ಮೂಡಿಗೆರೆ ಪಟ್ಟಣ ಸಮೀಪದ ಬಿಳಗುಳ ನಿವಾಸಿ ಉದ್ಯಮಿ ಬಿ.ಎಂ.ನಾಗರಾಜ್ ಅರಸ್ (76 ವರ್ಷ) ಹೃದಯಾಘಾತದಿಂದ ಸೋಮವಾರ ಮಧ್ಯಾಹ್ನ ನಿಧನರಾಗಿದ್ದಾರೆ.
ಹಲವು ವರ್ಷಗಳಿಂದ ಕಾಫಿ ಎಸ್ಟೇಟ್ ಗಳಿಗೆ ಸುಣ್ಣ ಗೊಬ್ಬರ ಮುಂತಾದ ಪರಿಕರಗಳನ್ನು ವ್ಯಾಪಾರ ಮಾಡುತ್ತಿದ್ದರು. ಅಪಾರ ಜನಮನ್ನಣೆ ಗಳಿಸಿದ್ದರು.
ಮೃತದೇಹವನ್ನು ಅವರ ಬಿಳಗುಳ ನಿವಾಸದಲ್ಲಿ ಅಂತಿಮ ದರ್ಶನಕ್ಕೆ ಇರಿಸಲಾಗಿದೆ. ಅಂತ್ಯಕ್ರಿಯೆ ನಾಳೆ ಮಂಗಳವಾರ ಬೆಳಗ್ಗೆ 9 ಗಂಟೆಗೆ ನಡೆಯಲಿದೆ ಎಂದು ಕುಟುಂಬ ಮೂಲಗಳು ತಿಳಿಸಿವೆ.
ನಾಗರಾಜ್ ಅವರು ಪುತ್ರರಾದ ಬಿ.ಎನ್. ತ್ಯಾಗರಾಜ್ ಅರಸ್, ಬಿ.ಎನ್.ರಘುರಾಜ್ ಅರಸ್ ಮತ್ತು ಬಿ.ಎನ್.ಗುರುರಾಜ್ ಅರಸ್. ಓರ್ವ ಪುತ್ರಿ ಹಾಗೂ ಸಹೋದರರಾದ ತಿಮ್ಮರಾಜು ಅರಸ್, ಸುಂದರ ರಾಜ್ ಅರಸ್ ಸೇರಿದಂತೆ ಅಪಾರ ಬಂಧುಗಳನ್ನು ಅಗಲಿದ್ದಾರೆ.



