ಮೂಡಿಗೆರೆ ಸಮೀಪದ ಬಿದರಹಳ್ಳಿ ಗ್ರಾಮದಲ್ಲಿ ಅಪಘಾತಕ್ಕೀಡಾಗಿ ತೀವ್ರವಾಗಿ ಗಾಯಗೊಂಡಿದ್ದ ಕರುವನ್ನು ವಿಶ್ವಹಿಂದೂ ಪರಿಷತ್ ಮತ್ತು ಭಜರಂಗದಳದ ಕಾರ್ಯಕರ್ತರು ರಕ್ಷಿಸಿ ಗೋಶಾಲೆಗೆ ರವಾನಿಸಿ ಚಿಕಿತ್ಸೆ ದೊರೆಯುವಂತೆ ಮಾಡಿದ್ದಾರೆ.
ಮಂಗಳೂರು ವಿಲ್ಲುಪುರಂ ರಾಷ್ಟ್ರೀಯ ಹೆದ್ದಾರಿಯಲ್ಲಿ ಬಿದರಹಳ್ಳಿ ಬಸ್ ಡಿಪೋ ಸಮೀಪ ಅಪರಿಚಿತ ವಾಹವೊಂದು ಕರುವಿಗೆ ಡಿಕ್ಕಿ ಹೊಡೆದಿತ್ತು. ಅಪಘಾತದಲ್ಲಿ ತೀವ್ರವಾಗಿ ಗಾಯಗೊಂಡಿದ್ದ ಕರು ಸಾವು ಬದುಕಿನ ನಡುವೆ ನರಳಾಡುತ್ತಿತ್ತು.

ವಿಷಯ ತಿಳಿದ ಮೂಡಿಗೆರೆ ವಿಶ್ವಹಿಂದೂ ಪರಿಷತ್ ಮತ್ತು ಭಜರಂಗದಳದ ಕಾರ್ಯಕರ್ತರು ಸ್ಥಳಕ್ಕೆ ದಾವಿಸಿ ಕರುವನ್ನು ರಕ್ಷಿಸುವ ಕೆಲಸ ಮಾಡಿದ್ದಾರೆ.
ಕರುವನ್ನು ವಾಹನದಲ್ಲಿ ಹಾಕಿಕೊಂಡು ಚಿಕ್ಕಮಗಳೂರಿನ ಗೋಶಾಲೆಗೆ ರವಾನಿಸಲಾಗಿದ್ದು, ಅಲ್ಲಿ ಕರುವಿನ ಗಾಯಗಳಿಗೆ ಚಿಕಿತ್ಸೆ ಕೊಡಿಸಿ ರಕ್ಷಿಸುವ ಕೆಲಸ ಮಾಡಿದ್ದಾರೆ.
ಈ ಪುಣ್ಯ ಕಾರ್ಯದಲ್ಲಿ ಬಜರಂಗದಳ ಕಾರ್ಯಕರ್ತರಾದ ಮೂಡಿಗೆರೆ ನಗರ ಸಂಯೋಜಕ ಧನು, ನಗರ ಗೋ ರಕ್ಷಾ ಪ್ರಮುಖ್ ಪ್ರಸನ್ನ, ಸೋಮು ಬಿದರಹಳ್ಳಿ, ಪ್ರಶಾಂತ್ ಬಿದರಹಳ್ಳಿ, ವಿನೋದ್ ಬಿದರಹಳ್ಳಿ ಮತ್ತಿತರರು ಭಾಗಿಯಾಗಿದ್ದಾರೆ.
ವಿಶ್ವಹಿಂದೂ ಪರಿಷತ್ ಮತ್ತು ಬಜರಂಗ ದಳ ಕಾರ್ಯಕರ್ತರ ತಂಡವು ಈ ಹಿಂದೆಯೂ ಹಲವು ಗೋವುಗಳನ್ನು ಅಪಾಯಕಾರಿ ಸನ್ನಿವೇಶದಿಂದ ರಕ್ಷಿಸಿದ್ದಾರೆ. ಕಾರ್ಯಕರ್ತರ ಈ ಸ್ವಯಂಪ್ರೇರಿತಾ ಈ ಕಾರ್ಯಕ್ಕೆ ಸಾರ್ವಜನಿಕರು ಶ್ಲಾಘನೆ ವ್ಯಕ್ತಪಡಿಸಿದ್ದಾರೆ.



