dana kallaru

 

 

ಐಷಾರಾಮಿ ಕಾರಿನಲ್ಲಿ ದನಗಳನ್ನು ಕದ್ದೊಯ್ಯುತ್ತಿದ್ದಾಗ ದಾಳಿ ನಡೆಸಿದ ಪೊಲೀಸರ  ಮೇಲೆ  ದನಕಳ್ಳರು ಕಾರನ್ನು ಹತ್ತಿಸಲು ಮುಂದಾಗಿದ್ದ ಘಟನೆ ಚಿಕ್ಕಮಗಳೂರು ಜಿಲ್ಲೆ ಕಳಸ  ತಾಲೂಕಿನ ಹಳುವಳ್ಳಿ ಗ್ರಾಮದಲ್ಲಿ ಗುರುವಾರ ಮಧ್ಯರಾತ್ರಿ ನಡೆದಿದೆ.

ಕಳ್ಳರು ಕದ್ದಿದ್ದ ನಾಲ್ಕು ಹಸುಗಳನ್ನು ಝೈಲೋ ಕಾರಿನಲ್ಲಿ ತುಂಬಿಕೊಂಡು ಹೋಗುತ್ತಿದ್ದರು. ಪೊಲೀಸರು, ಕಾರನ್ನು ಅಡ್ಡ ಹಾಕಲು ಮುಂದಾದಾಗ, ದುಷ್ಕರ್ಮಿಗಳು ಕಾರನ್ನು ಪೊಲೀಸರ ಮೇಲೆ ಹತ್ತಿಸಲು ಮುಂದಾಗಿದ್ದಾರೆ. ಪೊಲೀಸರು ಸಿನಿಮೀಯ ರೀತಿಯಲ್ಲಿ ಕಾರನ್ನು ಚೇಸ್ ಮಾಡಿಕೊಂಡು ಹೋಗಿದ್ದಾರೆ. ಬಹಳಷ್ಟು ಪ್ರಯತ್ನದ ನಂತರ ಪೊಲೀಸರ ಜೀಪಿನಿಂದ ಕಳ್ಳರ ಕಾರಿಗೆ ಗುದ್ದಿದ್ದು, ಕಾರು ರಸ್ತೆ ಪಕ್ಕದ ಚರಂಡಿಗೆ ಜಾರಿತ್ತು. ಈ ಸಂದರ್ಭದಲ್ಲಿ ಕಳ್ಳರು ಕಾರಿನಿಂದ ಇಳಿದು ಕಗ್ಗತ್ತಲೆಯಲ್ಲಿ ಪರಾರಿಯಾಗಿದ್ದಾರೆ.

ರಾತ್ರಿ ವೇಳೆಯೇ ಹುಡುಕಾಟ ನಡೆಸಲಾಯಿತಾದರೂ ಮಳೆ ಮತ್ತು ಕತ್ತಲೆಯ ಕಾರಣ ಆರೋಪಿಗಳ ಪತ್ತೆ ಸಾಧ್ಯವಾಗಿಲ್ಲ.   ಈ ಸಂಬಂಧ ಕಳಸ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಈ ತಂಡ ದನಗಳ್ಳತನವನ್ನೇ ದಂದೆಯಾಗಿ ಮಾಡಿಕೊಂಡಿದ್ದು ಹಲವಾರು ಕಳೆಗಳಲ್ಲಿ ದನಗಳ್ಳತನ ಮಾಡಿದ್ದಾರೆ ಎಂದು ತಿಳಿದುಬಂದಿದೆ. ನಂಬರ್ ಪ್ಲೇಟ್ ಬದಲಾಯಿಸಿಕೊಂಡು ಪೊಲೀಸರಿಗೆ ಚಳ್ಳೆಹಣ್ಣು ತಿನ್ನಿಸುವ ಪ್ರಯತ್ನ ನಡೆಸುತ್ತಿದ್ದರು ಎನ್ನಲಾಗಿದೆ. ಈ ಕಾರಿನ ಚಲನವಲನದ ಬಗ್ಗೆ ಸಂಶಯಗೊಂಡಿದ್ದ ಪೊಲೀಸರು ಇದರ ಮೇಲೆ ಹದ್ದಿನ ಕಣ್ಣಿಟ್ಟಿದ್ದರು ಎಂದು ತಿಳಿದಬಂದಿದೆ. ಗುರುವಾರ ರಾತ್ರಿ ಸುಮಾರು 11 ಗಂಟೆಯ ಸಮಯದಲ್ಲಿ ಈ ಕಾರು ಕಳಸ ತಾಲ್ಲೂಕು ವ್ಯಾಪ್ತಿಗೆ ಬಂದಿರುವುದು ಖಚಿತ ಮಾಹಿತಿಯಿಂದ ತಿಳಿದುಕೊಂಡು ಪೊಲೀಸರು ಕಾರ್ಯಾಚರಣೆಗೆ ಇಳಿದಿದ್ದರು ಎನ್ನಲಾಗಿದೆ.

