halladagandi1

 

 

ಮೂಡಿಗೆರೆ ತಾಲ್ಲೂಕಿನ ಹೆಸಗಲ್ ಗ್ರಾಮಪಂಚಾಯಿತಿ ವ್ಯಾಪ್ತಿಯ ಹಳ್ಳದಗಂಡಿ ಗ್ರಾಮದ ಎರೆಡು ಬದಿಯಲ್ಲೂ ವರ್ಷವಿಡೀ ಹರಿಯುವ ಹಳ್ಳ ಇದ್ದರೂ ಈ ಗ್ರಾಮದಲ್ಲಿ ಕುಡಿಯುವ ನೀರಿನ ಸಮಸ್ಯೆಗೆ ಪರಿಹಾರ ಸಿಕ್ಕಿಲ್ಲ.

ಕಳೆದ 6 ತಿಂಗಳಿನಿಂದ ಈ ಊರಿನ ಜನರು ನೀರಿಗಾಗಿ ಪರದಾಡುತ್ತಿರುವುದು ನೋಡಿದರೆ ಇದು ಮಲೆನಾಡು ಅಥವಾ ಬರದನಾಡು ಎನಿಸದೆ ಇರದು ಮೂಡಿಗೆರೆ ತಾಲ್ಲೂಕಿನ ಹೆಸಗಲ್ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಹಳ್ಳದಗಂಡಿ ತನ್ನ ಸುತ್ತಮುತ್ತಲ ಎಲ್ಲಾ ಹಳ್ಳಿಗೆ ನೀರು ಪೂರೈಸುವ ಗ್ರಾಮ ಆದರೆ ಪರಿಶಿಷ್ಟ ಪಂಗಡದ ಜನರೇ ಅತೀ ಹೆಚ್ಚು ವಾಸಿಸುವ ಈ ಗ್ರಾಮಕ್ಕೆ ಮಾತ್ರ ಕುಡಿಯಲು ಸಹ ನೀರಿಲ್ಲ ಮಳೆಗಾಲದಲ್ಲಿ ಮಳೆಯನ್ನೇ ನಂಬಿ ಬದುಕುವ ಇಲ್ಲಿಯ ಜನರು ಬೇಸಿಗೆಯಲ್ಲಿ 2 ಕಿಮೀ ನೀರಿಗಾಗಿ ಅಲೆಯಬೇಕು ದಿನನಿತ್ಯದ ಬದುಕಿಗಾಗಿ ಕೂಲಿ ಕೆಲಸ ಮಾಡಿ ಮನೆಗೆ ಬಂದರು ನೆಮ್ಮದಿಯಿಲ್ಲದಂತೆ ಹಾಗಾಗಿದೆ

ಮಳೆಗಾಲದಲ್ಲೂ ಟ್ಯಾಂಕರ್ ಮೂಲಕ ನೀರು ಪೂರೈಕೆ ಮಾಡುವಂತಹ ಸ್ಥಿತಿ ನಿರ್ಮಾಣವಾಗಿದೆ.  3 ತಿಂಗಳು ಕಳೆದರೂ ಕೆಟ್ಟು ನಿಂತಿರುವ ಪಂಪ್  ದುರಸ್ಥಿಯಾಗಿಲ್ಲ. ಪಂಪ್ ದುರಸ್ಥಿಯಾದರೆ ವಿದ್ಯುತ್ ಸಂಪರ್ಕ ಸಮಸ್ಯೆ, ಕಾಮಗಾರಿ ಪೂರ್ಣ ಆದರೂ ಮನೆಗೆ ಬಾರದ JJM ನೀರು.

ಇಲ್ಲಿನ ನಿವಾಸಿಗಳು ಬಹುತೇಕರು ಕೂಲಿ ಕಾರ್ಮಿಕರು. ದಿನವಿಡೀ ಕೂಲಿ ಕೆಲಸ ಮಾಡಿ ಮನೆಗೆ ಬಂದು ಸಂಜೆ 7 ರ ತನಕ 1 ಕಿಲೋಮೀಟರ್ ದೂರದಿಂದ ನೀರು ಹೊರಬೇಕು, ಒಟ್ಟಾರೆಯಾಗಿ ಗ್ರಾಮಪಂಚಾಯತಿ, ಮೆಸ್ಕಾಂ ಇಲಾಖೆಗಳ ನಿರ್ಲಕ್ಷ್ಯದಿಂದಾಗಿ ಗ್ರಾಮಸ್ಥರ ಪಾಡು ಹೇಳತೀರದಾಗಿದೆ. “ಮತ ಹಾಕಿದ ನಮ್ಮ ಹಣೆಬರಕಕ್ಕೆ ಹೊಣೆ ಯಾರು” ಎನ್ನುವ ಹಾಗೆ ಆಗಿದೆ ಎಂದು ತಮ್ಮ ಅಸಹಾಯಕತೆ ವ್ಯಕ್ತಪಡಿಸುತ್ತಾರೆ ಸ್ಥಳಿಯ ಜನರು.

ಈ ಬಗ್ಗೆ ಸಂಬಂಧಿಸಿದ ಗ್ರಾಮ ಪಂಚಾಯಿತಿ ಮತ್ತು ಮೆಸ್ಕಾಂ ಇಲಾಖೆಯವರು ಕೂಡಲೇ ಕ್ರಮ ವಹಿಸಿ ಜನರ ಸಂಕಷ್ಟಕ್ಕೆ ಪರಿಹಾರ ನೀಡಬೇಕಾಗಿದೆ.

Leave a Reply

Your email address will not be published. Required fields are marked *

ಕ್ಷಮಿಸಿ ಹಕ್ಕು ಸೌಮ್ಯ ಕಾಯ್ದಿರಿಸಲಾಗಿದೆ
ಕ್ಷಮಿಸಿ ಹಕ್ಕು ಸೌಮ್ಯ ಕಾಯ್ದಿರಿಸಲಾಗಿದೆ
ಕ್ಷಮಿಸಿ ಹಕ್ಕು ಸೌಮ್ಯ ಕಾಯ್ದಿರಿಸಲಾಗಿದೆ
ಕ್ಷಮಿಸಿ ಹಕ್ಕು ಸೌಮ್ಯ ಕಾಯ್ದಿರಿಸಲಾಗಿದೆ
ಕ್ಷಮಿಸಿ ಹಕ್ಕು ಸೌಮ್ಯ ಕಾಯ್ದಿರಿಸಲಾಗಿದೆ
ಕ್ಷಮಿಸಿ ಹಕ್ಕು ಸೌಮ್ಯ ಕಾಯ್ದಿರಿಸಲಾಗಿದೆ
ಕ್ಷಮಿಸಿ ಹಕ್ಕು ಸೌಮ್ಯ ಕಾಯ್ದಿರಿಸಲಾಗಿದೆ