6619CF5BFF0BB5FB01ABFC54DCAF36A1A96AFFAF

 

 

ಎಲ್ಲರೊಳಗೊಂದಾಗಿ ಬದುಕುವುದೇ ಬಾಳಿನ ಸಾರ್ಥಕತೆ ಎಂದು ಚಿಕ್ಕಮಗಳೂರು ಗೃಹಮಂಡಳಿ ಸರ್ಕಾರಿ ಪ್ರೌಢಶಾಲಾ ಶಿಕ್ಷಕಿ ಎಚ್.ಎನ್. ಗೀತಾದಿವಾಕರ್ ಅಭಿಪ್ರಾಯಿಸಿದರು.

ಅಕ್ಕಮಹಾದೇವಿ ಮಹಿಳಾ ಸಂಘದ ಆಲ್ದೂರು ಗುಂಪಿನ ಶರಣೆ ನೀಲಾಂಬಿಕೆ ತಂಡ ಶ್ರೀಜಗದ್ಗುರು ರೇಣುಕಾಚಾರ್ಯ ಸಮುದಾಯ ಭವನದಲ್ಲಿ ಆಯೋಜಿಸಿದ್ದ ‘ನೂಲು ಹುಣ್ಣಿಮೆ’ ಕಾರ್ಯಕ್ರಮ ಉದ್ಘಾಟಿಸಿ ಅವರು ನಿನ್ನೆ ಮಾತನಾಡಿದರು.

ಎಲ್ಲಿ ಹೆಣ್ಣು ಗೌರವಿಸಲ್ಪಡುತ್ತಾಳೋ ಅಲ್ಲಿ ದೇವತೆಗಳು ನೆಲೆಸಿರುತ್ತಾರೆಂಬ ಮಾತಿದೆ. ಸಂಸಾರವನ್ನು ಸಂಬಾಳಿಸುವ ಸಾಮಥ್ರ್ಯ ಹೆಣ್ಣಿಗಿದೆ. ತಾಯಿ, ತಂಗಿ, ಹೆಂಡತಿ, ಮಗಳು, ಅಕ್ಕ, ಅಜ್ಜಿ ಸೇರಿದಂತೆ ವಿವಿಧ ಹೊಣೆಗಾರಿಕೆಯನ್ನು ನಿಭಾಯಿಸಬೇಕಾಗುತ್ತದೆ. ವಾಸಿಸುವ ಮನೆ ಎಷ್ಟೇ ದೊಡ್ಡದಿದ್ದರೂ ಅದರ ಬಾಗಿಲು ಚಿಕ್ಕದಾಗಿರುತ್ತದೆ. ಬಾಗಿಲಿನ ಚಿಲಕ ಸಣ್ಣದು, ಅದಕ್ಕೆ ಹಾಕುವ ಬೀಗ ಮತ್ತೂ ಸಣ್ಣದು. ಅದರ ಕೀಲಿಕೈ ಇನ್ನೂ ಚಿಕ್ಕದಾಗಿರುತ್ತದೆ. ದೊಡ್ಡಮನೆಯನ್ನು ಅತಿಸಣ್ಣದಾದ ಬೀಗದಕೈ ರಕ್ಷಿಸುತ್ತದೆ. ಹೆಣ್ಣು ಮನೆಯ ಕೀಲಿಕೈಯಂತೆ ಸಂಸಾರವನ್ನು ಸರಿದೂಗಿಸಿಕೊಂಡು ಹೋಗುವ ಅತ್ಯಂತ ಪ್ರಮುಖ ಪಾತ್ರ ವಹಿಸುತ್ತಾಳೆಂದರು.

‘ನಾನು’ ಎಂಬ ಅಹಂಕಾರ ಬಿಟ್ಟು ಹೊಂದಾಣಿಕೆಯಿಂದ ಬಾಳಿದಾಗ ಸಂಸಾರದಲ್ಲಿ ಸಾಮರಸ್ಯ ನೆಲೆಸುತ್ತದೆ. ಪ್ರೀತಿ ಹಂಚುವುದರಿಂದ ಮನೆಯಲ್ಲಿ ಸಂಬಂಧಗಳು ಗಟ್ಟಿಗೊಳ್ಳುತ್ತವೆ. ಒಳ್ಳೆಯ ಕೆಲಸ ಮಾಡಿದಾಗ ತೃಪ್ತಿ ಸಿಗುತ್ತದೆ. ಮನುಷ್ಯ ಜನ್ಮಕ್ಕೆ ಆಚಾರ-ವಿಚಾರಗಳು ಬೇಕು. ಇದ್ದಾಗ ಉಪಕಾರ ಮಾಡಬೇಕು. ದಾನ, ಧರ್ಮ ಮಾಡಿದರೆ ಸ್ವರ್ಗ ಪ್ರಾಪ್ತಿ ಎಂದ ಗೀತಾ, ‘ಎಲ್ಲೋ ಹುಡುಕಿದೆ ಇಲ್ಲದ ದೇವರ ಕಲ್ಲುಮಣ್ಣಿನ ಗುಡಿಯೊಳಗೆ ಇಲ್ಲೆ ಇರುವ ಪ್ರೀತಿ-ಪ್ರೇಮಗಳ ಗುರುತಿಸದಾದೆವು ನಮ್ಮೊಳಗೆ’ ಎಂಬ ಜಿಎಸ್‍ಎಸ್ ಅವರ ಕಾವ್ಯವನ್ನು ಉಲ್ಲೇಖಿಸಿದರು.

