tarikere

 

 

ಚಿಕ್ಕಮಗಳೂರು ಜಿಲ್ಲೆಯ ಲಕ್ಕವಳ್ಳಿ, ಕಡೂರು ಮತ್ತು ಚಿಕ್ಕಮಗಳೂರು ನಗರ ಪೊಲೀಸ್ ಠಾಣೆಗಳ ವ್ಯಾಪ್ತಿಯಲ್ಲಿ ವರದಿಯಾಗಿದ್ದ 4 ಮನೆಗಳ್ಳತನ ಪ್ರಕರಣಗಳಲ್ಲಿ ಎರಡು ಜನ ಅಂತರ್-ಜಿಲ್ಲಾ ಆರೋಪಿಗಳನ್ನು ತರೀಕೆರೆ ಉಪವಿಭಾಗದ ವಿಶೇಷ ಪೊಲೀಸ್ ತಂಡ ಯಶಸ್ವಿಯಾಗಿ ಬಂಧಿಸಿ, ₹32.74 ಲಕ್ಷ ಮೌಲ್ಯದ ಸ್ವತ್ತನ್ನು ವಶಪಡಿಸಿಕೊಂಡಿದೆ.

ಬಂಧಿತ ಆರೋಪಿತರು ಕಾರುಗಳಲ್ಲಿ ಸಂಚರಿಸಿ, ಬೀಗ ಹಾಕಿದ ಮನೆಗಳನ್ನು ಗುರುತಿಸುತ್ತಿದ್ದರು. ಕಬ್ಬಿಣದ ರಾಡ್ ಹಾಗೂ ಹೈಡ್ರಾಲಿಕ್ ಕಟರ್ ಬಳಸಿ ಕಿಟಕಿ ಸರಳು ಮತ್ತು ಬೀಗಗಳನ್ನು ಮುರಿದು ಕ್ಷಣಾರ್ಧದಲ್ಲಿ ಕಳ್ಳತನ ಮಾಡುತ್ತಿದ್ದರು. ಸಾಕ್ಷ್ಯ ನಾಶಪಡಿಸಲು ಸಿಸಿಟಿವಿ ಡಿವಿಆರ್‌ಗಳನ್ನೂ ಸಹ ಹೊತ್ತೊಯ್ಯುತ್ತಿದ್ದರು.

ಪೊಲೀಸ್ ತಂಡವು ಆರೋಪಿತರಿಂದ ಒಟ್ಟು ₹32.74 ಲಕ್ಷ ಮೌಲ್ಯದ ಸ್ವತ್ತನ್ನು ವಶಪಡಿಸಿಕೊಂಡಿದೆ:

160 ಗ್ರಾಂ ಚಿನ್ನಾಭರಣಗಳು, ಬೆಳ್ಳಿ ನಾಣ್ಯ ಮತ್ತು ₹50,000 ನಗದು, ಕೃತ್ಯಕ್ಕೆ ಬಳಸಿದ ಟಾಟಾ ಆಲ್ಟ್ರೋಜ್ ಕಾರು, ಹೈಡ್ರಾಲಿಕ್ ಸ್ಟೀಲ್ ಕಟರ್

ಪೊಲೀಸ್ ತಂಡದಲ್ಲಿ ಸಿಪಿಐ ತರೀಕೆರೆ ಗಿರೀಶ್ ಬಿ ವಿ, ಪಿಎಸ್ಐ ಲಕ್ಕವಳ್ಳಿ. ವಿಶ್ವನಾಥ್ ಎನ್ ಸಿ, ಪಿಎಸ್ಐ ಕಡೂರು ಧನಂಜಯ್ ಟಿ ಹೆಚ್ ಹಾಗೂ ಪೊಲೀಸ್ ಸಿಬ್ಬಂದಿಗಳಾದ. ಶಿವಕುಮಾರ್, ಅವಿನಾಶ್, ಪುನೀತ್, ಡಿ ವಿ ಹೇಮಂತ ಕುಮಾರ್, ರಾಜಪ್ಪ ಬಿ ಹೆಚ್, ಮಧುಕುಮಾರ್, ಇರ್ಫಾನ್, ನಯಾಜ್ ಅಂಜುಂ ಮತ್ತು ಅಬ್ದುಲ್ ರಬ್ಬಾನಿ ರವರು ಕಾರ್ಯನಿರ್ವಹಿಸಿರುತ್ತಾರೆ.

