IMG-20250811-WA0015

 

 

ಶಿಸ್ತು, ರಾಷ್ಟ್ರೀಯತೆ ಮತ್ತು ತಾಳ್ಮೆ ನಮ್ಮದಾಗಬೇಕು. ಪ್ರತಿಷ್ಠೆಗಿಂತ ಪರಿವರ್ತನೆ ಆದ್ಯತೆಯಾಗಬೇಕು ಎಂದು ಚಿಂತಕ-ಸಾಹಿತಿ-ವಾಗ್ಮಿ ಚಟ್ನಳ್ಳಿಮಹೇಶ್ ನುಡಿದರು.

ಮಾಧ್ಯಮ ಸಂಸ್ಕøತಿ ಪ್ರತಿಷ್ಠಾನ, ಅಖಿಲ ಭಾರತೀಯ ಸಾಹಿತ್ಯ ಪರಿಷದ್ ಹಾಗೂ ಐಸಿರಿ ಫೌಂಡೇಶನ್ ಸಹಯೋಗದೊಂದಿಗೆ ಜುಲೈ26 ರಿಂದ ಆಗಸ್ಟ್24ರ ವರೆಗೆ ಆಯೋಜಿಸಿರುವ ‘ಅಂಗಳದೆಡೆಗೆ ಮಂಗಳ ನುಡಿ-ನಡಿಗೆ’ ‘ಶ್ರಾವಣ ಮಾಸದ ಪ್ರವಚನ ಮಾಲಿಕೆ’ಯ ಅಂಗವಾಗಿ ಕಲ್ಯಾಣ ನಗರದ ಕಲ್ಮರುಡಪ್ಪ ಮನೆಯಂಗಳದಲ್ಲಿ ಆಯೋಜಿಸಿದ್ದ ಕಾರ್ಯಕ್ರಮದಲ್ಲಿ ಅವರು ರಕ್ಷಾಬಂಧನದೊಂದಿಗೆ ಉಪನ್ಯಾಸ ನೀಡಿದರು.

ಮನೆಗಳು ಮಹಾಮನೆಗಳಾಗಬೇಕು. ಕಷ್ಟದಲ್ಲಿರುವವರಿಗೆ ಸಾಂತ್ವನ ಹೇಳುವ, ನೊಂದವರಿಗೆ ನೆರವು ನೀಡುವ, ನೈತಿಕವಾಗಿ ಶಕ್ತಿ ತುಂಬುವ ತಾಣಗಳಾಗಬೇಕು. ಸಂವಹನ, ಸಮಾಲೋಚನೆ, ಚರ್ಚೆ, ಮಾತುಕತೆಗಳ ಮೂಲಕ ಬದುಕಿನ ಜಂಜಾಟವನ್ನು ಸರಿದೂಗಿಸಬಹುದು. ಭಾವನೆಗಳು ಬಾಂಧವ್ಯವನ್ನು ಬೆಸೆಯುತ್ತದೆ ಎಂದ ಚಟ್ನಳ್ಳಿಮಹೇಶ್, ಶ್ರಾವಣದಲ್ಲಿ ಬರುವ ರಕ್ಷಾಬಂಧನ ಭಾವಗಳನ್ನು ಬೆಸೆಯುತ್ತದೆ ಎಂದರು.

ಎಲ್ಲರನ್ನೂ ಒಳಗೊಳ್ಳುವುದೇ ನಮ್ಮ ಸಂಸ್ಕøತಿ. ಬದುಕಿನ ಮೌಲ್ಯಗಳನ್ನು ಪೂರ್ವಿಕರ ಋಷಿ ಸಂಸ್ಕøತಿಯಲ್ಲಿ ಕಾಣುತ್ತೇವೆ. ಸಂಸ್ಕಾರ ಕೊಡುವುದರಿಂದ ಬದುಕಿನ ಪ್ರತಿ ಘಳಿಗೆಯನ್ನು ರಸಘಳಿಗೆಯಾಗಿಸಿಕೊಳ್ಳಬಹುದು ಎಂದರು.

