IMG-20250909-WA0315

 

 

ಬ್ರಹ್ಮಶ್ರೀ ನಾರಾಯಣಗುರು ಮಲಯಾಳಿ ಸಂಘದ ಆಶ್ರಯದಲ್ಲಿ ಬಣಕಲ್ ಮತ್ತು ಹಿರೇಬೈಲ್ ನಾರಾಯಣಗುರು ಮಲಯಾಳಿ ಸಂಘಗಳು ಸಂಯುಕ್ತವಾಗಿ ನಾರಾಯಣಗುರು ಜಯಂತಿ ಹಾಗೂ ಓಣಂ ಹಬ್ಬವನ್ನು ಭವ್ಯವಾಗಿ ಆಚರಿಸಿತು.
ಸಂಘದ ಅಧ್ಯಕ್ಷ ರಾಮಚಂದ್ರ ಮಾತನಾಡಿ, “ನಾರಾಯಣಗುರು ಅವರ ಸಂದೇಶ ಸಮಾಜಕ್ಕೆ ದಾರಿ ದೀಪ. ಇಂತಹ ಹಬ್ಬಗಳು ಸಹಕಾರ ಮತ್ತು ಸೌಹಾರ್ದವನ್ನು ಬಲಪಡಿಸುತ್ತವೆ” ಎಂದು ಹೇಳಿದರು.
ಕಾರ್ಯಕ್ರಮದಲ್ಲಿ ಸಾಧಕರಿಗೆ, 10ನೇ ಮತ್ತು 12ನೇ ತರಗತಿ ವಿದ್ಯಾರ್ಥಿಗಳಿಗೆ ಸನ್ಮಾನ ನೀಡಲಾಯಿತು. ಹೂವಿನ ರಂಗೋಲಿ, ಮಹಿಳೆಯರ ಮ್ಯೂಸಿಕಲ್ ಚೇರ್ ಹಾಗೂ ಮಕ್ಕಳ ಮ್ಯೂಸಿಕಲ್ ಚೇರ್ ಸ್ಪರ್ಧೆಗಳು ಜರುಗಿದವು.
ಮುಖ್ಯ ಅತಿಥಿಗಳಾಗಿ ಸರ್ಕಾರಿ ಪ್ರೌಢಶಾಲೆ ಕೊಟ್ಟಿಗೆಹಾರದ ಗಣಿತ ಶಿಕ್ಷಕ ಶಿವರಾಮ ಗೌಡ ಪಿ., ಜಿಲ್ಲಾ ಅತ್ಯುತ್ತಮ ಶಿಕ್ಷಕಿ ಹಾಗೂ ಸಾವಿತ್ರಿಬಾಯಿ ಪ್ರಶಸ್ತಿ ವಿಜೇತೆ ಅಶ್ವಿನಿ ಎಸ್.ಜಿ., ಮಲಯಾಳಂ ತಾಲೂಕು ಸೇವಾ ಸಮಿತಿ ಮೂಡಿಗೆರೆ ಅಧ್ಯಕ್ಷ ಪಿ.ಆರ್. ಸುಧಾಕರ್ ಬಿಳಗುಳ ಹಾಗೂ ಮಹಿಳಾ ಅಧ್ಯಕ್ಷೆ ಸುಮಿತ್ರಾ ವೇಳಾದನ್ ಭಾಗವಹಿಸಿ ಸನ್ಮಾನಿತರಾದರು.
ಕಾರ್ಯಕ್ರಮದಲ್ಲಿ ಉಪಾಧ್ಯಕ್ಷ ಜಗನ್ಮೋಹನ್, ಪ್ರಧಾನ ಕಾರ್ಯದರ್ಶಿ ಆರ್. ಕೃಷ್ಣ ಬಿಳಗುಳ, ಉಪ ಕಾರ್ಯದರ್ಶಿ ಮೋಹನ್ ಕುನ್ನಳ್ಳಿ, ಖಜಾಂಚಿ ಉಣ್ಣೆಕೃಷ್ಣ, ಸಂಘಟನಾ ಕಾರ್ಯದರ್ಶಿ ಓಮನ್ ಸುಬ್ರಹ್ಮಣ್ಯ, ಗೌರವಾಧ್ಯಕ್ಷರು ಮೋಹನ್ ಗಂಗನಮಕ್ಕಿ ಹಾಗೂ ಸುಬ್ರಹ್ಮಣ್ಯ, ಸಹಕಾರ್ಯದರ್ಶಿ ವೇಲಾದ, ಕಾನೂನು ಸಲಹೆಗಾರ ಪರೀಕ್ಷಿತ್ ಸೇರಿದಂತೆ ಸಂಘದ ಸದಸ್ಯರು ಉಪಸ್ಥಿತರಿದ್ದರು.
ವಿಜೇತರಿಗೆ ಬಹುಮಾನ ವಿತರಣೆ ನಡೆಸಲಾಯಿತು.

Leave a Reply

Your email address will not be published. Required fields are marked *

ಕ್ಷಮಿಸಿ ಹಕ್ಕು ಸೌಮ್ಯ ಕಾಯ್ದಿರಿಸಲಾಗಿದೆ
ಕ್ಷಮಿಸಿ ಹಕ್ಕು ಸೌಮ್ಯ ಕಾಯ್ದಿರಿಸಲಾಗಿದೆ
ಕ್ಷಮಿಸಿ ಹಕ್ಕು ಸೌಮ್ಯ ಕಾಯ್ದಿರಿಸಲಾಗಿದೆ
ಕ್ಷಮಿಸಿ ಹಕ್ಕು ಸೌಮ್ಯ ಕಾಯ್ದಿರಿಸಲಾಗಿದೆ
ಕ್ಷಮಿಸಿ ಹಕ್ಕು ಸೌಮ್ಯ ಕಾಯ್ದಿರಿಸಲಾಗಿದೆ
ಕ್ಷಮಿಸಿ ಹಕ್ಕು ಸೌಮ್ಯ ಕಾಯ್ದಿರಿಸಲಾಗಿದೆ
ಕ್ಷಮಿಸಿ ಹಕ್ಕು ಸೌಮ್ಯ ಕಾಯ್ದಿರಿಸಲಾಗಿದೆ