28Mudigere1A (1)

 

 

ನವೆಂಬರ್ 2ರಂದು ನಡೆಯುವ ಮೂಡಿಗೆರೆ ಟಿಎಪಿಸಿಎಂಎಸ್ ಚುನಾವಣೆಯಲ್ಲಿ ಬಿಜೆಪಿ ಜೆಡಿಎಸ್ ಮೈತ್ರಿಕೂಟದ ಎನ್.ಡಿ.ಎ. ಅಭ್ಯರ್ಥಿಗಳನ್ನು ಬೆಂಬಲಿಸಿ ಸಂಸ್ಥೆಯ ಅಭಿವೃದ್ಧಿಗೆ ಸಹಕಾರ ನೀಡಬೇಕು ಎಂದು ಬಿಜೆಪಿ ಜೆಡಿಎಸ್ ಮುಖಂಡರು ಮನವಿ ಮಾಡಿದ್ದಾರೆ.

ಬಿಜೆಪಿ ಜೆಡಿಎಸ್ ಮುಖಂಡರು ಮಂಗಳವಾರ ಮೂಡಿಗೆರೆ ಪತ್ರಕರ್ತರ ಭವನದಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದರು.

ಈ ಸಂದರ್ಭದಲ್ಲಿ ಬಿಜೆಪಿ ತಾಲೂಕು ಅಧ್ಯಕ್ಷ ಗಜೇಂದ್ರ ಕೊಟ್ಟಿಗೆಹಾರ ಮಾತನಾಡಿ ಕಳೆದ ಅವಧಿಯಲ್ಲಿ ಬಿಜೆಪಿ ಬೆಂಬಲಿತ ಸದಸ್ಯರು ಟಿಎಪಿಸಿಎಂಎಸ್‍ ಆಡಳಿತ ನಡೆಸಿದ್ದು, ಈ ಅವಧಿಯಲ್ಲಿ  ರೈತಭವನದಲ್ಲಿ ವರನ ಕೊಠಡಿ, ಶೌಚಾಲಯ, ಮಂಟಪ, ಫಾಲ್ ಸೀಲಿಂಗ್, ಅಡುಗೆ ಮನೆಗೆ ಕಾಂಕ್ರೀಟ್, ಗೋಡೆಗೆ ಟೈಲ್ಸ್, ಗುಣಮಟ್ಟದ ಅಡುಗೆ ಪಾತ್ರೆಗಳು, ವಿದ್ಯುತ್ ವೈರಿಂಗ್ ನವೀಕರಣ, ಸಂಸ್ಥೆ ಕಚೇರಿ ಹಿಂಭಾಗ ಹಾಗೂ ರೈತಭವನದ ಬಲಭಾಗ ರೆಡಿಮೆಡ್ ಕಾಂಪೌಂಡ್, ರೈತರ ಮಕ್ಕಳಿಗೆ ಅರ್ಹತೆ ಆಧಾರದಲ್ಲಿ ಉದ್ಯೋಗ ಒದಗಿಸಲಾಗಿದೆ.

ಮುಂದಿನ ದಿನದಲ್ಲಿ ಎಂ.ಜಿ.ರಸ್ತೆಯಲ್ಲಿರುವ ಸಂಸ್ಥೆಯ ಹಳೆ ಕಟ್ಟಡ ಕೆಡವಿ 4 ಅಂತಸ್ತಿನ ಕಟ್ಟಡ ನಿರ್ಮಾಣ, ಮುಂಭಾಗದಲ್ಲಿರುವ ವಾಣಿಜ್ಯ ಮಳಿಗೆ ಮೇಲಂತಸ್ತಿನಲ್ಲಿ ಮಳಿಗೆ ಹಾಗೂ ಮಿನಿ ಹಾಲ್ ನಿರ್ಮಾಣ, ರೈತಭವನ ಮುಖ್ಯ ಧ್ವಾರಕ್ಕೆ ಕಮಾನು, ಪೆಟ್ರೋಲ್ ಬಂಕ್, ನಂದಿನಿ ಹಾಲಿನ ಡೈರಿ ಸೇರಿದಂತೆ ಅನೇಕ ಯೋಜನೆ ರೂಪಿಸಲು ಚಿಂತನೆ ನಡೆಸಲಾಗಿದೆ ಎಂದು ಹೇಳಿದರು.