ಬದುಕಿನ ಅತಿದೊಡ್ಡ ಸಮಸ್ಯೆ ‘ನಾನು’ ಎಂಬುದು. ಅತಿದೊಡ್ಡ ದುರಂತ ಕೆಡುಕಿಗೆಲ್ಲ ‘ನೀನು’ ಎಂದು ದೂರುವುದು. ವಾಸ್ತವವಾಗಿ ಎಲ್ಲ ಸಂದರ್ಭದಲ್ಲೂ ‘ನಾವು’ ಎಂಬುದೇ ನಿಜವಾದ ಪರಿಹಾರ. ಒಳಿತಿಗೆಲ್ಲ ನಾನು, ಕೆಡುಕಿಗೆಲ್ಲ ನೀನು ಎಂಬುದನ್ನು ಬಿಟ್ಟು ಸಮಷ್ಠಿಭಾವದಿಂದ ಮುನ್ನಡೆಯುವುದರಲ್ಲಿ ಒಳಿತಿದೆ. ಪ್ರತಿಷ್ಠೆಗಿಂತ ಪರಿವರ್ತನೆ ನಮ್ಮೆಲ್ಲರ ಆದ್ಯತೆಯಾದರೆ ಬದುಕು ಹಸನಾಗುತ್ತದೆ ಎಂದರು.

ಹಿರಿಯರನ್ನು ನಾವು ಗೌರವಿಸಿದರೆ ಮಕ್ಕಳೂ ಅನುಕರಿಸುತ್ತಾರೆ. ಅಜ್ಜ, ಅಜ್ಜಿಯರು ಜೀವನಾನುಭವದ ಗಣಿ. ಅವರೊಂದಿಗೆ ಮಕ್ಕಳನ್ನು ಬೆಳೆಸಿದರೆ ಸಣ್ಣಸಣ್ಣ ಕಥೆಗಳು, ಅನುಭವೋಕ್ತಿಗಳ ಮೂಲಕ ಮೌಲ್ಯಗಳ ಪಾಠ ಕಲಿಸುತ್ತಾರೆ. ಕೋಪತಾಪಗಳನ್ನು ಸಂವಾದದ ಮೂಲಕವೇ ಶಮನಗೊಳಿಷುವ ಹಿರಿಯರು ಜಗತ್‍ಪ್ರಜ್ಞೆಯನ್ನು ಕಲಿಸುತ್ತಾರೆಂದರು.

ಶಾಲಾ ಅಂಕಗಳಿಗೆ ಕೊಡುವ ಪ್ರಾಶಸ್ತ್ಯವನ್ನು ‘ಅಂಕಿ’ಗೂ ಕೊಟ್ಟರೆ ಮಕ್ಕಳು ಜವಾಬ್ದಾರಿ ಅರಿಯುತ್ತಾರೆ. ಪ್ರೀತಿ ಬಾಂಧವ್ಯ-ಸೌಹಾರ್ದತೆ ಮನೆಗಳಲ್ಲಿ ಅರಳಿದರೆ ಸಮಾಜದಲ್ಲೂ ಪ್ರಜ್ವಲಿಸುತ್ತದೆ. ಮಾತುಗಳು ಮನಸ್ಸನ್ನು ಅರಳಿಸಬೇಕೆ ಹೊರತು, ಕೆರಳಿಸಬಾರದು. ಆಚಾರಕ್ಕೆ ಅರಸಾಗಿ ನೀತಿಗೆ ಪ್ರಭುವಾಗಿ, ಮಾತಿನಲ್ಲಿ ಚೂಡಮಣಿಯಾಗಿ ಲೋಕಕ್ಕೆ ಬೆಳಕಾಗಿ ಮಕ್ಕಳು ಬೆಳೆಯಬೇಕೆಂಬ ಜಾನಪದ ತಾಯಿಯ ಆಶಯ ಸಾಕಾರಗೊಳ್ಳಬೇಕು ಎಂದರು.

ಬಿಜೆಪಿ ರೈತಮೋರ್ಚಾ ರಾಜ್ಯಕಾರ್ಯದರ್ಶಿ ಎಚ್.ಸಿ.ಕಲ್ಮರುಡಪ್ಪ ಮಾತನಾಡಿ ಶ್ರಾವಣಮಾಸ ಸಂಸ್ಕøತಿ-ಸಂಸ್ಕಾರಗಳನ್ನು ಪಸರಿಸುವ ಸಂದರ್ಭ. ರಕ್ಷಾಬಂಧನ ಪರಸ್ಪರ ಸ್ನೇಹ-ಸೌಹಾರ್ದತೆ-ರಾಷ್ಟ್ರೀಯತೆ ನೆನಪಿಸುವ ಪುನರ್‍ಮನನಗೊಳಿಸುವ ಕಾರ್ಯ ಎಂದರು.

