oplus_131072

 

 

ಪೋಡಿ ಮುಕ್ತ ಗ್ರಾಮ ಕಾರ್ಯಕ್ರಮ ಸರ್ಕಾರದ ಒಂದು ಒಳ್ಳೆಯ ಕಾರ್ಯಕ್ರಮ. ಕರ್ನಾಟಕ ರಾಜ್ಯ ರೈತ ಸಂಘ ಈ ಕಾರ್ಯಕ್ರಮವನ್ನು ಬೆಂಬಲಿಸಿದೆ. ಆದರೆ ಅಧಿಕಾರಿಗಳು ಈ ಕಾರ್ಯಕ್ರಮವನ್ನು ಡಿಸೆಂಬರ್ ಅಂತ್ಯದೊಳಗೆ ಅನುಷ್ಠಾನಕ್ಕೆ ತರಲು ಹಿಂದೇಟು ಹಾಕುತ್ತಿರುವುದನ್ನು ಪ್ರತಿಭಟಿಸಿ ಅಕ್ಟೋಬರ್ ಮೂರರಂದು ಕಂದಾಯ ಮಂತ್ರಗಳಿಗೆ ಮೂಡಿಗೆರೆ ತಹಸೀಲ್ದಾರ್ ರವರ ಮೂಲಕ ಮನವಿ ಸಲ್ಲಿಸಿದೆ.

ಆದರೆ ಬಿಳ್ಳೂರು ಗ್ರಾಮದ ಪಿ.ಎ.ಪುಟ್ಟಸ್ವಾಮಿಗೌಡ(ವಿಷ್ಣುಗೌಡ) ಹಾಗೂ ಅವರ ಕುಟುಂಬದ ಸದಸ್ಯರುಗಳು, ಸಂಬಂಧಿಗಳು ಒಂದುಗೂಡಿ ಪೋಡಿಮುಕ್ತ ಗ್ರಾಮದ ಕಾರ್ಯಕ್ರಮವನ್ನು  ವಿರೋಧಿಸಿ ತಾವು ಅಕ್ರಮವಾಗಿ ಕಬಳಿಸಿರುವ ಜಮೀನು ಪೋಡಿ ಮಾಡಿದರೆ ಕೈಬಿಟ್ಟು ಹೋಗುತ್ತದೆ ಎಂಬ ಕಾರಣಕ್ಕಾಗಿ ಪೋಡಿ ಮಾಡುವುದು ಬೇಡ ಎಂದು ತಹಸೀಲ್ದಾರ್ ಅವರಿಗೆ ಮನವಿ ನೀಡಿದ್ದಾರೆ.

ಅವರು ಮನವಿಯಲ್ಲಿ ತಿಳಿಸಿರುವ ಜಮೀನಿಗೆ 6 ಜನ ಹಕ್ಕುದಾರರಿದ್ದು, ಎಲ್ಲಾ ಹಕ್ಕುದಾರರ ಜಮೀನನ್ನು ಅಕ್ರಮವಾಗಿ ಕಬಳಿಸಿ ಖಾತೆ ಮಾಡಿಸಿಕೊಂಡಿದ್ದು,ಈ ಪ್ರಕರಣ ಕೆಳ ನ್ಯಾಯಾಲಯದಲ್ಲಿ ವಿಚಾರಣೆ ನಡೆದು ಅಕ್ರಮ ಭೂ ಕಬಳಿಕೆ ಸಾಬೀತಾಗಿದ್ದು ಈಗ ಹೈಕೋರ್ಟ್  ನಲ್ಲಿ ಪ್ರಕರಣ ದಾಖಲಿಸಿಕೊಂಡು ಉಳಿದ ಹಕ್ಕುದಾರರಿಗೆ ಪೋಡು ಮಾಡುವುದು ಬೇಡ ಎಂದು ಕಿರುಕುಳ ಕೊಡುತ್ತಿದ್ದಾರೆ. ಹೈಕೋರ್ಟ್ ಸರ್ವೇ ಕಾರ್ಯವನ್ನು ನಡೆಸಲು ಆದೇಶ ಮಾಡಿದೆ. ಅಧಿಕಾರಿಗಳನ್ನು ನ್ಯಾಯಾಲಯದಿಂದ ಬೆದರಿಕೆ ಒಡ್ಡಿ ಪೋಡು ಮಾಡುವುದನ್ನು ತಡೆಯುತ್ತಿದ್ದಾರೆ. ಇವರ ಪೋಡಿ ಮಾಡಬಾರದೆಂಬ ನಿಲುವಿಗೆ ಸಾರ್ವಜನಿಕರ ಬೆಂಬಲವಿಲ್ಲ.

