nda

 

 

ಬಿಹಾರ ವಿಧಾನಸಭಾ ಚುನಾವಣೆಯಲ್ಲಿ ಎನ್‌ಡಿಎ ಮೈತ್ರಿಕೂಟ ಐತಿಹಾಸಿಕ ಜಯ ಸಾಧಿಸಿದೆ. ಎಲ್ಲ ಲೆಕ್ಕಾಚಾರಗಳನ್ನು, ಸಮೀಕ್ಷೆಗಳನ್ನು ಮೀರಿ ಎನ್.ಡಿ.ಎ. ಮೈತ್ರಿಕೂಟ ಭರ್ಜರಿ ಬಹುಮತದೊಂದಿಗೆ ಮತ್ತೆ ಅಧಿಕಾರಕ್ಕೇರಿದೆ. ಎನ್‌ಡಿಎ 202, ಮಹಾಘಟಬಂಧನ್‌ 35 ಹಾಗೂ ಇತರೆ  6 ಸ್ಥಾನಗಳಲ್ಲಿ ಗೆಲುವು ದಾಖಲಿಸಿವೆ.

ಕಾಂಗ್ರೆಸ್ ಮತ್ತು ಆರ್‌ಜೆಡಿ ನೇತೃತ್ವದ ಮಹಾಘಟಬಂಧನ್ ಮೈತ್ರಿಕೂಟ ಹೀನಾಯ ಸೋಲು ಕಂಡಿದೆ. ಮತಪಟ್ಟಿ ಪರಿಷ್ಕರಣೆಗೆ ವಿರೋಧ, ಮತಕಳವು ಆರೋಪಗಳನ್ನು ಮುಂದುಮಾಡಿ ಬಾರೀ ಪ್ರಚಾರ ನಡೆಸಿದ್ದ ಮಹಾಘಟಬಂಧನ್ ತಂತ್ರಗಾರಿಕೆ ಬಿಹಾರದಲ್ಲಿ ಕೆಲಸ ಮಾಡಿಲ್ಲ.

ಮಹಿಳಾ ಮತದಾರರಿಂದ ಅತ್ಯದಿಕ ವೋಟಿಂಗ್ ದಾಖಲೆಗಳ ವಿಶೇಷತೆ ನಡುವೆ ನಡೆದ ಬಿಹಾರ ಎಲೆಕ್ಷನ್‌ನಲ್ಲಿ ಎನ್‌ಡಿಎ ಕೂಟ ಕಮಾಲ್ ಮಾಡಿದೆ. ಈ ಮೂಲಕ ನಿತೀಶ್ ಕುಮಾರ್-ನರೇಂದ್ರ ಮೋದಿ ಜೋಡಿ ಮೋಡಿ ಮಾಡಿ ಅಧಿಕಾರಕ್ಕೆ ಬಂದಿದೆ.

ಈ ಬಾರಿ ಚಮತ್ಕಾರ ಮಾಡಿಯೇ ತೀರುತ್ತೇವೆ ಅಂತ ಗ್ಯಾರಂಟಿಗಳ ಮೇಲೆ ಗ್ಯಾರಂಟಿಗಳನ್ನು ಘೋಷಿಸಿದ್ದ ತೇಜಸ್ವಿಯಾದವ್-ರಾಹುಲ್ ಗಾಂಧಿ ಮಾತುಗಳಿಗೆ ಬಿಹಾರಿಗಳು ಮನ್ನಣೆ ನೀಡಿಲ್ಲ.

