10Mudigere1A

 

 

ಸರ್ವೆ ಇಲಾಖೆಯಲ್ಲಿ ಯಾವುದೇ ಕೆಲಸಗಳು ಆಗುತ್ತಿಲ್ಲ. ಪ್ರತಿಭಟನೆ ನಡೆಸಿದರೂ, ಜನಪ್ರತಿನಿಧಿಗಳು ಹಾಗೂ ಹಿರಿಯ ಅಧಿಕಾರಿಗಳ ಗಮನಕ್ಕೆ ತಂದರೂ ಪ್ರಯೋಜನವಾಗುತ್ತಿಲ್ಲ. ಹೀಗಾದರೆ ನಮ್ಮ ಕೆಲಸ ಮಾಡಿಸಿಕೊಳ್ಳಲು ಎಲ್ಲಿಗೆ ಹೋಗಬೇಕೆಂದು ಪ್ರಶ್ನಿಸಿ, ರೈತ ಸಂಘದ ರಾಜ್ಯ ಉಪಾಧ್ಯಕ್ಷ ಮಂಜುನಾಥಗೌಡ ಸೋಮವಾರ ಮೂಡಿಗೆರೆ ಸರ್ವೆ ಇಲಾಖೆ ಎದುರು ಏಕಾಂಗಿ ಪ್ರತಿಭಟನೆ ನಡೆಸಿದರು.

ಈ ಹಿಂದೆ ಇದ್ದ ಎಡಿಎಲ್‍ಆರ್ ಮಹಾದೇವಪ್ಪ ಅವರು 3 ತಿಂಗಳು ರಜೆಯಲ್ಲಿದ್ದು, ಅವರು ರಜೆಯಲ್ಲಿದ್ದಂತೆ ನಿವೃತ್ತಿ ಹೊಂದಿದ್ದಾರೆ. ಅವರ ಸ್ಥಾನಕ್ಕೆ ಸೂಪರ್‍ಡೆಂಟ್ ಅವರನ್ನು ನೇಮಿಸಲಾಗಿತ್ತು. ಅವರು ಕಡತಗಳಿಗೆ ಸಹಿ ಹಾಕುವಂತಿಲ್ಲವೆಂದು ಹೇಳುತ್ತಿದ್ದಾರೆ. ಹೊಸ ಎಡಿಎಲ್‍ಆರ್ ನೇಮಕ ಕೂಡ ಮಾಡಿಲ್ಲ. ಇದರಿಂದ ರೈತರ ಕಡತಗಳು ಸೆರ್ವೆ ಇಲಾಖೆಯಲ್ಲಿಯೇ ಉಳಿಯುವಂತಾಗಿದೆ ಎಂದು ಹೇಳಿದರು.

ನನ್ನ ಜಮೀನಿನ ಪೋಡಿ ಕಾರ್ಯಕ್ಕೆ ಸರ್ವೇ ಕಾರ್ಯ ನಡೆದು 2 ತಿಂಗಳು ಕಳೆದಿದ್ದು, ನಕಾಶೆ ಸಿದ್ದಪಡಿಸಲಾಗಿದೆ. ಆದರೆ ಮುಂದಿನ ಕಾರ್ಯಕ್ಕೆ ಎಡಿಎಲ್‍ಆರ್ ಸಹಿ ಆಗುತ್ತಿಲ್ಲ. ದಿನ ಕಚೇರಿಗೆ ಅಲೆದಾಡುವಂತಾಗಿದೆ. ನನ್ನ ಕೆಲಸ ಯಾವಾಗ ಮಾಡಿಕೊಡುತ್ತಾರೆಂದು ಲಿಖಿತವಾಗಿ ನೀಡಿದರೆ ಇಲ್ಲಿಂದ ತೆರಳುತ್ತೇನೆ. ಇಲ್ಲವಾದರೆ ನನ್ನನ್ನು ಕಾನೂನಾತ್ಮಕವಾಗಿ ಇಲ್ಲಿಂದ ಹೊರ ಹಾಕಲಿ ಎಂದು ಪಟ್ಟು ಹಿಡಿದು ಕುಳಿತ ಅವರು, ಇಂದು ತನ್ನ ಕೆಲಸ ಮಾಡಿಕೊಡದಿದ್ದರೆ ಚಿಕ್ಕಮಗಳೂರು ಡಿಡಿಎಲ್‍ಆರ್ ಕಚೇರಿ ಎದುರು ಪ್ರತಿಭಟನೆ ಮಾಡುವುದಾಗಿ ಎಚ್ಚರಿಕೆ ನೀಡಿದರು.

Leave a Reply

Your email address will not be published. Required fields are marked *

ಕ್ಷಮಿಸಿ ಹಕ್ಕು ಸೌಮ್ಯ ಕಾಯ್ದಿರಿಸಲಾಗಿದೆ
ಕ್ಷಮಿಸಿ ಹಕ್ಕು ಸೌಮ್ಯ ಕಾಯ್ದಿರಿಸಲಾಗಿದೆ
ಕ್ಷಮಿಸಿ ಹಕ್ಕು ಸೌಮ್ಯ ಕಾಯ್ದಿರಿಸಲಾಗಿದೆ
ಕ್ಷಮಿಸಿ ಹಕ್ಕು ಸೌಮ್ಯ ಕಾಯ್ದಿರಿಸಲಾಗಿದೆ
ಕ್ಷಮಿಸಿ ಹಕ್ಕು ಸೌಮ್ಯ ಕಾಯ್ದಿರಿಸಲಾಗಿದೆ
ಕ್ಷಮಿಸಿ ಹಕ್ಕು ಸೌಮ್ಯ ಕಾಯ್ದಿರಿಸಲಾಗಿದೆ
ಕ್ಷಮಿಸಿ ಹಕ್ಕು ಸೌಮ್ಯ ಕಾಯ್ದಿರಿಸಲಾಗಿದೆ