ಜೆಡಿಎಸ್ ತಾಲೂಕು ಅಧ್ಯಕ್ಷ ಬಾಳೂರು ಲಕ್ಷ್ಮಣ್‍ಗೌಡ ಮಾತನಾಡಿ, ಈಗಾಗಲೇ ಮೂಡಿಗೆರೆ ಹಾಗೂ ಕಳಸ ತಾಲೂಕು ವ್ಯಾಪ್ತಿಯ 14 ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದಿಂದ ಟಿಎಪಿಸಿಎಂಎಸ್‍ಗೆ ಎ.ಶ್ರೇಣಿ ನಿರ್ದೇಶಕರಾಗಿ ಆಯ್ಕೆಯಾಗಿರುವ ಟಿ.ಎಂ.ಗಜೇಂದ್ರ, ಎಂ.ಎಲ್.ಕಲ್ಲೇಶ್, ವಿ.ಕೆ.ಶಿವೇಗೌಡ, ಪ್ರಸನ್ನ ಗೌತಳ್ಳಿ, ಪ್ರಸನ್ನ ಮುಗ್ರಹಳ್ಳಿ ಆಯ್ಕೆಯಾಗಿದ್ದಾರೆ. ಇವರ ಜತೆಗೆ ಕಣದಲ್ಲಿರುವ 8 ಅಭ್ಯರ್ಥಿಗಳ ಗೆಲುವು ಕೂಡ ನಿಶ್ಚಿತವಾಗಿರುವುದರಿಂದ ಅಧಿಕಾರ ಹಿಡಿಯುವುದರಲ್ಲಿ ಸಂಶಯವಿಲ್ಲ. ಸಂಸ್ಥೆಯನ್ನು ಇನ್ನಷ್ಟು ಅಭಿವೃದ್ಧಿಪಡಿಸಲು ಮತದಾರರು ಎನ್‍ಡಿಎ ಅಭ್ಯರ್ಥಿಗಳನ್ನು ಬೆಂಬಲಿಸಬೇಕೆಂದು ಮನವಿ ಮಾಡಿದರು.

ಬಿಜೆಪಿ ಜಿಲ್ಲಾ ಉಪಾಧ್ಯಕ್ಷ ಜೆ.ಎಸ್.ರಘು ಮಾತನಾಡಿ ‘ ಬಿಜೆಪಿ ಜೆಡಿಎಸ್ ಬೆಂಬಲಿತ ಅಭ್ಯರ್ಥಿಗಳಾಗಿ  ಪಿ.ಜಿ.ಅನುಕುಮಾರ್, ಎಂ.ಕೆ. ಚಂದ್ರೇಶ್, ಹೆಚ್ ಎಸ್ ಮಂಜುನಾಥ್ ಬಿ.ಹೊಸಳ್ಳಿ , ಶೇಖರ್ ಪೂಜಾರಿ , ಗಣೇಶ್ , ರಮೇಶ್ ಕುನ್ನಹಳ್ಳಿ, ವಿದ್ಯಾರಾಜು, ,ಪುಟ್ಟಮ್ಮ ಚಂದ್ರೆಗೌಡ ಕಣದಲ್ಲಿದ್ದಾರೆ. ಕಣದಲ್ಲಿರುವ ಅಭ್ಯರ್ಥಿಗಳು ಈಗಾಗಲೇ ವಿವಿಧ ಕ್ಷೇತ್ರಗಳಲ್ಲಿ ಕಾರ್ಯನಿರ್ವಹಿಸಿ ಅನುಭವ ಹೊಂದಿದ್ದು, ಎಲ್ಲಾ ಅಭ್ಯರ್ಥಿಗಳನ್ನು ಬಹುಮತದಿಂದ ಗೆಲ್ಲಿಸಬೇಕೆಂದು ಮನವಿ ಮಾಡಿದರು.

ಬಿಜೆಪಿ ಹಿರಿಯ ಮುಖಂಡ ಎಂ.ಆರ್.ಜಗದೀಶ್, ಮುಖಂಡರಾದ ರಘು ಜನ್ನಾಪುರ, ವಿನಯ್ ಹಳೆಕೋಟೆ, ಎಂ.ಸಿ.ಹೂವಪ್ಪ, ರವಿ ಮಗ್ಗಲಮಕ್ಕಿ, ಜಿ.ಎಂ.ಪ್ರಸನ್ನ, ಉತ್ತಮ್ ಹಂತೂರು, ಸುರೇಂದ್ರ ಹ್ಯಾರಗುಡ್ಡೆ, ಧನಿಕ್ ಕೋಡದಿಣ್ಣೆ ಉಪಸ್ಥಿತರಿದ್ದರು.
*****

Leave a Reply

Your email address will not be published. Required fields are marked *

ಕ್ಷಮಿಸಿ ಹಕ್ಕು ಸೌಮ್ಯ ಕಾಯ್ದಿರಿಸಲಾಗಿದೆ
ಕ್ಷಮಿಸಿ ಹಕ್ಕು ಸೌಮ್ಯ ಕಾಯ್ದಿರಿಸಲಾಗಿದೆ
ಕ್ಷಮಿಸಿ ಹಕ್ಕು ಸೌಮ್ಯ ಕಾಯ್ದಿರಿಸಲಾಗಿದೆ
ಕ್ಷಮಿಸಿ ಹಕ್ಕು ಸೌಮ್ಯ ಕಾಯ್ದಿರಿಸಲಾಗಿದೆ
ಕ್ಷಮಿಸಿ ಹಕ್ಕು ಸೌಮ್ಯ ಕಾಯ್ದಿರಿಸಲಾಗಿದೆ
ಕ್ಷಮಿಸಿ ಹಕ್ಕು ಸೌಮ್ಯ ಕಾಯ್ದಿರಿಸಲಾಗಿದೆ
ಕ್ಷಮಿಸಿ ಹಕ್ಕು ಸೌಮ್ಯ ಕಾಯ್ದಿರಿಸಲಾಗಿದೆ