ಈ ಚುನಾವಣೆಯಲ್ಲಿ ಪ್ರಶಾಂತ್ ಕಿಶೋರ್ ಅವರ ಜನ ಸುರಾಜ್ ಪಕ್ಷ ಸಾಕಷ್ಟು ನಿರೀಕ್ಷೆ ಮೂಡಿಸಿತ್ತು.  ಅನೇಕ ನಾಯಕರ ಚುನಾವಣಾ ಗೆಲುವಿಗೆ ಮಾರ್ಗದರ್ಶನ ನೀಡಿರುವ ಪ್ರಶಾಂತ್‌, ತಾವೇ ಸ್ವತಃ ಪಕ್ಷ ಕಟ್ಟಿದ್ದರು. ತಮ್ಮ ಮೊದಲ ಚುನಾವಣಾ ಪರೀಕ್ಷೆಯಲ್ಲೇ ಹೀನಾಯ ಸೋಲು ಅನುಭವಿಸಿದ್ದಾರೆ.

ಬಿಹಾರದಲ್ಲಿ ಮೂರನೇ ರಂಗ ಮತ್ತು ರಾಜಕೀಯ ಪರ್ಯಾಯ ಎಂದು ಬಿಂಬಿಸಲಾದ ಅವರ ಜನ ಸುರಾಜ್ ಪಕ್ಷವು   ತನ್ನ ಖಾತೆಯನ್ನು ತೆರೆಯಲು ವಿಫಲವಾಯಿತು. 238 ಕ್ಷೇತ್ರಗಳಲ್ಲಿ ಸ್ಪರ್ಧಿಸಿದ್ದ ಜನ ಸುರಾಜ್‌ ಪಕ್ಷ ಒಂದೇ ಒಂದು ಸ್ಥಾನವನ್ನೂ ಗೆದ್ದಿಲ್ಲ.

ಬಿಹಾರ ಫಲಿತಾಂಶ ಅಂಕಿಅಂಶ

ಒಟ್ಟು ಕ್ಷೇತ್ರ 243
ಸರಳ ಬಹುಮತ 122

ಎನ್‌ಡಿಎ 202                                         (2020ರಲ್ಲಿ 122 ಸ್ಥಾನ)
ಮಹಾಘಟಬಂಧನ್ 35                        (2020ರಲ್ಲಿ 114 ಸ್ಥಾನ)
ಇತರೆ 6

ಪಕ್ಷವಾರು ಫಲಿತಾಂಶ
ಪಕ್ಷ                        ಜಯ                (ಸ್ಪರ್ಧೆ)
ಬಿಜೆಪಿ                    89                    (101)
ಜೆಡಿಯು                 85                    (101)
ಎಲ್‌ಜೆಪಿ                19                     (29)
ಹೆಚ್‌ಎಎಂ               5                      (5)
ಆರ್‌ಎಲ್‌ಎಂ           4                      (5)

ಆರ್‌ಜೆಡಿ                25                     (143)
ಕಾಂಗ್ರೆಸ್                6                      (61)
ಎಂಐಎಂ                 5                      (25)

Leave a Reply

Your email address will not be published. Required fields are marked *

ಕ್ಷಮಿಸಿ ಹಕ್ಕು ಸೌಮ್ಯ ಕಾಯ್ದಿರಿಸಲಾಗಿದೆ
ಕ್ಷಮಿಸಿ ಹಕ್ಕು ಸೌಮ್ಯ ಕಾಯ್ದಿರಿಸಲಾಗಿದೆ
ಕ್ಷಮಿಸಿ ಹಕ್ಕು ಸೌಮ್ಯ ಕಾಯ್ದಿರಿಸಲಾಗಿದೆ
ಕ್ಷಮಿಸಿ ಹಕ್ಕು ಸೌಮ್ಯ ಕಾಯ್ದಿರಿಸಲಾಗಿದೆ
ಕ್ಷಮಿಸಿ ಹಕ್ಕು ಸೌಮ್ಯ ಕಾಯ್ದಿರಿಸಲಾಗಿದೆ
ಕ್ಷಮಿಸಿ ಹಕ್ಕು ಸೌಮ್ಯ ಕಾಯ್ದಿರಿಸಲಾಗಿದೆ
ಕ್ಷಮಿಸಿ ಹಕ್ಕು ಸೌಮ್ಯ ಕಾಯ್ದಿರಿಸಲಾಗಿದೆ