‘ಆಚಾರವೇ ಸ್ವರ್ಗ, ಅನಾಚಾರವೇ ನರಕ’ ಎಂಬುದನ್ನು ಸದಾ ನೆನಪಿನಲ್ಲಿಡಬೇಕು. ಅಪರೂಪದ ಮಾನವಜನ್ಮ ದೊಡ್ಡದು ಎಂಬುದನ್ನು ಮರೆಯಬಾರದು. ಹಾಸಿಗೆ ಕೊಂಡುಕೊಳ್ಳಬಹುದೇ ಹೊರತು ನಿದ್ದೆಯನ್ನು ಕೊಳ್ಳಲಾಗದೆಂಬ ಬದುಕಿನ ಸತ್ಯ ಅರ್ಥಮಾಡಿಕೊಂಡು ಉಪಕಾರಿಗಳಾಗಿ ಸೌಹಾರ್ದತೆಯಿಂದ ತಾಳ್ಮೆ- ಸಹನೆಯೊಂದಿಗೆ ಕುಟುಂಬವನ್ನು ಮುನ್ನಡೆಸುವ ಹೊಣೆಗಾರಿಕೆ ಮಹಿಳೆಯರು ನಿರ್ವಹಿಸಬೇಕೆಂದ ಗೀತಾ, ಡಿವಿಜಿ ಅವರ ‘ಹುಲ್ಲಾಗು ಬೆಟ್ಟದೆಡೆ ಮನೆಗೆ ಮಲ್ಲಿಗೆ’ಯಾಗಿ ಬಾಳುವುದರಲ್ಲಿ ಸಂತೋಷವಿದೆ ಎಂದರು.

ಅಕ್ಕಮಹಾದೇವಿ ಮಹಿಳಾ ಸಂಘದ ಅಧ್ಯಕ್ಷೆ ಆಶಾಮಲ್ಲೇಶ್ ಕಾರ್ಯಕ್ರಮದ ಅಧ್ಯಕ್ಷತೆವಹಿಸಿ ಮಾತನಾಡಿ ಇಂದು ಶ್ರಾವಣಮಾಸದ ನೂಲುಹುಣ್ಣಿಮೆ ಉತ್ತರ ಕರ್ನಾಟಕದಲ್ಲಿ ಹೆಚ್ಚು ಪ್ರಚಲಿತದಲ್ಲಿದೆ. ಅಲ್ಲದೆ ಇಂದು ರಕ್ಷಾಬಂಧನ ಅಣ್ಣ-ತಂಗಿಯರ ಅಕ್ಕ-ತಮ್ಮಂದಿರ ಬಾಂಧವ್ಯ ಕೊನೆತನಕ ಚೆನ್ನಾಗಿರಲೆಂದು ಹಾರೈಸುವ ಸುದಿನ ಎಂದರು.

ತಂಡದ ಉಪಾಧ್ಯಕ್ಷೆ ವೀಣಾಮಲ್ಲಿಕಾರ್ಜುನ ಪ್ರಾಸ್ತಾವಿಸಿ 11ಗುಂಪುಗಳನ್ನು ರಚಿಸಿದ್ದು, ಪ್ರತಿತಿಂಗಳು ಒಂದೊಂದು ಗುಂಪಿನಿಂದ ಹುಣ್ಣಿಮೆ ಕಾರ್ಯಕ್ರಮ ನಡೆಸಿಕೊಂಡು ಬರಲಾಗುತ್ತಿದೆ. ಸಂಘದ ಸದಸ್ಯರೆಲ್ಲರ ಸಹಕಾರ ಇದ್ದಾಗ ಮಾತ್ರ ಚೆನ್ನಾಗಿ ಕಾರ್ಯಕ್ರಮ ನಡೆಸಲು ಸಾಧ್ಯ. ಎಲ್ಲರಲ್ಲೂ ಒಂದಿಲ್ಲೊಂದು ಪ್ರತಿಭೆ ಇದ್ದೇ ಇರುತ್ತ ಅದನ್ನು ಅನಾವರಣಗೊಳಿಸುವ ವೇದಿಕೆ ಸಂಸ್ಥಾಪಕಅಧ್ಯಕ್ಷೆ ಗೌರಮ್ಮಬಸವೇಗೌಡರು ಒದಗಿಸಿದ್ದು ಸ್ಮರಣಿಯ ಎಂದರು.

