿಗೆರೆ ಪಟ್ಟಣದ ಡಿಎಸ್‍ಬಿಜಿ ಕಾಲೇಜಿನಲ್ಲಿ ತಾಲೂಕು ಆಡಳಿತದಿಂದ ಏರ್ಪಡಿಸಿದ್ದ ನಾಡಪ್ರಭು ಕೆಂಪೇಗೌಡ ಅವರ 516 ನೇ ಜಯಂತಿ ಕಾರ್ಯಕ್ರಮದಲ್ಲಿ ಮಾತನಾಡಿದರು.

ಕೆಂಪೇಗೌಡರು ಅನ್ನ, ಭದ್ರತೆ, ಆಶ್ರಯ ಮುಂದಿಟ್ಟುಕೊಂಡು ಬೆಂಗಳೂರು ನಗರ ನಿರ್ಮಾಣ ಮಾಡಿದರು. ಅಲ್ಲದೇ ಎಲ್ಲಾ ಸಮುದಾಯಕ್ಕೆ ವೃತ್ತಿ ಆಧಾರಿವಾಗಿ ಪೇಟೆ ಹಂಚಿಕೆ ಮಾಡಿಕೊಟ್ಟಿದರು. ಬೆಂಗಳೂರು ನಿರ್ಮಾಣಕ್ಕೆ ಮಾಗಡಿ, ದೊಡ್ಡಬಳ್ಳಾಪುರ, ಚಿಕ್ಕಬಳ್ಳಾಪುರ, ರಾಮನಗರ, ಕನಕಪುರ, ಯಲಹಂಕ ಭಾಗದ ರೈತಾಪಿ ಜನ ಸಹಕಾರ ನೀಡಿದ್ದರು. ಆದರೆ ಪ್ರಸಕ್ತ ಕಾಲದಲ್ಲಿ ಜನರಿಗೆ ಇತಿಹಾಸ ಬೇಕಾಗದಿರುವುದು ದುರಂತ. ಡಾ.ಬಿ.ಆರ್.ಅಂಬೇಡ್ಕರ್, ಬಸವಣ್ಣ, ಬುದ್ಧ, ಕೆಂಪೇಗೌಡರವರಂತಹ ಮಹಾನ್ ರಾಷ್ಟ್ರ ನಾಯಕರು ಯಾವುದೇ ಸಮುದಾಯದ ಆಸ್ತಿಯಲ್ಲ. ಈ ಬಗ್ಗೆ ಜನರಲ್ಲಿ ಜಾಗೃತಿ ಮೂಡಿಸಬೇಕಿದೆ ಎಂದು ಹೇಳಿದರು.

ತಹಸೀಲ್ದಾರ್ ರಾಜಶೇಖರ್ ಮೂರ್ತಿ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿ, ಕೆಂಪೇಗೌಡ ಅವರ ದೂರದೃಷ್ಟಿಯಿಂದ ಬೆಂಗಳೂರು ನಗರವಿಂದು ರಾಜಧಾನಿಯಾಗಿ, ಸಿಲಿಕಾನ್ ಸಿಟಿಯಾಗಿ, ಉದ್ಯಾನ ನಗರವಾಗಿ ಜಗತ್‍ಪ್ರಸಿದ್ಧ ನಗರವಾಗಿ ಬೆಳೆಯಲು ಸಾಧ್ಯವಾಗಿದ್ದು, ವಿಶ್ವದಲ್ಲಿಯೇ ಮನ್ನಣೆ ಗಳಿಸಿದೆ. ಅವರ ಸೇವೆ ಹಾಗೂ ಕಾರ್ಯಪ್ರವೃತ್ತಿಯನ್ನು ಗೌರವಿಸುವುದು ಪ್ರತಿಯೊಬ್ಬ ನಾಗರೀಕರ ಕರ್ತವ್ಯವಾಗಿದೆ ಎಂದು ಹೇಳಿದರು.

