ಕನ್ನಡ ಸಾಹಿತ್ಯ ಪರಿಷತ್ತು ಬಣಕಲ್ ಹೋಬಳಿ ಘಟಕದ ವತಿಯಿಂದ ತೇಜಸ್ವಿ ಅವರ ಜನ್ಮ ದಿನಾಚರಣೆ ಹಾಗೂ ತೇಜಸ್ವಿ ಚಿತ್ರ ಬಿಡಿಸುವ ಸ್ಪರ್ಧೆ . ಕಾರ್ಯಕ್ರಮವನ್ನು ಸರ್ಕಾರಿ ಪದವಿಪೂರ್ವ ಕಾಲೇಜು ಬಣಕಲ್ ನಲ್ಲಿ ಅರ್ಥ ಪೂರ್ಣವಾಗಿ ಆಚರಿಸಲಾಯಿತು.
ಕಾರ್ಯಕ್ರಮ ಉದ್ಘಾಟಿಸಿದ ಬಣಕಲ್ ಜೇಸಿಐ ಸ್ಥಾಪಕ ಅಧ್ಯಕ್ಷ ಸುರೇಶ್ ಶೆಟ್ಟಿ ಮಾತನಾಡಿ ; ತೇಜಸ್ವಿ ಅವರು ಬರೆದಂತೆ ಬದುಕಿದ ಮೇರು ಸಾಹಿತಿ. ನಮ್ಮ ಮಲೆನಾಡಿನಲ್ಲಿ ಬದುಕಿದ್ದೆ ಒಂದು ವಿಸ್ಮಯ. ಅವರ ಕರ್ವಾಲೋ. ಅಬಚೂರಿನ ಪೋಸ್ಟ್ ಆಫೀಸ್. ನಮ್ಮ ಮಲೆನಾಡಿನ ನೈಜ ಘಟನೆಗಳನ್ನು ಮೆಲುಕು ಹಾಕುತ್ತಾದೆ ಎಂದರು.
ಉಪನ್ಯಾಸ ನೀಡಿದ ಮಂಜುನಾಥ ಸ್ವಾಮಿ ಡಿ. ಎಂ. ಸಾಹಿತಿಗಳು ಮಲೆನಾಡಿನ ಪರಿಸರದಲ್ಲಿ ತನ್ನ ತಂದೆಯ ಹೆಸರು ಬಳಸಿಕೊಂಡು ಯಾವುದೇ ಪ್ರಶಸ್ತಿ. ಅಧಿಕಾರಕ್ಕೆ ಆಸೆ ಪಡದೆ ತನ್ನ ಇಚ್ಛೆಯಂತೆ ಬದುಕಿದ ಮೇರು ಸಾಹಿತಿ. ತನ್ನ ಸುತ್ತ ಮುತ್ತಲಿನ ಪರಿಸರ. ಪ್ರಾಣಿ. ಪಕ್ಷಿ ತನ್ನ ಮನೆಯಲ್ಲಿನ ಸದಸ್ಯರನ್ನು ಕಥ ವಸ್ತುಗಳನ್ನು ಮಾಡಿಕೊಂಡು ಜೋಗಾರಿ ಕ್ರಾಸ್. ಕಿರುಗೂರೀನ ಗಾಯಳಿಗಳು. ಮಹಾ. ಪಾಲಯಾನ. ಬಿರಿಯಾನಿ ಕರಿಯಪ್ಪ. ಮಂದಣ್ಣ.ಪ್ಯಾರ.ಹಾರೋವ ಓತಿ .ಹೀಗೆ ಅವರ ಸಾಹಿತ್ಯದ ಸಾಲುಗಳಲ್ಲಿ ಪರಿಚಯಿಸುತ್ತ ಕೂಟ್ಟಿಗೆಹಾರ .ಹ್ಯಾಂಡ್ ಪೊಸ್ಟ್.ಅಬಚೂರು. ಕಿರುಗೂರು. ಊರುಗಳ ಬಗ್ಗೆ ತನ್ನ ಸಾಹಿತ್ಯದ ಸಾಲುಗಳಲ್ಲಿ ಬರೆಯುತ್ತಾ ಬರೆದಂತೆ ಬದುಕಿದವರು ಎಂದು ಹೇಳಿದರು.