ಜಿ.ಪಂ.ಮಾಜಿಸದಸ್ಯ ನಿರಂಜನ ಮಾತನಾಡಿ ಮಹೇಶಣ್ಣರ ನೇತೃತ್ವದಲ್ಲಿ ಶ್ರಾವಣಮಾಸ ಪರ್ಯಂತ ಮನೆ-ಮನೆಗಳಲ್ಲಿ ಒಳ್ಳೆಯ ಮಾತು ಹಾಗೂ ಗಾಯನದ ಮೂಲಕ ಸದ್ವಿಚಾರಗಳನ್ನು ಪ್ರಚುರಪಡಿಸುತ್ತಿರುವ ಶ್ರಾವಣ ಅಭಿಯಾನ ಸಮಾಜ ಪರಿವರ್ತನೆಗೆ ಸಹಕಾರಿ ಎಂದರು.

ಹಿರಿಯ ರೈತಮಹಿಳೆ ಪಾರ್ವತಮ್ಮ ಜ್ಯೋತಿಬೆಳಗಿ ಕಾರ್ಯಕ್ರಮ ಉದ್ಘಾಟಿಸಿದರು. ಬೇಲೂರಿನ ಚಂದನ್ ಸಿರಿಕಂಠದಲ್ಲಿ ಶ್ರಾವಣ ಗೀತಗಾಯನ ಗಮನಸೆಳೆಯಿತು. ಬಾಲಕ ಖುಷಿಕ್ ವಚನ ಹಾಡಿದನು.

ಐಸಿರಿ ಫೌಂಡೇಶನ ಅಧ್ಯಕ್ಷ ರೋಹನಭಾರ್ಗವಪುರಿ ಸ್ವಾಗತಿಸಿ, ಮಾ.ಸಂ.ಪ್ರ.ಅಧ್ಯಕ್ಷ ಪ್ರಭುಲಿಂಗಶಾಸ್ತ್ರಿ ವಂದಿಸಿದರು. ಉಪನ್ಯಾಸಕ ಈಶ್ವರಪ್ಪ ಮತ್ತು ವಿದ್ಯಾರ್ಥಿನಿ ಸಿಂಧೂ ಅನಿಸಿಕೆ ವ್ಯಕ್ತಪಡಿಸಿದರು. ಕಲ್ಯಾಣನಗರ ಸಾಹಿತ್ಯವೇದಿಕೆ ಅಧ್ಯಕ್ಷ ಲೋಕೇಶ್ವಪ್ಪ ಉಪನ್ಯಾಸಕ ಷಣ್ಮುಖಪ್ಪ, ಸಿಡಿಎ ಅಧಿಕಾರಿ ಶಿವಕುಮಾರ್, ಇಂಜಿನಿಯರ್ ಸಂತೋಷ್, ನಯನಾಕಲ್ಮರುಡಪ್ಪ, ವಕೀಲ ಜಗದೀಶ್, ದೀಪಕದೊಡ್ಡಯ್ಯ, ಜಿ.ಪಂ.ಮಾಜಿಉಪಾಧ್ಯಕ್ಷ ಸೋಮಶೇಖರ್ ಮತ್ತಿತರರು ಪಾಲ್ಗೊಂಡಿದ್ದರು.

Leave a Reply

Your email address will not be published. Required fields are marked *

ಕ್ಷಮಿಸಿ ಹಕ್ಕು ಸೌಮ್ಯ ಕಾಯ್ದಿರಿಸಲಾಗಿದೆ
ಕ್ಷಮಿಸಿ ಹಕ್ಕು ಸೌಮ್ಯ ಕಾಯ್ದಿರಿಸಲಾಗಿದೆ
ಕ್ಷಮಿಸಿ ಹಕ್ಕು ಸೌಮ್ಯ ಕಾಯ್ದಿರಿಸಲಾಗಿದೆ
ಕ್ಷಮಿಸಿ ಹಕ್ಕು ಸೌಮ್ಯ ಕಾಯ್ದಿರಿಸಲಾಗಿದೆ
ಕ್ಷಮಿಸಿ ಹಕ್ಕು ಸೌಮ್ಯ ಕಾಯ್ದಿರಿಸಲಾಗಿದೆ
ಕ್ಷಮಿಸಿ ಹಕ್ಕು ಸೌಮ್ಯ ಕಾಯ್ದಿರಿಸಲಾಗಿದೆ
ಕ್ಷಮಿಸಿ ಹಕ್ಕು ಸೌಮ್ಯ ಕಾಯ್ದಿರಿಸಲಾಗಿದೆ