ನಿಷ್ಠಾವಂತ ರೈತ ಸಂಘದ ಕಾರ್ಯಕರ್ತರನ್ನು ವೈಯುಕ್ತಿಕವಾಗಿ ನಿಂದನೆ ಮಾಡಿದ್ದಾರೆ. ರೈತಸಂಘವನ್ನು ದುರುಪಯೋಗಪಡಿಸಿಕೊಂಡಿದ್ದು ಅವರಿಗೆ ಕಂಡುಬಂದರೆ ಅಂತಹ ಕಾರ್ಯಕರ್ತರ ಮೇಲೆ ದೂರು ಸಲ್ಲಿಸಿದರೆ ರೈತ ಸಂಘ ಪರಿಶೀಲಿಸಿ ಶಿಸ್ತುಕ್ರಮ ಕೈಗೊಳ್ಳುತ್ತದೆ. ಖಾಸಾ ಚಿಕ್ಕಪ್ಪನ ಮಕ್ಕಳ ಎರಡೂವರೆ ಎಕರೆ  ಕಬಳಿಸಿದ್ದಾರೆ. ಆದರೆ ಇವರು ಬೇರೆಯವರ ಮೇಲೆ ಗೂಬೆ ಕೂರಿಸುವ ಕೆಲಸ ಮಾಡುತ್ತಿದ್ದಾರೆ ಎಂದು ಬಿಳ್ಳೂರು(ಕಡಿದಾಳು) ಗ್ರಾಮದ ರೈತ ಸಂಘದ ಮುಖಂಡ ಎಂ. ಮಂಜುನಾಥಗೌಡ, ಬಿ.ಸಿ.ರವಿ, ಪಿ.ಬಿ.ರಾಜಮೋಹನ್, ಪಿ.ಬಿ.ರಘು ಪತ್ರಿಕಾ ಹೇಳಿಕೆಯಲ್ಲಿ ತಿಳಿಸಿದ್ದಾರೆ.

Leave a Reply

Your email address will not be published. Required fields are marked *

ಕ್ಷಮಿಸಿ ಹಕ್ಕು ಸೌಮ್ಯ ಕಾಯ್ದಿರಿಸಲಾಗಿದೆ
ಕ್ಷಮಿಸಿ ಹಕ್ಕು ಸೌಮ್ಯ ಕಾಯ್ದಿರಿಸಲಾಗಿದೆ
ಕ್ಷಮಿಸಿ ಹಕ್ಕು ಸೌಮ್ಯ ಕಾಯ್ದಿರಿಸಲಾಗಿದೆ
ಕ್ಷಮಿಸಿ ಹಕ್ಕು ಸೌಮ್ಯ ಕಾಯ್ದಿರಿಸಲಾಗಿದೆ
ಕ್ಷಮಿಸಿ ಹಕ್ಕು ಸೌಮ್ಯ ಕಾಯ್ದಿರಿಸಲಾಗಿದೆ
ಕ್ಷಮಿಸಿ ಹಕ್ಕು ಸೌಮ್ಯ ಕಾಯ್ದಿರಿಸಲಾಗಿದೆ
ಕ್ಷಮಿಸಿ ಹಕ್ಕು ಸೌಮ್ಯ ಕಾಯ್ದಿರಿಸಲಾಗಿದೆ