ಸಾರ್ವಜನಿಕರ ಗಮನಕ್ಕೆ: ನಿಮ್ಮ ಸುರಕ್ಷತೆಗಾಗಿ ಈ ಕ್ರಮಗಳನ್ನು ಪಾಲಿಸಿ:-

  • ಬಲಿಷ್ಠ ಬೀಗ ಬಳಸಿ: ಮನೆಗೆ ಕೇವಲ ಸಾಮಾನ್ಯ ಬೀಗಗಳ ಬದಲಾಗಿ ಸುಧಾರಿತ ‘ಲಿವರ್ ಲಾಕ್’ ಅಥವಾ ‘ಸೆಂಟ್ರಲ್ ಲಾಕಿಂಗ್’ ಅಳವಡಿಸಿ. ಕಿಟಕಿಗಳಿಗೆ ಬಲಿಷ್ಠವಾದ ಕಬ್ಬಿಣದ ಸರಳುಗಳನ್ನು (Grills) ಅಳವಡಿಸಿ.
  • CCTV ಅಳವಡಿಕೆ: ಮನೆಯ ಸುತ್ತಮುತ್ತ ಸಿಸಿಟಿವಿ ಕ್ಯಾಮೆರಾ ಅಳವಡಿಸಿ, ಕಣ್ಗಾವಲು ಇರಿಸಿ. ಸಾಧ್ಯವಾದರೆ, ಮೊಬೈಲ್ ಮೂಲಕ ಲೈವ್ ವೀಕ್ಷಣೆ ಮಾಡುವ ಸೌಲಭ್ಯವಿರುವ ಕ್ಯಾಮೆರಾಗಳನ್ನು ಆರಿಸಿ.
  • ಊರಿಗೆ ಹೋಗುವಾಗ ಎಚ್ಚರ: ದೀರ್ಘಕಾಲ ಮನೆ ಬಿಟ್ಟು ಹೋಗುವಾಗ ನೆರೆಹೊರೆಯವರಿಗೆ ಅಥವಾ ಸ್ಥಳೀಯ ಠಾಣೆಗೆ ಮಾಹಿತಿ ನೀಡಿ.
  • ಬೆಲೆಬಾಳುವ ವಸ್ತುಗಳು: ಹೆಚ್ಚಿನ ನಗದು ಮತ್ತು ಚಿನ್ನಾಭರಣಗಳನ್ನು ಮನೆಯಲ್ಲಿಡುವ ಬದಲು ಬ್ಯಾಂಕ್ ಲಾಕರ್‌ನಲ್ಲಿರಿಸಿ.
  • ಬೆಳಕಿನ ವ್ಯವಸ್ಥೆ: ರಾತ್ರಿ ವೇಳೆ ಮನೆಯ ಆವರಣದಲ್ಲಿ ದೀಪಗಳು ಉರಿಯುವಂತೆ ನೋಡಿಕೊಳ್ಳಿ.

ಯಾವುದೇ ಅನುಮಾನಾಸ್ಪದ ವ್ಯಕ್ತಿ ಅಥವಾ ವಸ್ತು ಕಂಡುಬಂದಲ್ಲಿ ತಕ್ಷಣ ‘112’ ಸಹಾಯವಾಣಿಗೆ ಕರೆ ಮಾಡಿ.    ಎಂದು ಪೊಲೀಸ್ ಇಲಾಖೆ ಪ್ರಕಟಣೆಯಲ್ಲಿ ತಿಳಿಸಲಾಗಿದೆ.

Leave a Reply

Your email address will not be published. Required fields are marked *

ಕ್ಷಮಿಸಿ ಹಕ್ಕು ಸೌಮ್ಯ ಕಾಯ್ದಿರಿಸಲಾಗಿದೆ
ಕ್ಷಮಿಸಿ ಹಕ್ಕು ಸೌಮ್ಯ ಕಾಯ್ದಿರಿಸಲಾಗಿದೆ
ಕ್ಷಮಿಸಿ ಹಕ್ಕು ಸೌಮ್ಯ ಕಾಯ್ದಿರಿಸಲಾಗಿದೆ
ಕ್ಷಮಿಸಿ ಹಕ್ಕು ಸೌಮ್ಯ ಕಾಯ್ದಿರಿಸಲಾಗಿದೆ
ಕ್ಷಮಿಸಿ ಹಕ್ಕು ಸೌಮ್ಯ ಕಾಯ್ದಿರಿಸಲಾಗಿದೆ
ಕ್ಷಮಿಸಿ ಹಕ್ಕು ಸೌಮ್ಯ ಕಾಯ್ದಿರಿಸಲಾಗಿದೆ
ಕ್ಷಮಿಸಿ ಹಕ್ಕು ಸೌಮ್ಯ ಕಾಯ್ದಿರಿಸಲಾಗಿದೆ