m p kumaraswamy

 

 

ಅರಣ್ಯ ಕಾಯಿದೆ 17/1 ಜಾರಿಯಾದರೆ ಚಿಕ್ಕಮಗಳೂರು ಜಿಲ್ಲೆಯಲ್ಲಿ 175 ಗ್ರಾಮದ ಜನರು ಬೀದಿಪಾಲಾಗುತ್ತಾರೆ. ಇದಕ್ಕೆ ಅವಕಾಶ ನೀಡಬಾರದೆಂದು ಮೂಡಿಗೆರೆ ಮಾಜಿ ಶಾಸಕ ಎಂ.ಪಿ.ಕುಮಾರಸ್ವಾಮಿ ಒತ್ತಾಯಿಸಿದರು.

ಅವರು ಸೋಮವಾರ ಸುದ್ದಿಗಾರರೊಂದಿಗೆ ಮಾತನಾಡಿ, ಕೊಪ್ಪ ಅರಣ್ಯ ವ್ಯಾಪ್ತಿಯ 123, ಚಿಕ್ಕಮಗಳೂರು ವ್ಯಾಪ್ತಿಯಲ್ಲಿ 52 ಗ್ರಾಮದ ಪ್ರದೇಶ ಅರಣ್ಯ ಕಾಯಿದೆ 4/1ರಲ್ಲಿದೆ. ಅದೀಗ ಅರಣ್ಯ ಕಾಯಿದೆ 17/1 ಆಗಲು ಅರಣ್ಯ ಇಲಾಖೆ ಕಾಯುತ್ತಿದೆ. ಈ ಪ್ರಕ್ರಿಯೆ ನಡೆದರೆ ಕಳಸ ಭಾಗದ ತನುಡಿ, ಎಸ್.ಕೆ.ಮೇಗಲ್, ಮಾವಿನಕೆರೆ, ಆಲ್ದೂರು ಭಾಗದ ಹವಳ್ಳಿ ಸೇರಿದಂತೆ ಜಿಲ್ಲೆಯಲ್ಲಿ 175 ಗ್ರಾಮದ ಜನರು ಬೀದಿ ಪಾಲಾಗುತ್ತಾರೆ. ಅಲ್ಲದೇ ಗ್ರಾ.ಪಂ.ಗಳಲ್ಲಿ ಈಗಾಗಲೇ ನೀಡಿದ್ದ ನಿವೇಶನ ಹಾಗೂ ನಿವೇಶನಕ್ಕಾಗಿ ಕಾಯ್ದಿರಿಸಿದ್ದ ಬಹುತೇಕ ಭೂಮಿ ಅರಣ್ಯ ಪಾಲಾಗಲಿದೆ. ಇದರಿಂದ ಮುಂದಿನ ತಲೆಮಾರಿನಲ್ಲಿಯೂ ನಿವೇಶನ ರಹಿತರು ನಿವೇಶನ ರಹಿತರಾಗಿಯೇ ಉಳಿಯುತ್ತಾರೆಂದು ಹೇಳಿದರು.

ಕಂದಾಯ ಮತ್ತು ಅರಣ್ಯ ಇಲಾಖೆ ಜಂಟಿಯಾಗಿ ನಿವೇಶನ ರಹಿತರಿಗೆ ದ್ರೋಹ ಮಾಡಿದೆ. ಈ ಹಿಂದೆ ಕಂದಾಯ ಇಲಾಖೆ ವ್ಯಾಪ್ತಿಗೆ ಸೇರುವ ಭೂಮಿಯಲ್ಲಿ ಅರಣ್ಯ ಇಲಾಖೆ ಸಾಂಪ್ರಾದಾಯಿಕ ಕಾಡು ಮರಗಳನ್ನು ಬೆಳೆಸದೇ ಅಕೇಶಿಯಾ, ನೀಲಗಿರಿ ಸೇರಿದಂತೆ ಇತರೇ ಗಿಡಗಳನ್ನು ನಡುತೋಪು ಹೆಸರಿನಲ್ಲಿ ಬೆಳೆಸಿದ್ದು, ಇದನ್ನು ಅರಣ್ಯ ಜಾಗವೆಂದು ಬಿಂಬಿಸಲಾಗುತ್ತಿದೆ. ಇದೀಗ 175 ಗ್ರಾಮಗಳು ಅರಣ್ಯ ಕಾಯಿದೆ 17/1 ಒಳಪಟ್ಟರೆ ಸಣ್ಣ ರೈತರು, ಕೂಲಿ ಕಾರ್ಮಿಕರು ಇನ್ನಿಲ್ಲದ ಸಂಕಷ್ಟ ಎದುರಿಸುವಂತಾಗುತ್ತದೆ. ಜಿಲ್ಲೆಯ 175 ಗ್ರಾಮಗಳು ಅರಣ್ಯ ಕಾಯಿದೆ 17/1 ಆಗದಂತೆ ಅರಣ್ಯ ಇಲಾಖೆ ತಡೆಯಬೇಕು. ಇಲ್ಲವಾದರೆ ಜನರ ತಾಳ್ಮೆ ಕಟ್ಟೆಯೊಡೆದು ಕಾಡು ನಾಶವಾಗುವುದರಲ್ಲಿ ಸಂಶಯವಿಲ್ಲವೆಂದು ಹೇಳಿದರು.

Leave a Reply

Your email address will not be published. Required fields are marked *

ಕ್ಷಮಿಸಿ ಹಕ್ಕು ಸೌಮ್ಯ ಕಾಯ್ದಿರಿಸಲಾಗಿದೆ
ಕ್ಷಮಿಸಿ ಹಕ್ಕು ಸೌಮ್ಯ ಕಾಯ್ದಿರಿಸಲಾಗಿದೆ
ಕ್ಷಮಿಸಿ ಹಕ್ಕು ಸೌಮ್ಯ ಕಾಯ್ದಿರಿಸಲಾಗಿದೆ
ಕ್ಷಮಿಸಿ ಹಕ್ಕು ಸೌಮ್ಯ ಕಾಯ್ದಿರಿಸಲಾಗಿದೆ
ಕ್ಷಮಿಸಿ ಹಕ್ಕು ಸೌಮ್ಯ ಕಾಯ್ದಿರಿಸಲಾಗಿದೆ
ಕ್ಷಮಿಸಿ ಹಕ್ಕು ಸೌಮ್ಯ ಕಾಯ್ದಿರಿಸಲಾಗಿದೆ
ಕ್ಷಮಿಸಿ ಹಕ್ಕು ಸೌಮ್ಯ ಕಾಯ್ದಿರಿಸಲಾಗಿದೆ