ಕರ್ನಾಟಕ ಬೆಳೆಗಾರರ ಒಕ್ಕೂಟದಿಂದ ಸಂಸದರಾದ ತೇಜಸ್ವಿ ಸೂರ್ಯ ಮತ್ತು ಕೋಟಾ ಶ್ರೀನಿವಾಸ ಪೂಜಾರಿಯವರು ಮತ್ತು ವಿಧಾನ ಪರಿಷತ್ ಸದಸ್ಯ ಸಿ.ಟಿ.ರವಿಯವರನ್ನು ಭೇಟಿ ಮಾಡಿ ಸರ್ಫಾಸಿ ಕಾಯ್ದೆ ಮತ್ತು ಸಿಬಿಲ್ ಸ್ಕೋರ್ ಸಮಸ್ಯೆ ಬಗೆಹರಿಸಲು ಮನವಿ ಮಾಡಲಾಯಿತು.
ದಿನಾಂಕ 12.07.2025ನೆಯ ಶನಿವಾರದಂದು ಚಿಕ್ಕಮಗಳೂರಿನ ಏ ಐ ಟಿ ಟಿ ಕಾಲೇಜಿನಲ್ಲಿ ಕಾರ್ಯಕ್ರಮವೊಂದಕ್ಕೆ ಆಗಮಿಸಿದ್ದ ಚಿಕ್ಕಮಗಳೂರು ಉಡುಪಿ ಲೋಕಸಭಾ ಕ್ಷೇತ್ರದ ಸದಸ್ಯರಾದ ಕೋಟಾ ಶ್ರೀನಿವಾಸ ಪೂಜಾರಿಯವರು, ಬೆಂಗಳೂರು ದಕ್ಷಿಣ ಲೋಕಸಭಾ ಕ್ಷೇತ್ರದ ಸದಸ್ಯರಾದ ತೇಜಸ್ವಿ ರವರು ಹಾಗೂ ವಿಧಾನ ಪರಿಷತ್ ಸದಸ್ಯರಾದ ಸಿಟಿ ರ.ವಿ ಅವರನ್ನು ಹಳಸೆ ಶಿವಣ್ಣ ನೇತೃತ್ವದ ಬೆಳೆಗಾರರ ಸಂಘಟನೆಯ ನಿಯೋಗ ಭೇಟಿ ಮಾಡಿ ಮನವಿ ಪತ್ರ ಸಲ್ಲಿಸಿತು.
ಮನವಿ ಪತ್ರವನ್ನು ಸ್ವೀಕರಿಸಿದ ಸಂಸದರುಗಳು ಮೈಸೂರು ಕೊಡಗು ಲೋಕಸಭಾ ಕ್ಷೇತ್ರದ ಸಂಸದರಾದ ಯದುವೀರ್ ಒಡೆಯರ್ ಮತ್ತು ಹಾಸನ ಲೋಕಸಭಾ ಕ್ಷೇತ್ರದ ಸಂಸದರಾದ ಶ್ರೇಯಸ್ ಪಟೇಲ್ ಅವರನ್ನು ಒಳಗೊಂಡಂತೆ ನಾವು ನಾಲ್ಕು ಜನ ಸಂಸದರು ಒಕ್ಕೂಟದ ಪದಾಧಿಕಾರಿಗಳನ್ನು ಕರೆದು ದೆಹಲಿಯಲ್ಲಿ ಸಭೆ ನಡೆಸಿ ಪ್ರಸ್ತುತ ತಮ್ಮ ಬೇಡಿಕೆಯ ಬಗ್ಗೆ ಚರ್ಚಿಸಿ ನಂತರ ಸರ್ಕಾರಕ್ಕೆ ಮನವರಿಕೆ ಮಾಡಿ ಸರ್ಫಾಸಿ ವಿಚಾರವಾಗಿ ಮತ್ತು ರೈತರ ಸಾಲದ ಮೇಲಿನ ಸಿಬಿಲ್ ಸ್ಕೋರ್ ನಿಬಂಧನೆಯ ವಿಚಾರವಾಗಿ ಚರ್ಚಿಸಿ ಅನುಕೂಲಕರ ನಿರ್ಧಾರ ಕೈಗೊಳ್ಳಲು ಶ್ರಮಿಸುವುದಾಗಿ ಭರವಸೆ ನೀಡಿದ್ದಾರೆ.

ಈ ನಿಯೋಗದಲ್ಲಿ ಕರ್ನಾಟಕ ಬೆಳೆಗಾರರ ಒಕ್ಕೂಟದ ಅಧ್ಯಕ್ಷರಾದ ಹಳಸೆ ಶಿವಣ್ಣ, ಮಾಜಿ ಅಧ್ಯಕ್ಷರಾದ ಬಿಎಸ್ ಜಯರಾಮ್, ದೀಪಕ್ ದೊಡ್ಡಯ್ಯ, ಚಿಕ್ಕಮಗಳೂರು ಜಿಲ್ಲಾ ಬೆಳೆಗಾರರ ಸಂಘದ ನೂತನ ಅಧ್ಯಕ್ಷರಾದ ಕೆ ಯು ರತೀಶ್, ಕೋಮಾರ್ಕ್ ಮಾಜಿ ಅಧ್ಯಕ್ಷರಾದ ಡಿ ಎಸ್ ರಘು, ಜಿಲ್ಲಾ ಒಕ್ಕಲಿಗರ ಸಂಘದ ಅಧ್ಯಕ್ಷ ರಾಜಶೇಖರ್, ಆವತಿ ಹೋಬಳಿ ಬೆಳೆಗಾರರ ಸಂಘದ ಕಾರ್ಯದರ್ಶಿ ಕೆರೆಮಕ್ಕಿಮಹೇಶ್, ಮೂಡಿಗೆರೆ ತಾಲ್ಲೂಕು ಬೆಳೆಗಾರರ ಸಂಘದ ಕಾರ್ಯದರ್ಶಿ ಮನುಕುಮಾರ್ ಕಸಬಾ ಹೋಬಳಿ ಬೆಳೆಗಾರರ ಸಂಘ ಚಿಕ್ಕಮಗಳೂರು ಅಧ್ಯಕ್ಷರಾದ ಎಂ ಎಸ್ ಲಿಂಗಪ್ಪಗೌಡ, ಪದಾಧಿಕಾರಿ ಐ ಎಂ ಮಹೇಶ್ ಗೌಡ, ಆಲ್ದೂರು ಬೆಳೆಗಾರರ ಸಂಘದ ಪದಾಧಿಕಾರಿ ಥೌಸಿಫ್ ಆಲಿ,ರೈತ ಹೋರಾಟ ಸಮಿತಿ ಕಾರ್ಯದರ್ಶಿ ರಘು ಹಾಗೂ ಬೆಳೆಗಾರರು ಮತ್ತು ಇತರರು ಈ ಸಂದರ್ಭದಲ್ಲಿ ಉಪಸ್ಥಿತರಿದ್ದರು.



