ಮೂಡಿಗೆರೆ ತಾಲೂಕಿನ ಜಾವಳಿ ವಲಯದ ಕೊಟ್ಟಿಗೆಹಾರದ ಸರ್ಕಾರಿ ಪ್ರೌಢಶಾಲೆಯಲ್ಲಿ ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ವತಿಯಿಂದ ‘ಸ್ವಾಸ್ಥ್ಯ ಸಂಕಲ್ಪ’ ಕಾರ್ಯಕ್ರಮ ಇಂದು ಜರುಗಿತು. ಶಾಲಾ ಮುಖ್ಯೋಪಾಧ್ಯಾಯರಾದ ಭಾಗ್ಯ ಅವರು ಕಾರ್ಯಕ್ರಮಕ್ಕೆ ಅಧ್ಯಕ್ಷತೆ ವಹಿಸಿದರು.
ಕಾರ್ಯಕ್ರಮದಲ್ಲಿ ಮಾತನಾಡಿದ ಗಜೇಂದ್ರ ಗೌಡ ಅವರು, “ಗ್ರಾಮೀಣ ಮಕ್ಕಳಲ್ಲಿ ಆರೋಗ್ಯ ಜಾಗೃತಿ ಹೆಚ್ಚಳವಾಗುವುದು ಸಮಾಜದ ಸಮಗ್ರ ಅಭಿವೃದ್ಧಿಗೆ ಅತ್ಯವಶ್ಯಕ,” ಎಂದು ಹೇಳಿದರು.
ಸುರೇಶ್ ಶೆಟ್ಟಿ ಮಾತನಾಡಿ, “ಸ್ವಚ್ಛತೆ ಹಾಗೂ ಶೀಲವಂತಿಕೆಯ ಅಭ್ಯಾಸ ವಿದ್ಯಾರ್ಥಿಗಳ ಭವಿಷ್ಯ ನಿರ್ಮಾಣಕ್ಕೆ ಆಧಾರ,” ಎಂದು ನುಡಿದರು.
ಜಿಲ್ಲಾ ಜನಜಾಗೃತಿ ಸಮಿತಿಯ ಸದಸ್ಯರಾದ ಪರೀಕ್ಷಿತ್ ಜಾವಳಿ, ಜಾವಳಿ ವಲಯದ ಮೇಲ್ವಿಚಾರಕರಾದ ಸಂದೇಶ್, ಸೇವಾ ಪ್ರತಿನಿಧಿ ಕಾವ್ಯ ಸೇರಿದಂತೆ ಶಿಕ್ಷಕರು, ಪೋಷಕರು ಹಾಗೂ ವಿದ್ಯಾರ್ಥಿಗಳು ಭಾಗವಹಿಸಿದರು.



