CEIR (Central Equipment Identity Register) ಪೋರ್ಟಲ್ ಬಳಸಿ ಜೂನ್-2025 ತಿಂಗಳಲ್ಲಿ ಚಿಕ್ಕಮಗಳೂರು ಜಿಲ್ಲೆಯಲ್ಲಿ ಪತ್ತೆ ಮಾಡಲಾದ ಸುಮಾರು ರೂ. 21.34 ಲಕ್ಷ ಮೌಲ್ಯದ ಒಟ್ಟು 74 ಮೊಬೈಲ್ ಫೋನ್ ಗಳನ್ನು ಸಂಬಂಧಪಟ್ಟ ವಾರಸುದಾರರಿಗೆ ಜಿಲ್ಲೆಯ ವಿವಿಧ ಪೊಲೀಸ್ ಠಾಣೆಗಳಲ್ಲಿ ಹಿಂದಿರುಗಿಸಲಾಗಿರುತ್ತದೆ.
ಸಾರ್ವಜನಿಕರಿಗೆ ಈ ಮೂಲಕ ಪೊಲೀಸ್ ಇಲಾಖೆ ತಿಳಿಸಿರುವಂತೆ ಒಂದು ವೇಳೆ ನಿಮ್ಮ ಮೊಬೈಲ್ ಫೋನ್ ಕಳೆದು ಕೊಂಡಲ್ಲಿ, ಮೊಬೈಲ್ ಫೋನ್ ಗೆ ಸಂಬಂಧಪಟ್ಟ ದಾಖಲಾತಿಗಳು, ನಿಮ್ಮ ಗುರುತಿನ ಪುರಾವೆ, KSP Mobile App ಮೂಲಕ ಪೊಲೀಸ್ ಕಂಪ್ಲೆಂಟ್ ಪ್ರತಿ ಪಡೆದು, CEIR ವೆಬ್ ಪೋರ್ಟಲ್: https://www.ceir.gov.in ರಲ್ಲಿ ವರದಿ ದಾಖಲಿಸಬೇಕೆಂದು ಕೋರಿದ್ದಾರೆ.



