CREATOR: gd-jpeg v1.0 (using IJG JPEG v62), quality = 82

 

 

ವಿಶ್ವಮಟ್ಟದಲ್ಲಿ ಬೆಂಗಳೂರನ್ನು ಪ್ರಗತಿಯತ್ತ ಕೊಂಡೊಯ್ಯಲು ಹಾ ಗೂ ಆಧುನಿಕ ನಗರೀಕರಣಕ್ಕೆ ಮೊಟ್ಟಮೊದಲ ಅಡಿಪಾಯ ಹಾಕಿದವರೇ ನಾಡುಪ್ರಭು ಕೆಂಪೇಗೌಡರು ಎಂ ದು ಜಿಲ್ಲಾ ಒಕ್ಕಲಿಗರ ಸಂಘದ ಅಧ್ಯಕ್ಷ ಟಿ.ರಾಜಶೇಖರ್ ಹೇಳಿದರು.

ಚಿಕ್ಕಮಗಳೂರು ನಗರದ ಜಿಲ್ಲಾ ಬಿಜೆಪಿ ಪಾಂಚಜನ್ಯ ಕಚೇರಿಯಲ್ಲಿ ಶುಕ್ರವಾರ ನಡೆದ ನಾಡುಪ್ರಭು ಶ್ರೀ ಕೆಂಪೇಗೌಡರ 516ನೇ ಜನ್ಮದಿನಾಚರಣೆ ಕಾರ್ಯಕ್ರಮದಲ್ಲಿ ಭಾಗವಹಿಸಿ ಅವರು ಮಾತನಾಡಿ ವಿಜಯನಗರ ಸಾಮ್ರಾಜ್ಯದ ಹಂಪಿಯ ವೈಭವವನ್ನು ಕಂಡು ಬೆರಗಾಗಿದ್ದ ಕೆಂಪೇಗೌಡರು ದೂರದೃಷ್ಠಿ ಯಿಂದ ನಿರ್ಮಿಸಿದ ಬೆಂಗಳೂರು ನಗರ ಕರ್ನಾಟಕ ರಾಜ್ಯದ ರಾಜಧಾನಿಯಾಗಿರುವುದಲ್ಲದೆ ಭಾರತದ ಪ್ರ ಮುಖ ನಗರಗಳಲ್ಲಿ ಒಂದಾಗುವ ಜೊತೆಗೆ ಗಾರ್ಡನ್‌ಸಿಟಿಯಾಗಿ ಪರಿವರ್ತನೆಯಾಗಿದೆ ಎಂದರು.

ರಾಜಧಾನಿಯಲ್ಲ್ಲಿ ನೂರಾರು ದೇವಾಲಯ, ಬೆಂಗಳೂರನ್ನು ನಾಲ್ಕು ದಿಕ್ಕನ್ನು ಪ್ರತಿಬಿಂಬಿಸಲು ಕೋಟೆ ಗಳ ನಿರ್ಮಾಣ, ಸರ್ವ ಜನಾಂಗದ ಅಭಿವೃಧ್ದಿ ದೃಷ್ಟಿಯಿಂದ ಆಯಾ ಸಮಾಜಕ್ಕೆ ಮೀಸಲಿರಿಸಿದ ಹೆಸರಿನಲ್ಲಿ ಬಡಾವಣೆ ಹಾಗೂ ಹದಿನೇಳಕ್ಕೂ ಹೆಚ್ಚು ಪೇಟೆಗಳ ನಿರ್ಮಾಣಕ್ಕೆ ಮೂಲವೇ ಕೆಂಪೇಗೌಡರು ಎಂದು ಬಣ್ಣಿ ಸಿದರು.

ಪ್ರಸ್ತುತ ದಿನಗಳಲ್ಲಿ ಬೆಂಗಳೂರು ಐಟಿಬಿಟಿ, ಯಾತ್ರಿಕ ನಗರೀಕರಣ ವಿಶ್ವಾದಾದ್ಯಂತ ಹೆಸರು ಸಂಪಾ ದಿಸಲು ಕೆಂಪೇಗೌಡರ ಕೊಡುಗೆ ಬಹಳಷ್ಟಿದೆ. ಅಲ್ಲದೇ ವರಮಾನ ವಿಚಾರದಲ್ಲೂ ತೆರಿಗೆ ರೂಪದಲ್ಲಿ ರಾಜ್ಯ ದಿಂದ ಬಹುದೊಡ್ಡ ಸಾಧನೆಯಿದೆ. ಇಂದಿಗೂ ರಾಜಧಾನಿಯಲ್ಲಿ ಕೋಟ್ಯಾಂತರ ಕುಟುಂಬ ಬೆಳಕು ಕಾಣ ಲು ಕೆಂಪೇಗೌಡರ ನಿರ್ಧಾರಗಳೇ ಕಾರಣ ಎಂದರು.