ಮಗ್ಗಲಮಕ್ಕಿ ಗಣೇಶ್ ತೇಜಸ್ವಿ ಅವರ ನಡುವೆ ಕಳೆದ ದಿನಗಳನ್ನು ನೆನಪು ಮಾಡುತ್ತ. ತೇಜಸ್ವಿ ಅವರು ಸಮಯ ಪ್ರಜ್ಞೆ . ಮತ್ತು ಕಾಮನ್ ಸೆನ್ಸ್ ಗೆ ತುಂಬಾ ಬೆಲೆ ಕೊಟ್ಟವರು. ಅವರಲ್ಲಿ ಸಹ ಹಾಸ್ಯ ಪ್ರಜ್ಞೆ. ಇತ್ತು ಅವರು ಹೇಳೋದು ಕೆಲವರಿಗೆ ಇವರು ತುಂಬಾ ಸ್ಟ್ರಿಕ್ಟ್ ಅಂತ ಅನಿಸುತ್ತಿತ್ತು ಅಷ್ಟೇ. ಶಿಕಾರಿ ಮಾಡೋದು ಅವರಿಗೆ ತುಂಬ ಇಷ್ಟವಾದ ಹವ್ಯಾಸ ಮೀನು ಶಿಕಾರಿ ತುಂಬಾ ಇಷ್ಟ ಪಡುತ್ತಿದ್ದರು ಎಂದು ಹಂಚಿಕೊಂಡರು.
ಲೋಕೇಶ್ ಬೆಟ್ಟಗೆರೆ ಅಧ್ಯಕ್ಷತೆ ವಹಿಸಿದ್ದು. ತಾಲೂಕು ಅಧ್ಯಕ್ಷರಾದ ಡಿ. ಕೆ. ಗೌಡ ತೇಜಸ್ವಿ ಅವರ ಬಾವಚಿತ್ರಕ್ಕೆ ಪುಷ್ಪ ನಮನ ಸಲ್ಲಿಸಿ ನಾನು ಬಿ. ಎಸ್. ಎನ್.ಎಲ್. ನೌಕರರು ಆಗಿದ್ದಾಗ ಅವರೊಂದಿಗೆ ಕಳೆದ ನೆನಪುಗಳನ್ನು ಹಂಚಿಕೊಂಡರು.
ಕಾಲೇಜು ಪ್ರಾಂಶುಪಾಲರಾದ ಸತೀಶ್. ಡಿ. ಕಾಲೇಜು ವಿದ್ಯಾರ್ಥಿಗಳಿಗೆ. ತೇಜಸ್ವಿ ಬಾವ ಚಿತ್ರ ಸ್ಪರ್ಧೆಯಲ್ಲಿ ವಿಜೇತರಿಗೆ ಬಹುಮಾನ ವಿತರಿಸಿದರು.
ಕಸಾಪ ಮಹಿಳಾ ಘಟಕದ ಮಾಜಿ ಅಧ್ಯಕ್ಷೆ ಅನಿತಾ ಜಗದೀಪ್ . ಸಮಾಜ ಸೇವಕರಾದ ಹಸೈನಾರ್ ಬೀಳುಗುಳ. ಬಕ್ಕಿ. ಮಂಜುನಾಥ. ಪಿ. ಕೆ. ಮಂಜುನಾಥ.ರಾಮಚಂದ್ರ. ದಿಲ್ ದಾರ್ ಬೇಗಂ. ಕಾಲೇಜು ಉಪನ್ಯಾಸಕರು. ಮಕ್ಕಳು ಇದ್ದರು ಕ. ಸಾ. ಪ. ಗೌರವ ಕಾರ್ಯದರ್ಶಿ ಭಕ್ತೇಶ್ ಶಿಕ್ಷಕರು ಕಾರ್ಯಕ್ರಮ ನಿರೂಪಿಸಿ. ಸ್ವಾಗತಿಸಿ. ವಂದಿಸಿದರು .