ರಾತ್ರಿ ಸುಮಾರು 12 ರ ಸಮಯದಲ್ಲಿ ಹಳುವಳ್ಳಿ ಸಮೀಪ ರಸ್ತೆಯಲ್ಲಿ ಮಲಗಿದ್ದ ದನಗಳನ್ನು ಕಾರಿಗೆ ತುಂಬಿಸುವ ಸಂದರ್ಭದಲ್ಲಿ ಪೊಲೀಸರು ಸ್ಥಳಕ್ಕಾಗಮಿಸಿದ್ದು, ದನಗಳಿಗೆ ಮತ್ತು ಬರುವ ತಿಂಡಿ ನೀಡಿ ತಲೆ ಮತ್ತು ಕಾಲನ್ನು ಸೇರಿಸಿ ಬಿಗಿದು ಕಟ್ಟಿ ಕಾರಿಗೆ ತುಂಬಿಸುತ್ತಿದ್ದರು ಎಂದು ತಿಳಿದುಬಂದಿದೆ.

ಈಗ ಕಳ್ಳರು ಬಳಸುತ್ತಿದ್ದ ಕಾರು ಕಳಸ ಪೊಲೀಸರ ವಶದಲ್ಲಿದ್ದು, ತನಿಖೆಯಿಂದ ಈ ತಂಡದಲ್ಲಿ ಯಾರಿದ್ದರೂ ಎಂಬುದೆಲ್ಲಾ ಬೆಳಕಿಗೆ ಬರಲಿದೆ. ಕಳಸ ಪೊಲೀಸರ ಸಾಹಸ ಕೃತ್ಯಕ್ಕೆ ಸಾರ್ವಜನಿಕರು ಪ್ರಶಂಸೆ ವ್ಯಕ್ತಪಡಿಸಿದ್ದು, ಆದಷ್ಟು ಬೇಗ ದುಷ್ಕರ್ಮಿಗಳನ್ನು ಬಂಧಿಸುವುದಾಗಿ ಪೊಲೀಸರು ತಿಳಿಸಿದ್ದಾರೆ.

Leave a Reply

Your email address will not be published. Required fields are marked *

ಕ್ಷಮಿಸಿ ಹಕ್ಕು ಸೌಮ್ಯ ಕಾಯ್ದಿರಿಸಲಾಗಿದೆ
ಕ್ಷಮಿಸಿ ಹಕ್ಕು ಸೌಮ್ಯ ಕಾಯ್ದಿರಿಸಲಾಗಿದೆ
ಕ್ಷಮಿಸಿ ಹಕ್ಕು ಸೌಮ್ಯ ಕಾಯ್ದಿರಿಸಲಾಗಿದೆ
ಕ್ಷಮಿಸಿ ಹಕ್ಕು ಸೌಮ್ಯ ಕಾಯ್ದಿರಿಸಲಾಗಿದೆ
ಕ್ಷಮಿಸಿ ಹಕ್ಕು ಸೌಮ್ಯ ಕಾಯ್ದಿರಿಸಲಾಗಿದೆ
ಕ್ಷಮಿಸಿ ಹಕ್ಕು ಸೌಮ್ಯ ಕಾಯ್ದಿರಿಸಲಾಗಿದೆ
ಕ್ಷಮಿಸಿ ಹಕ್ಕು ಸೌಮ್ಯ ಕಾಯ್ದಿರಿಸಲಾಗಿದೆ