ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಮಹಿಳಾ ಜ್ಞಾನ ವಿಕಾಸ ಕಾರ್ಯಕ್ರಮದಡಿಯಲ್ಲಿ ಮೂಡಿಗೆರೆ ಜೇಸಿ ಭವನದಲ್ಲಿ ಮಹಿಳಾ ವಿಚಾರ ಗೋಷ್ಠಿ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಯಿತು.
ಕನ್ನಡ ಸಾಹಿತ್ಯ ಪರಿಷತ್ ಮಹಿಳಾ ಘಟಕದ ಜಿಲ್ಲಾಧ್ಯಕ್ಷರಾದ ಶ್ರೀಮತಿ ನಿರ್ಮಲಾ ಮಂಚೇಗೌಡ ಮಾತನಾಡಿ ; ಒಂದು ಕುಟುಂಬ ಚೆನ್ನಾಗಿ ಇರಬೇಕಾದ್ರೆ ಒಂದು ಮಹಿಳೆಯೇ ಕಾರಣ ವಾಗಿರುತಾಳೆ. ಒಂದು ಹೆಣ್ಣು ಮನಸು ಮಾಡಿದರೆ ಏನೂ ಬೇಕಾದರೂ ಸಾಧನೆ ಮಾಡ ಬಹುದು. ಇಂತಹ ಕಾರ್ಯಕ್ರಮ ಧರ್ಮಸ್ಥಳ ಯೋಜನೆ ಯಲ್ಲಿ ಮಾತ್ರ ಸಾಧ್ಯ ಎಂದರು.
ಸಂಪನ್ಮೂಲ ವ್ಯಕ್ತಿಯಾದ ಶ್ರೀಮತಿ ಲಲಿತಾ ಅವರು ಮಾತನಾಡಿ ; ಹೆಣ್ಣೊಂದು ಕಲಿತರೆ ಶಾಲೆಯೊಂದು ತೆರೆದಂತೆ ನಮ್ಮ ಜೀವನ ದಲ್ಲಿ ನೈತಿಕ ಶಿಕ್ಷಣವನ್ನು ನೀಡುವ ಬಗ್ಗೆ, ಸಂಸ್ಕೃತಿ ಸಂಸ್ಕಾರದ ಬಗ್ಗೆ, ಮನೆ ಮುಂದೆ ತುಳಸಿ ಪೂಜೆ ಮಾಡುವುದು, ಅತಿಥಿ ಸತ್ಕಾರದ ಮಹತ್ವದ ಬಗ್ಗೆ ತಿಳಿಸಿದರು.
ಯೋಜನೆಯ ಹತ್ತು ಹಲವಾರು ಕಾರ್ಯಕ್ರಮಗಳ ಬಗ್ಗೆ ಸಾಲ ಸೌಲಭ್ಯ ದ ಬಗ್ಗೆ ಯೋಜನೆ ಯ ನಿಯಮವಳಿ ಬಗ್ಗೆ ಜಿಲ್ಲಾ ನಿರ್ದೇಶಕಾದ ಸದಾನಂದ ಬಂಗೇರ ಮಾತನಾಡಿದರು.
ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ಕಾರ್ಯಕ್ರಮಗಳು ಇನ್ನಷ್ಟು ಯಶಸ್ವಿಯಾಗಲೆಂದು ಎಮ್ ಆರ್ ಪೂರ್ಣೇಶ್ ಮೂರ್ತಿ ಸಿರಿಗನ್ನಡ ವೇದಿಕೆ ಅಧ್ಯಕ್ಷರು ಶುಭ ಹಾರೈಸಿದರು.
ತಾಲ್ಲೂಕಿನ ಯೋಜನಾಧಿಕಾರಿಗಳಾದ ಸುಧೀರ್ ಪ್ರಾಸ್ತಾವಿಕವಾಗಿ ಮಾತನಾಡಿ ಅತಿಥಿ ಗಣ್ಯರನ್ನು ಸ್ವಾಗತಿಸಿದರು
ವೇದಿಕೆಯ ಅಧ್ಯಕ್ಷತೆಯನ್ನು ಮೂಡಿಗೆರೆ ಟಿಎಪಿಸಿಎಂಎಸ್ ನಿರ್ದೇಶಕರು, ಮಹಿಳಾ ಒಕ್ಕಲಿಗರ ಸಂಘದ ಪ್ರಧಾನ ಕಾರ್ಯದರ್ಶಿ ಶ್ರೀಮತಿ ವಿದ್ಯಾರಾಜು ವಹಿಸಿಕೊಂಡಿದ್ದುಅಧ್ಯಕ್ಷೀಯ ನುಡಿಗಳಾನ್ನಾಡಿದರು.
ಕಾರ್ಯಕ್ರಮದಲ್ಲಿ ಸಾಂಕೇತಿಕವಾಗಿ ವಾತ್ಸಲ್ಯ ಮನೆ ಹಸ್ತಾಂತರ, ವಾತ್ಸಲ್ಯ ಮಿಕ್ಸ್ ವಿತರಣೆ ಮಾಡಲಾಯಿತು,
ಕಾರ್ಯಕ್ರಮದಲ್ಲಿ ಶೌರ್ಯ ವಿಪತ್ತು ನಿರ್ವಹಣಾ ಘಟಕದ ಮಾಸ್ಟರ್ ಪ್ರವೀಣ್ ಪೂಜಾರಿ ಉಪಸ್ಥಿತರಿದ್ದರು. ಶ್ರೀಮತಿ ರೇಖಾ ಪ್ರಾರ್ಥನೆ ಯನ್ನು ಹಾಡಿದರು. ಸೇವಾಪ್ರತಿನಿಧಿಗಳು ,ಕೇಂದ್ರ ದ ಸದಸ್ಯರು ಉಪಸ್ಥಿತರಿದ್ದರು.ಸಾಂಸ್ಕೃತಿ ಕ ಕಾರ್ಯಕ್ರಮ , ಪುಷ್ಪ ಗುಚ್ಛ ಸ್ಪರ್ಧೆ ಏರ್ಪಡಿಸಲಾಯಿತು.
ತಾಲ್ಲೂಕು ಸಮನ್ವಯದಿಕಾರಿ ಭಾರತಿ , ತೀರ್ಪುಗಾರರಾಗಿ ಕಿಶೋರ್ ಉಪಸ್ಥಿತರಿದ್ದರು.



