ಆಂಜನೇಯಸ್ವಾಮಿ ಸ್ಮರಣೆಯಿಂದ ಮನುಷ್ಯನ ಜೀವನದಲ್ಲಿ ಬುದ್ದಿ, ಬಲ, ಯಶಸ್ಸು, ಧೈರ್ಯ ಹಾಗೂ ಮಾತಿನ ನೈಪುಣ್ಯತೆ ಪ್ರಾಪ್ತಿಯಾಗಲಿದೆ. ಭಗವಂತನನ್ನು ಭಕ್ತಿಯಿಂದ ಆರಾಧಿಸಿದರೆ ಕಷ್ಟವು ಮಂಜಿನಂತೆ ಕರಗಲಿದೆ ಎಂದು ಶ್ರೀ ಆದಿಚುಂಚನಗಿರಿ ಮಹಾಸಂಸ್ಥಾನದ ಮಠದ ಶ್ರೀ ನಿರ್ಮಲನಂದನಾಥ ಸ್ವಾಮೀಜಿ ಹೇಳಿದರು.
ಚಿಕ್ಕಮಗಳೂರು ತಾಲ್ಲೂಕಿನ ಅಂಬಳೆ ಹೋಬಳಿಯ ಮತ್ತಿಕೆರೆ ಗ್ರಾಮದಲ್ಲಿ ಸೋಮವಾರ ಶ್ರೀ ಆಂಜನೇಯಸ್ವಾಮಿಯ ವರ ನೂತನ ದೇವಾಲಯ ಪುನರ್ ಪ್ರತಿಷ್ಟಾಪನೆ, ಕಳಸಾರೋಹಣ ಮತ್ತು ಪ್ರವೇಶ ದ್ವಾರದ ಉದ್ಘಾಟನೆ ನೆರವೇರಿಸಿ ಬಳಿಕ ಧಾರ್ಮಿಕ ಸಭೆಯ ದಿವ್ಯ ಸಾನಿಧ್ಯ ವಹಿಸಿ ಅವರು ಆರ್ಶೀವಚನ ನೀಡಿದರು.
ಆಧುನಿಕತ ಜಗತ್ತಿನಲ್ಲಿ ತಂತ್ರಜ್ಞಾನ ಹಾಗೂ ಧರ್ಮ ಒಂದು ನಾಣ್ಯದ ಎರಡು ಮುಖಗಳು. ಆಧುನಿಕ ಭರಾಟೆಯಲ್ಲಿ ಆಧ್ಯಾತ್ಮಕತೆ, ಧರ್ಮ ಮರೆತರೆ ಸಮಾಜದಲ್ಲಿ ಬೆಲೆಸಿಗುವುದಿಲ್ಲ. ಮಕ್ಕಳನ್ನು ಕೂಡಾ ಪಾಲಕರು ಸಂಸ್ಕಾರಯುತ ಮೌಲ್ಯಗಳನ್ನು ಅಡಕಗೊಳಿಸಿ, ನಾಡಿನ ಸತ್ರ್ಪಜೆಗಳಾಗಿ ರೂಪಿಸಬೇಕು ಎಂದರು.
ದೇವಾಲಯ ಗ್ರಾಮಸ್ಥರಿಗೆ ಭಕ್ತಿಯಿಂದ ಪೂಜಿಸುವ ಮನೆಯಂತೆ. ಗ್ರಾಮಸ್ಥರ, ದಾನಿಗಳ ಸಹಕಾರದಿಂದ ಪೂರ್ಣಗೊಂಡಿರುವ ಭವ್ಯವಾದ ದೇಗುಲದಲ್ಲಿ ನಿರಂತರ ಪೂಜಾಕೈಂಕಾರ್ಯ ಜರುಗಬೇಕು. ನಮ್ಮ ಸಂಸ್ಕøತಿ, ಸಂಸ್ಕಾರ ಉಳಿಯುವುದೇ ದೇವಸ್ಥಾನದ ಗರ್ಭಗುಡಿಯಲ್ಲಿ ನೆಲೆಸಿರುವ ಭಗವಂತನಿಂದ ಎಂದು ಹೇಳಿದರು.
ಆಂಜನೇಯಸ್ವಾಮಿ ದೇಶದ ನಾನಾ ಭಾಗಗಳಲ್ಲಿ ಪೂಜಿಸಲ್ಪಡುವ ಭಗವಂತ. ಅದರಲ್ಲೂ ವಿಶೇಷವಾ ಗಿ ಕರ್ನಾಟಕ ಹಾಗೂ ಆಂಜನೇಯಸ್ವಾಮಿಗೆ ಅವಿಭಾವ ನಂಟಿದೆ. ಆಂಜನೇಯ ಜನ್ಮಸ್ಥಳವೇ ಅಂಜನಾದ್ರಿ ಬೆಟ್ಟ. ಶ್ರೀರಾಮನ ಆರಾಧಕರಾಗಿ ಸೇವೆ ಸಲ್ಲಿಸಿದ ಆಂಜನೇಯಸ್ವಾಮಿ ಸಮಾಜದ ಒಳಿತಿಗಾಗಿ ಬದುಕನ್ನು ಮೀಸಲಿಟ್ಟವರು ಎಂದರು.

