ಪ್ರತಿಷ್ಠಿತ ಚಿಕ್ಕಮಗಳೂರು ರೋಟರಿ ಕ್ಲಬ್ 2025-26ನೆಯ ಸಾಲಿನ ಅಧ್ಯಕ್ಷರಾಗಿ ಜ್ಞಾನರಶ್ಮಿ ಪ್ರೌಢಶಾಲಾ ಆಡಳಿತಾಧಿಕಾರಿ ಎನ್.ಪಿ.ಲಿಖಿತ್, ಕಾರ್ಯದರ್ಶಿಯಾಗಿ ಮಾರುಕಟ್ಟೆ ವಿಶ್ಲೇಷಕ ಹರ್ಷಿತ್‍ವಸಿಷ್ಠ ಆಯ್ಕೆಯಾಗಿದ್ದಾರೆ.
68ವರ್ಷಗಳ ಇತಿಹಾಸ ಹೊಂದಿರುವ ಚಿಕ್ಕಮಗಳೂರು ರೋಟರಿಕ್ಲಬ್ ಪ್ರಸಕ್ತ ಸಾಲಿನ ಎನ್.ಪಿ.ಲಿಖಿತ್ ನೇತೃತ್ವದ ತಂಡ ಜುಲೈ 3ರ ಗುರುವಾರ ಸಂಜೆ 6.30ಕ್ಕೆ ಎಂಎಲ್‍ವಿ ರೋಟರಿ ಸಭಾಂಗಣದಲ್ಲಿ ಪದವಿ ಸ್ವೀಕಾರ ಮಾಡಲಿದೆ.
ರೋಟರಿ ಜಿಲ್ಲಾ ಮಾಜಿಗೌರ್ನರ್ ಅಭಿನಂದನ್ ಎ.ಶೆಟ್ಟಿ ಪದವಿಪ್ರದಾನ ಮಾಡುವರು. ಸಹಾಯಕ ರಾಜ್ಯಪಾಲ ಟಿ.ಎಂ.ಪ್ರವೀಣ್ ನಹಾರ್ ಮತ್ತು ವಲಯಾಧಿಕಾರಿ ಆರ್.ನಾಗೇಂದ್ರ ಮುಖ್ಯಅತಿಥಿಗಳಾಗಿ ಪಾಲ್ಗೊಳ್ಳಲಿದ್ದು ಎಂ.ಎಲ್.ಸುಜಿತ್ ಅಧ್ಯಕ್ಷತೆ ವಹಿಸುವರು.
ನೂತನ ಪದಾಧಿಕಾರಿಗಳು : ಅಧ್ಯಕ್ಷ: ಎನ್.ಪಿ.ಲಿಖಿತ್, ಕಾರ್ಯದರ್ಶಿ ಹರ್ಷಿತ್ ವಶಿಷ್ಠ, ನಿಕಟಪೂರ್ವ ಅಧ್ಯಕ್ಷ: ಎಂ.ಎಲ್.ಸುಜಿತ್, ಉಪಾಧ್ಯಕ್ಷ : ಚಿದಾನಂದ, ಖಜಾಂಚಿ: ಕೆ.ಎಸ್.ಆದರ್ಶ, ಸಹಕಾರ್ಯದರ್ಶಿ: ಶ್ರೇಯಸ್, ದಂಡನಾಯಕ: ಎಚ್.ಡಿ.ತಿಮ್ಮಯ್ಯ,
ನಿರ್ದೇಶಕರು : ಎನ್.ಶ್ರೀವಾತ್ಸವ್ (ತಂಡಸೇವೆ), ಎಚ್.ಎನ್.ಮಹೇಶ್‍ಗೌಡ (ಸಮುದಾಯಸೇವೆ), ಎಂ.ಆರ್.ಕಿರಣ (ಅಂತರರಾಷ್ಟ್ರೀಯ ಸೇವೆ), ಬಿ.ಎಸ್.ವಿಧೇಯ (ವೃತ್ತಿಪರ ಸೇವೆ), ಫಣೀಂದ್ರನಾಡಿಗ್ (ಯುವಸೇವೆ), ಎಂ.ಎಸ್.ಸುಧೀರ್ (ಸಿಎಲ್‍ಎಫ್).
ಅಧ್ಯಕ್ಷರ ಪರಿಚಯ : ಶಿಕ್ಷಣ ಮತ್ತು ಸಮಾಜ ಸೇವೆಯ ಹಿನ್ನಲೆಯ ರೈತಾಪಿ ಕುಟುಂಬದ ಲಿಖಿತ್‍ರ ತಂದೆ ಶಿಕ್ಷಣತಜ್ಞರಾದ ನಂದಕುಮಾರ್ ತಾಯಿ ಪಾಲಾಕ್ಷಮ್ಮ, ವಿದ್ಯಾರ್ಥಿ ದೆಸೆಯಲ್ಲೆ ಸ್ಕೌಟ್ಸ್‍ನಲ್ಲಿ ರಾಷ್ಟ್ರಪತಿ ಪುರಸ್ಕಾರ ಪಡೆದವರು. 15 ಮತ್ತು 17ವರ್ಷದೊಳಗಿನವರಿಗೆ ಚಿಕ್ಕಮಗಳೂರು ಜಿಲ್ಲಾ ಕ್ರಿಕೆಟ್ ತಂಡವನ್ನು ಪ್ರತಿನಿಧಿಸಿದವರು. ಇಂಜಿನಿರಿಂಗ್ ಪದವೀಧರ. ಕೆಲಕಾಲ ಸಾಪ್ಟ್‍ವೇರ್ ಇಂಜಿನಿಯರ್ ಆಗಿ ವೃತ್ತಿ ಅನುಭವ ಗಳಿಸಿ ಉಪ್ಪಳ್ಳಿಯ ಜ್ಞಾನರಶ್ಮಿ ಪ್ರೌಢಶಾಲಾ ಆಡಳಿತಾಧಿಕಾರಿಯಾಗಿ ಕಾರ್ಯನಿರ್ವಹಿಸುತ್ತಿದ್ದಾರೆ.
ಸಮಾಜಸೇವೆ ಆಸಕ್ತಿ ವಿಷಯವಾಗಿದ್ದು, ಲಾಕ್‍ಡೌನ್ ಸಂದರ್ಭದಲ್ಲಿ ಕರ್ನಾಟಕ ಸರ್ಕಾರ ರಚಿಸಿದ್ದ ಕೋರೊನಾ ವಾರಿಯರ್ಸ್ ಸ್ವಯಂ ಸೇವ ತಂಡದ ಜಿಲ್ಲಾ ಸಂಯೋಜಕವಾಗಿ ಲಿಖಿತ್ ಕಾರ್ಯನಿರ್ವಹಿಸಿದವರು. ಜಿಲ್ಲಾ ರೆಡ್‍ಕ್ರಾಸ್ ಸಂಸ್ಥೆಯ ಖಜಾಂಚಿಯಾಗಿದ್ದು, ಚಿಕ್ಕಮಗಳೂರು ರೋಟರಿ ಸಂಸ್ಥೆ ಸೇರಿ ದಂಡನಾಯಕ ಕಾರ್ಯದರ್ಶಿ ಜವಾಬ್ದಾರಿ ನಿಭಾಯಿಸಿ ಅಧ್ಯಕ್ಷರಾಗಿ ಸರ್ವಾನು ಮತದಿಂದ ಚುನಾಯಿತರಾಗಿದ್ದಾರೆ.
ವರದಿ : ಪ್ರಭುಲಿಂಗಶಾಸ್ತ್ರಿ