ಪ.ಪಂ. ಉಪಾಧ್ಯಕ್ಷ ರಮೇಶ್ ಹೊಸ್ಕೆರೆ ಕಾರ್ಯಕ್ರಮ ಉದ್ಘಾಟಿಸಿದರು. ಪ.ಪಂ. ಸದಸ್ಯರಾದ ಆಶಾ ಮೋಹನ್, ಪಿ.ಜಿ. ಅನುಕುಮಾರ್, ಗೀತಾ ಅಜಿತ್, ಮನೋಜ್, ಕೆಜಿಎಫ್ ಅಧ್ಯಕ್ಷ ಹಳಸೆ ಶಿವಣ್ಣ, ಮೂಡಿಗೆರೆ ಬೆಳೆಗಾರರ ಸಂಘದ ಅಧ್ಯಕ್ಷ ಬಿ.ಆರ್.ಭಾಲಕೃಷ್ಣ, ಜಿಲ್ಲಾ ಒಕ್ಕಲಿಗರ ಸಂಘದ ಪ್ರಧಾನ ಕಾರ್ಯದರ್ಶಿ ಪ್ರದೀಪ್ ಮುಗ್ರಹಳ್ಳಿ, ನಿರ್ದೇಶಕರಾದ ಪವಿತ್ರ ರತೀಶ್ ಹಳೇಕೋಟೆ , ಕೆಂಪೇಗೌಡ ಒಕ್ಕಲಿಗರ ವೇದಿಕೆಯ ಅಧ್ಯಕ್ಷ ಬ್ರಿಜೇಶ್ ಕಡಿದಾಳು, ಹಿರಿಯ ಸಹಕಾರಿ ಓ.ಎಸ್.ಗೋಪಾಲಗೌಡ, ಬಿಜೆಪಿ ತಾಲೂಕು ಅಧ್ಯಕ್ಷ ಗಜೇಂದ್ರ ಕೊಟ್ಟಿಗೆಹಾರ, ಕಸಾಪ ಅಧ್ಯಕ್ಷ ಡಿ.ಕೆ.ಲಕ್ಷ್ಮಣ್‍ಗೌಡ, ತಾಲ್ಲೂಕು ಸರ್ಕಾರಿ ನೌಕರರ ಸಂಘದ ಅಧ್ಯಕ್ಷ ನವೀನ್, ಛಲವಾದಿ ಮಹಾಸಭಾ ಅಧ್ಯಕ್ಷ ಮಂಜುನಾಥ್ ಬೆಟ್ಟಗೆರೆ,  ಪ.ಪಂ. ನಾಮನಿರ್ದೇಶನ ಸದಸ್ಯ ಶಂಕರ್ ಚಿಕ್ಕಹಳ್ಳ,  ಕೆಡಿಪಿ ಸದಸ್ಯರಾದ ಸುರೇಂದ್ರ, ಸುಧೀರ್, ರವಿ ಕುನ್ನಹಳ್ಳಿ, ಪತ್ರಕರ್ತರ ಸಂಘದ ಕಾರ್ಯದರ್ಶಿ ಪ್ರಕಾಶ್ ಬಕ್ಕಿ, ಕಾಂಗ್ರೇಸ್ ಮುಖಂಡ ಸಂಪತ್ ಬಿಳಗುಳ  ತಾ.ಪಂ. ಇಒ ದಯಾವತಿ, ಬಿಇಒ ಮೀನಾಕ್ಷಿ ಮತ್ತಿತರರಿದ್ದರು.

ಕೆಂಪೇಗೌಡ ಒಕ್ಕಲಿಗ ವೇದಿಕೆಯ ಪ್ರಧಾನ ಕಾರ್ಯದರ್ಶಿ ಪ್ರಸಾದ್ ಬಕ್ಕಿ ಕಾರ್ಯಕ್ರಮ ನಿರೂಪಿಸಿದರು. ಸುಚಿತ್ರ ಪ್ರಸನ್ನ, ಇಂಪಾ ಸವಿನ್ ಪ್ರಾರ್ಥನೆ ನೆರವೇರಿಸಿದರು. ಇದೇ ಸಂದರ್ಭದಲ್ಲಿ ಪ್ರತಿಭಾವಂತ ವಿದ್ಯಾರ್ಥಿಗಳನ್ನು ಸನ್ಮಾನಿಸಲಾಯಿತು.

Leave a Reply

Your email address will not be published. Required fields are marked *

ಕ್ಷಮಿಸಿ ಹಕ್ಕು ಸೌಮ್ಯ ಕಾಯ್ದಿರಿಸಲಾಗಿದೆ
ಕ್ಷಮಿಸಿ ಹಕ್ಕು ಸೌಮ್ಯ ಕಾಯ್ದಿರಿಸಲಾಗಿದೆ
ಕ್ಷಮಿಸಿ ಹಕ್ಕು ಸೌಮ್ಯ ಕಾಯ್ದಿರಿಸಲಾಗಿದೆ
ಕ್ಷಮಿಸಿ ಹಕ್ಕು ಸೌಮ್ಯ ಕಾಯ್ದಿರಿಸಲಾಗಿದೆ
ಕ್ಷಮಿಸಿ ಹಕ್ಕು ಸೌಮ್ಯ ಕಾಯ್ದಿರಿಸಲಾಗಿದೆ
ಕ್ಷಮಿಸಿ ಹಕ್ಕು ಸೌಮ್ಯ ಕಾಯ್ದಿರಿಸಲಾಗಿದೆ
ಕ್ಷಮಿಸಿ ಹಕ್ಕು ಸೌಮ್ಯ ಕಾಯ್ದಿರಿಸಲಾಗಿದೆ