ವಿಧಾನ ಪರಿಷತ್ ಸದಸ್ಯ ಎಸ್.ಎಲ್.ಬೋಜೇಗೌಡ ಮಾತನಾಡಿ ಬಾಲಗಂಗಾಧನಾಥ ಶ್ರೀಗಳು ದೇ ವಾಲಯ ಅಭಿವೃದ್ದಿ ಜೊತೆಗೆ ಸರ್ವ ಜನಾಂಗದ ಮಕ್ಕಳಿಗೆ ಶಿಕ್ಷಣ, ಆರೋಗ್ಯ ಸೇವೆ ಕಲ್ಪಿಸುವ ಸಮಾಜಕ್ಕೆ ಒಂದೂಗೂಡಿಸುವ ಕೆಲಸ ಮಾಡಿದವರು. ಆ ಸಾಲಿನಲ್ಲಿ ನಿರ್ಮಲನಂದ ಶ್ರೀಗಳು ಸಾಗುತ್ತಿರುವುದು ಹೆಮ್ಮೆ ಯ ಸಂಗತಿ ಎಂದು ಹೇಳಿದರು.
ದೇವಾಲಯ ನಿರ್ಮಿಸುವ ಜೊತೆ ಜೊತೆಗೆ ಗ್ರಾಮಸ್ಥರು ಸುತ್ತಮುತ್ತಲು ಸ್ವಚ್ಚತೆ ಕಾಪಾಡಬೇಕು. ದೇ ವಾಲಯ ಸಮಾಜದ ಒಳಿತಿಗೆ ಬೇಕಾಗಿರುವ ಪವಿತ್ರ ಕೇಂದ್ರ. ಈ ಮಂದಿರದಲ್ಲಿ ಮಾನವ ತಲೆತಗ್ಗಿಸಿಕೊ ಂಡು ತೆರಳುವಂತೆ, ಜೀವನವೆಂಬ ಹೋರಾಟದಲ್ಲಿ ಎಲ್ಲರೊಂದಿಗೆ ವಿಶ್ವಾಸದೊಂದಿಗೆ ಬದುಕಿದರೆ ಭಗವಂ ತನ ಆರ್ಶೀವಾದ ಸಿಗಲಿದೆ ಎಂದರು.
ದೇವಾಲಯ ಸಮಿತಿ ಪ್ರಧಾನ ಕಾರ್ಯದರ್ಶಿ ಎಂ.ಇ.ದಿನೇಶ್ ಮಾತನಾಡಿ ಪುರಾತನ ಇತಿಹಾಸವುಳ್ಳ ಆಂಜನೇಯಸ್ವಾಮಿ ದೇವಾಲಯ ಜೀರ್ಣೋದ್ದಾರಕ್ಕೆ ಗ್ರಾಮಸ್ಥರು ಒಪ್ಪಿಗೆ ಮೇರೆಗೆ ನೂತನ ಕಲ್ಲಿನ ಕಟ್ಟಡ ಸದೃಢವಾಗಿ ನಿರ್ಮಿಸಿದ್ದು ಗ್ರಾಮಸ್ಥರು ಹಾಗೂ ದಾನಿಗಳ ಸಹಕಾರವು ಬಹಳಷ್ಟಿದೆ ಎಂದರು.
ಈ ಸಂದರ್ಭದಲ್ಲಿ ಆದಿಚುಂಚನಗಿರಿ ಶೃಂಗೇರಿ ಶಾಖಾ ಮಠದ ಶ್ರೀ ಗುಣನಾಥ ಸ್ವಾಮೀಜಿ, ಜಿಲ್ಲಾ ಒಕ್ಕಲಿಗರ ಸಂಘದ ಅಧ್ಯಕ್ಷ ಟಿ.ರಾಜಶೇಖರ್, ಮಹಿಳಾ ಘಟಕದ ಜಿಲ್ಲಾಧ್ಯಕ್ಷೆ ರೀನಾ ಸುಜೇಂದ್ರ, ಬಿಜೆಪಿ ಮುಖಂಡ ದೀಪಕ್‍ದೊಡ್ಡಯ್ಯ ಸೇರಿದಂತೆ ಮತ್ತಿಕೆರೆ ಗ್ರಾಮಸ್ಥರು ಉಪಸ್ಥಿತರಿದ್ದರು.