ಬಿಜೆಪಿ ಜಿಲ್ಲಾಧ್ಯಕ್ಷ ಎಂ.ಆರ್.ದೇವರಾಜ್‌ಶೆಟ್ಟಿ ಮಾತನಾಡಿ ಕೆಂಪೇಗೌಡರು ಸ್ವಾರ್ಥಕ್ಕೆ ಆಸೆಪಡದೇ ಸ ಮಾಜದ ಹಿತದೃಷ್ಟಿಯಿಂದ ಸಾವಿರಾರು ಎಕರೆಯನ್ನು ಬೃಹತ್ ಬೆಂಗಳೂರು ನಿರ್ಮಾಣಕ್ಕೆ ಮೀಸಲಿಟ್ಟ ಯು ಗಪುರುಷ ಎಂದರೆ ತಪ್ಪಾಗಲಾರದು ಎಂದ ಅವರು ಇಂದಿನ ಯುವಪೀಳಿಗೆ ಕೆಂಪೇಗೌಡರ ಚರಿತ್ರೆ ಅಧ್ಯಯ ನಡೆಸಿ ಇತಿಹಾಸ ಅರಿಯಬೇಕಿದೆ ಎಂದು ಹೇಳಿದರು.

ಕೆಂಪೇಗೌಡರ ಆಲೋಚನೆಗಳಿಂದ ನೂರಾರು ಕೆರೆಗಳು ಅಭಿವೃದ್ದಿಗೊಂಡರೆ, ಕೆಲವು ರಾಜಕಾರಣಿಗಳ ದುರಾಸೆಯಿಂದ ಕೆರೆಗಳನ್ನು ಮುಚ್ಚಿಸಿ ಸಾಮ್ರಾಜ್ಯವಾಗಿಸಿದ ಕಾರಣ ಮಳೆಗಾಲದಲ್ಲಿ ಬೆಂಗಳೂರಿನ ಕೆಲವು ಬಡಾವಣೆಗಳು ಜಲಾವೃತಗೊಳ್ಳುತ್ತಿವೆ ಎಂದು ಅಸಮಾಧಾನ ವ್ಯಕ್ತಪಡಿಸಿದರು.

ಬಿಜೆಪಿ ಜಿಲ್ಲಾ ವಕ್ತಾರ ಸಿ.ಹೆಚ್.ಲೋಕೇಶ್ ಮಾತನಾಡಿ ಬೆಂಗಳೂರಿನಲ್ಲಿ ಸುಮಾರು 100 ಕೆರೆಗಳ ಅಭಿವೃದ್ದಿ, ಬೃಹತ್ ನಾಲ್ಕು ಉದ್ಯಾನವನ ನಿರ್ಮಿಸಿ ವಾಯುವಿಹಾರಿಗಳಿಗೆ ಅನುಕೂಲ, ರಾಜಧಾನಿಯಲ್ಲಿ ರಾಷ್ಟ್ರೀಯ ಹೆದ್ದಾರಿ ಹಾದುಹೋಗಲು ಮೂಲವೇ ಕೆಂಪೇಗೌಡ ಮುಂದಾಲೋಚನೆಯಾಗಿದೆ ಎಂದರು.

ಈ ಸಂದರ್ಭದಲ್ಲಿ ಮುಖಂಡರುಗಳಾದ ಅನುಮಧುಕರ್,  ಕೆ.ಎಸ್.ಪುಷ್ಪರಾಜ್,  ಸೀತರಾಮಭರಣ್ಯ,  ಕುರುವಂಗಿ ವೆಂಕಟೇಶ್,   ಸಂತೋಷ್‌ಕೋಟ್ಯಾನ್,  ಜಸಂತಾ ಅನಿಲ್‌ಕು ಮಾರ್, ನಾರಾಯಣಗೌಡ, ಗೌತಮ್‌ಜೈನ್, ಜಯಣ್ಣ, ಸಚಿನ್‌ಗೌಡ, ವೈ.ಜಿ.ಸುರೇ ಶ್, ಓಂಕಾರೇಗೌಡ, ಬಸವರಾಜ್, ಹೆಚ್.ಕೆ.ಕೇಶವಮೂರ್ತಿ, ದುರ್ಗೇಶ್ ಮತ್ತಿತರರು ಉಪಸ್ಥಿತರಿದ್ದರು.

Leave a Reply

Your email address will not be published. Required fields are marked *

ಕ್ಷಮಿಸಿ ಹಕ್ಕು ಸೌಮ್ಯ ಕಾಯ್ದಿರಿಸಲಾಗಿದೆ
ಕ್ಷಮಿಸಿ ಹಕ್ಕು ಸೌಮ್ಯ ಕಾಯ್ದಿರಿಸಲಾಗಿದೆ
ಕ್ಷಮಿಸಿ ಹಕ್ಕು ಸೌಮ್ಯ ಕಾಯ್ದಿರಿಸಲಾಗಿದೆ
ಕ್ಷಮಿಸಿ ಹಕ್ಕು ಸೌಮ್ಯ ಕಾಯ್ದಿರಿಸಲಾಗಿದೆ
ಕ್ಷಮಿಸಿ ಹಕ್ಕು ಸೌಮ್ಯ ಕಾಯ್ದಿರಿಸಲಾಗಿದೆ
ಕ್ಷಮಿಸಿ ಹಕ್ಕು ಸೌಮ್ಯ ಕಾಯ್ದಿರಿಸಲಾಗಿದೆ
ಕ್ಷಮಿಸಿ ಹಕ್ಕು ಸೌಮ್ಯ ಕಾಯ್ದಿರಿಸಲಾಗಿದೆ