ಸದಸ್ಯರಾದ ತನುಜಾರಾಜೇಶ್ ಮತ್ತು ಸಹನಾರಾಜೀವ್ ಕಾರ್ಯಕ್ರಮ ನಿರೂಪಿಸಿದರು. ಸುನೀತಾಮಂಜುನಾಥ್ ಪ್ರಾರ್ಥಿಸಿ. ನವೀನಾಮಹೇಶ್ ಸ್ವಾಗತಿಸಿ, ಅನಿತಾಪ್ರಶಾಂತ ವಂದಿಸಿದರು. ಮಾನಸಹರೀಶ್ ಪರಿಚಯಿಸಿ, ದಾಕ್ಷಾಯಣಿಬಸರಾಜು ತಂಡ ನಾಡಗೀತೆ ಹಾಡಿದರು. ಉಪಾಧ್ಯಕ್ಷೆ ಕುಸುಮಾರಾಜಶೇಖರ, ಕಾರ್ಯದರ್ಶಿ ಆಶಾಹೇಮಂತ, ಗೌರವಾಧ್ಯಕ್ಷೆ ಭಾರತಿಶಿವರುದ್ರಪ್ಪ, ಸಹಕಾರ್ಯದರ್ಶಿ ಮಧುಮತಿಶಿವಕುಮಾರ, ಸಂಘಟನಾಕಾರ್ಯದರ್ಶಿ ಮಂಜುಳಮ್ಮ ವೇದಿಕೆಯಲ್ಲಿದ್ದರು.

ಆಲ್ದೂರಿನ ತನುಜಾರಾಜೇಶ್ ಮತ್ತು ಮಾನಸಹರೀಶರನ್ನು ಇದೇ ಸಂದರ್ಭದಲ್ಲಿ ಸನ್ಮಾನಿಸಲಾಯಿತು. ಸಾಂಸ್ಕøತಿಕ ಕಾರ್ಯಕ್ರಮಗಳಾದ ಜಾನಪದನೃತ್ಯ, ಕೋಲಾಟ ಹಾಗೂ ರೂಪಕ ಆಕರ್ಷಕವಾಗಿತ್ತು . ವಿವಿಧ ಆಟೋಟಸ್ಪರ್ಧಾ ವಿಜೇತರಿಗೆ ವೀಣಾಮಲ್ಲಿಕಾರ್ಜುನ್ ಬಹುಮಾನ ವಿತರಿಸಿದರು.

ವರದಿ : ಪ್ರಭುಲಿಂಗಶಾಸ್ತ್ರಿ

 

Leave a Reply

Your email address will not be published. Required fields are marked *

ಕ್ಷಮಿಸಿ ಹಕ್ಕು ಸೌಮ್ಯ ಕಾಯ್ದಿರಿಸಲಾಗಿದೆ
ಕ್ಷಮಿಸಿ ಹಕ್ಕು ಸೌಮ್ಯ ಕಾಯ್ದಿರಿಸಲಾಗಿದೆ
ಕ್ಷಮಿಸಿ ಹಕ್ಕು ಸೌಮ್ಯ ಕಾಯ್ದಿರಿಸಲಾಗಿದೆ
ಕ್ಷಮಿಸಿ ಹಕ್ಕು ಸೌಮ್ಯ ಕಾಯ್ದಿರಿಸಲಾಗಿದೆ
ಕ್ಷಮಿಸಿ ಹಕ್ಕು ಸೌಮ್ಯ ಕಾಯ್ದಿರಿಸಲಾಗಿದೆ
ಕ್ಷಮಿಸಿ ಹಕ್ಕು ಸೌಮ್ಯ ಕಾಯ್ದಿರಿಸಲಾಗಿದೆ
ಕ್ಷಮಿಸಿ ಹಕ್ಕು ಸೌಮ್ಯ ಕಾಯ್ದಿರಿಸಲಾಗಿದೆ