10Mudigere2A

 

 

ಅಂಗನವಾಡಿ ಶಿಕ್ಷಕಿ ಸಾವಿಗೆ ಕಾರಣವಾದ ಇಂಜಿನಿಯರ್ ಮತ್ತು ಗುತ್ತಿಗೆದಾರದ ಕ್ರಮ ಕೈಗೊಳ್ಳಬೇಕೆಂದು ಶುಕ್ರವಾರ ವಿವಿಧ ಪಕ್ಷಗಳ, ಸಂಘಟನೆ ಮುಖಂಡರು ಹಾಗೂ ಹೆಸಗಲ್ ಗ್ರಾ.ಪಂ. ಸದಸ್ಯರು ಮೂಡಿಗೆರೆ ತಹಸೀಲ್ದಾರ್ ಎಸ್.ಅಶ್ವನಿ ಅವರಿಗೆ ಮನವಿ ಸಲ್ಲಿಸಿದರು.

ಈ ಸಂದರ್ಭದಲ್ಲಿ ಬಿಜೆಪಿ ರಾಜ್ಯ ಕಾರ್ಯಕಾರಣಿ ಸದಸ್ಯೆ ಸರೋಜಾ ಸುರೇಂದ್ರ ಮಾತನಾಡಿ, ಪಟ್ಟಣದಲ್ಲಿ ಅಮೃತ್ ಯೋಜನೆಯಡಿ ರಸ್ತೆಗಳನ್ನು ಅಗೆದು ಹಾಗೆ ಬಿಟ್ಟ ಕಾರಣ ಅಂಗನವಾಡಿ ಶಿಕ್ಷಕಿ ಸಂಪ್ರಿತ ಅಪಘಾತದಿಂದ ಸಾವನ್ನಪ್ಪಿದ್ದಾರೆ. ಇದರಿಂದ ಅವರ ಕುಟುಂಬ ನಿರ್ವಹಣೆ ಕಷ್ಟವಾಗಿದೆ. ಅಲ್ಲದೆ ಇನ್ನೋರ್ವ ಅಂಗನವಾಡಿ ಶಿಕ್ಷಕಿ ಸುಜಾತ ರವಿ ಸಾವು ಬದುಕಿನ ನಡುವೆ ಮಂಗಳೂರಿನ ಆಸ್ಪತ್ರೆಯಲ್ಲಿ ಹೋರಾಟ ನಡೆಸುತ್ತಿದ್ದಾರೆ. ಇದಕ್ಕೆ ಕಾರಣವಾಗಿರುವ ಕ್ರೈನ್ ಆಪರೇಟರ್, ಪ.ಪಂ. ಎಂಜಿನಿಯರ್ ಹಾಗೂ ಗುತ್ತಿಗೆದಾರರ ವಿರುದ್ಧ ಕಾನೂನು ಕ್ರಮ ಕೈಗೊಳ್ಳಬೇಕೆಂದು ಅಪಘಾತಕ್ಕೀಡಾದ ಕುಟುಂಬಕ್ಕೆ ಸೂಕ್ತ ಪರಿಹಾರ ಕಲ್ಪಿಸಬೇಕೆಂದು ಒತ್ತಾಯಿಸಿದರು.

ಹೆಸಗಲ್ ಗ್ರಾ.ಪಂ. ಸದಸ್ಯ ಪ್ರಶಾಂತ್ ಮಾತನಾಡಿ, ಹೆಸಗಲ್ ರಸ್ತೆಯಲ್ಲಿ ಒಂದು ವಾರದಿಂದ ಪೈಪ್‍ಲೈನ್ ಕಾಮಗಾರಿ ನಡೆಸುತ್ತಿದ್ದು, ಕಾಮಗಾರಿ ಆಮೆ ನಡಿಗೆಯಲ್ಲಿ ಸಾಗುತ್ತಿದೆ. ಇದರಿಂದಲೇ ಅವಘಡ ನಡೆಯಲು ಕಾರಣವಾಗಿದೆ. ಕೂಡಲೇ ಕಾಮಗಾರಿ ಮುಗಿಸಬೇಕೆಂದು ಮನವಿ ಮಾಡಿದ್ದರೂ ಇನ್ನೂ ಗುಂಡು ಮುಚ್ಚಿಸುವ ಗೋಜೆಗೆ ಹೋಗಿಲ್ಲ. ಇದರಿಂದ ಮತ್ತಷ್ಟು ಅಪಘಾತ ಸಂಭವಿಸುವ ಮುನ್ನ ಶಾಸಕರು ಹಾಗೂ ಜನಪ್ರತಿನಿಧಿಗಳು ಗುಂಡಿ ಮುಚ್ಚಿಸಲು ಕ್ರಮ ವಹಿಸಬೇಕೆಂದು ಆಗ್ರಹಿಸಿದರು.

ಹೆಸಗಲ್ ಗ್ರಾ.ಪಂ. ಸದಸ್ಯರಾದ ಶಿವಣ್ಣ, ಪೂರ್ಣೇಶ್, ಪ.ಪಂ. ಸದಸ್ಯ ಮನೋಜ್, ರೈತ ಮುಖಂಡ ಎಸ್.ಪಿ.ರಾಜು, ಸಿಪಿಐ ಮುಖಂಡ ಬಿ.ಕೆ.ಲಕ್ಷ್ಮಣ್‍ಕುಮಾರ್, ಬಿಜೆಪಿ ಯುವ ಮೋರ್ಚ ಅಧ್ಯಕ್ಷ ತಾರೇಶ್, ಪ್ರಮೋದ್ ದುಂಡುಗ, ಸುದೇವ್ ಗುತ್ತಿ, ಸಚಿನ್ ಹಳೆಮೂಡಿಗೆರೆ, ಅನಿಲ್ ಛತ್ರಮೈಧಾನ ಮತ್ತಿತರರಿದ್ದರು.
*****

Leave a Reply

Your email address will not be published. Required fields are marked *

ಕ್ಷಮಿಸಿ ಹಕ್ಕು ಸೌಮ್ಯ ಕಾಯ್ದಿರಿಸಲಾಗಿದೆ
ಕ್ಷಮಿಸಿ ಹಕ್ಕು ಸೌಮ್ಯ ಕಾಯ್ದಿರಿಸಲಾಗಿದೆ
ಕ್ಷಮಿಸಿ ಹಕ್ಕು ಸೌಮ್ಯ ಕಾಯ್ದಿರಿಸಲಾಗಿದೆ
ಕ್ಷಮಿಸಿ ಹಕ್ಕು ಸೌಮ್ಯ ಕಾಯ್ದಿರಿಸಲಾಗಿದೆ
ಕ್ಷಮಿಸಿ ಹಕ್ಕು ಸೌಮ್ಯ ಕಾಯ್ದಿರಿಸಲಾಗಿದೆ
ಕ್ಷಮಿಸಿ ಹಕ್ಕು ಸೌಮ್ಯ ಕಾಯ್ದಿರಿಸಲಾಗಿದೆ
ಕ್ಷಮಿಸಿ ಹಕ್ಕು ಸೌಮ್ಯ ಕಾಯ್ದಿರಿಸಲಾಗಿದೆ