9Mudigere2A

 

 

ಜೇಸಿಐ ಗೋಣಿಬೀಡು ಹೊಯ್ಸಳ ಘಟಕದಿಂದ ಸೆಪ್ಟಂಬರ್ 9 ರಿಂದ 15ರವರೆಗೆ ನಡೆಯುವ ಜೇಸಿ ಸಪ್ತಾಹ ಕಾರ್ಯಕ್ರಮಕ್ಕೆ ಜೇಸಿ ನ್ಯಾಷನಲ್ ಕೋ ಆರ್ಡಿನೇಟರ್ ಯಶಸ್ವಿನಿ ಅವರು ಜೇಸಿ ಧ್ವಜಾರೋಹಣದ ಮೂಲಕ ಚಾಲನೆ ನೀಡಲಾಗಿದೆ ಎಂದು ಸಂಸ್ಥೆ ಅಧ್ಯಕ್ಷ ಬಿ.ಎಂ.ಜಗತ್ ಹೇಳಿದರು.

ಅವರು ಮಂಗಳವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿ, ಜೇಸಿಐ ಗೋಣಿಬೀಡು ಹೊಯ್ಸಳದಿಂದ ಸಪ್ತಾಹದ ಅಂಗವಾಗಿ ಸೆ.10ರಂದು ಕೌಶಲ್ಯ ತರಬೇತಿ, ನೀರುದ್ಯೋಗಿಗಳಿಗೆ ಕಾರ್ಯಗಾರ, ಸೆ.11ರಂದು ರಸಪ್ರಶ್ನೆ ಮತ್ತು ಯೋಗ ಶಿಬಿರ ಕಾರ್ಯಕ್ರಮ, ಸೆ12 ರಂದು ಆರೋಗ್ಯ ಶಿಬಿರ, ಸೆ13 ರಂದು ನೆಟ್ ವಕಿರ್ಂಗ್ ಮೀಟ್ ಮತ್ತು ವ್ಯವಹಾರ ನಾಮಫಲಕ ಅಳವಡಿಕೆ, ಸೆ.14ರಂದು ಸೌಲಭ್ಯ ವಂಚಿತರಿಗೆ ಕಾರ್ಯಗಾರ ಮತ್ತು ವ್ಯವಾಹರ ತರಬೇತಿ, ಸೆ.15ರಂದು ನಡೆಯುವ ಸಮರೋಪ ಸಮಾರಂಭದಲ್ಲಿ ಸಾಧಕರಿಗೆ ಸನ್ಮಾನ, ಕಮಲ ಪತ್ರ ಪ್ರಶಸ್ತಿ ಪ್ರಧಾನ ನಡೆಯಲಿದೆ. ಮುಖ್ಯ ಅತಿಥಿಯಾಗಿ ವಲಯ ಅಧ್ಯಕ್ಷ ವಿಜಯ್, ಉಪಾಧ್ಯಕ್ಷ ಅಕ್ಷಯ್‍ಕುಮಾರ್, ನಾಗಮಂಗಲದ ಸಿಪಿಐ ನಿರಂಜನ್‍ಕುಮಾರ್ ಆಗಮಿಸಲಿದ್ದಾರೆ. ಅಲ್ಲದೇ ಜೇಸಿ ವಲಯ 14ರಲ್ಲಿ ನಮ್ಮ ಸಂಸ್ಥೆಗೆ ಪ್ರಯಾಸ್‍ನಲ್ಲಿ ನ್ಯಾಷಿನಲ್ ಅವಾರ್ಡ್ ಬಂದಿರುವುದು ಸಂಸ್ಥೆಗೆ ಹಮ್ಮೆ ತಂದಿದೆ ಎಂದು ಹರ್ಷ ವ್ಯಕ್ತಪಡಿಸಿದರು.

ಗೋಷ್ಠಿಯಲ್ಲಿ ಉದಯಕುಮಾರ್ ಉಪಸ್ಥಿತರಿದ್ದರು.

Leave a Reply

Your email address will not be published. Required fields are marked *

ಕ್ಷಮಿಸಿ ಹಕ್ಕು ಸೌಮ್ಯ ಕಾಯ್ದಿರಿಸಲಾಗಿದೆ
ಕ್ಷಮಿಸಿ ಹಕ್ಕು ಸೌಮ್ಯ ಕಾಯ್ದಿರಿಸಲಾಗಿದೆ
ಕ್ಷಮಿಸಿ ಹಕ್ಕು ಸೌಮ್ಯ ಕಾಯ್ದಿರಿಸಲಾಗಿದೆ
ಕ್ಷಮಿಸಿ ಹಕ್ಕು ಸೌಮ್ಯ ಕಾಯ್ದಿರಿಸಲಾಗಿದೆ
ಕ್ಷಮಿಸಿ ಹಕ್ಕು ಸೌಮ್ಯ ಕಾಯ್ದಿರಿಸಲಾಗಿದೆ
ಕ್ಷಮಿಸಿ ಹಕ್ಕು ಸೌಮ್ಯ ಕಾಯ್ದಿರಿಸಲಾಗಿದೆ
ಕ್ಷಮಿಸಿ ಹಕ್ಕು ಸೌಮ್ಯ ಕಾಯ್ದಿರಿಸಲಾಗಿದೆ