Screenshot_20251111-201611~2(1)

 

 

ದೀಪಾರಾಧನೆಯಿಂದ ಬೆಳಕಿನಡೆಗೆ ಸಾಗುತ್ತಾ ದಾರಿದ್ರ್ಯವನ್ನು ದೂರ ಮಾಡಬಹುದೆಂದು ಚಿಕ್ಕಮಗಳೂರು ಯೂನಿಯನ್‍ಬ್ಯಾಂಕ್ ಆಫ್ ಇಂಡಿಯ ಕಲ್ಯಾಣನಗರ ಶಾಖೆಅಧಿಕಾರಿ ನಿಶ್ಚಿತಾ ಚೇತನ್ ನುಡಿದರು.

ಚಿಕ್ಕೊಳಲೆ ಸದಾಶಿವಶಾಸ್ತ್ರಿ ಸಭಾಂಗಣದಲ್ಲಿ ಶ್ರೀಪಾರ್ವತಿ ಮಹಿಳಾ ಮಂಡಳಿ ಆಯೋಜಿಸಿದ್ದ ‘ಕಾರ್ತೀಕ ಸಂಭ್ರಮ’ಕಾರ್ಯಕ್ರಮದ ಮುಖ್ಯಅತಿಥಿಗಳಾಗಿ   ಮಾತನಾಡಿದರು.

ನಮ್ಮ ಪೂರ್ವಿಕರು ವೈಜ್ಞಾನಿಕವಾಗಿ ಆಲೋಚಿಸಿ ಹಬ್ಬಹರಿದಿನಗಳನ್ನು ಕಾಲಕಾಲಕ್ಕೆ ಆಚರಿಸಿಕೊಂಡು ಬಂದಿದ್ದಾರೆ.  ಕಾರ್ತೀಕಮಾಸದಲ್ಲಿ ದೀಪಾರಾಧನೆ ಪ್ರಮುಖವಾಗಿರುತ್ತದೆ.  ದೀಪ ಕತ್ತಲೆಯನ್ನು ದೂರಮಾಡಿ ಬೆಳಕನ್ನು ನೀಡುತ್ತದೆ.  ನಮ್ಮ ಕಷ್ಟಕಾರ್ಪಣ್ಯ, ದಾರಿದ್ರ್ಯ ದೂರಮಾಡಿ ಸಂಮೃದ್ಧಿಯ ಕಡೆಗೆ ಕರೆದೊಯ್ಯುತ್ತದೆ.  ಬೆಳಕು ಪ್ರಗತಿ, ಅಭಿವೃದ್ಧಿ ಕಲ್ಯಾಣದ ಸಂಕೇತ ಎಂದರು.

ಕಾರ್ತೀಕ ಮಾಸಕ್ಕಿಂತ ಶ್ರೇಷ್ಠ ಮಾಸವಿಲ್ಲ. ಯುಗಗಳಲ್ಲಿ ಕೃತಯುಗ ಶ್ರೇಷ್ಠ. ವೇದಗಳಿಗಿಂತ ಶಾಸ್ತ್ರಪುರಾಣಗಳಿಲ್ಲ.  ಗಂಗಾನದಿಗಿಂತ ಶ್ರೇಷ್ಠ ತೀರ್ಥವಿಲ್ಲ ಎಂದು ಸ್ಕಂದಪುರಾಣ ಹೇಳಿದೆ.  ಶಿವ ಮತ್ತು ವಿಷ್ಣು ಇಬ್ಬರಿಗೂ ಕಾರ್ತೀಕಮಾಸ ಪ್ರಿಯ.  ಜನರಿಗಷ್ಟೇ ಅಲ್ಲ ದೇವಾನುದೇವತೆಗಳಿಗೂ ಕಂಟಕರಾದ ರಾಕ್ಷಸರ ಸಂಹರಿಸಿದ ಮಾಸವೆಂಬ ಪ್ರತೀತಿ ಇದೆ ಎಂದರು.

ಕಾರ್ತೀಕಮಾಸದಲ್ಲಿ ದೀಪಾರಾಧನೆಯ ಜೊತೆಗೆ ಪವಿತ್ರಸ್ನಾನ, ಪೂಜೆ, ವ್ರತ, ಉಪವಾಸಗಳಂತಹ ಅನೇಕ ಆಚರಣಗಳಿವೆ.  ಪ್ರಧಾನಮಂತ್ರಿ ನರೇಂದ್ರಮೋದಿ ಅವರೂ ಉಪವಾಸ ವ್ರತ ಆಚರಿಸುತ್ತಾರೆ. ಕಲ್ಯಾಣದ ಶಕ್ತಿಯುತ ಸಂದೇಶ ಇಲ್ಲಿದೆ.  ಶ್ರದ್ಧಾಭಕ್ತಿಯ ಆಚರಣೆಗಳಿಂದ ಕುಟುಂಬ, ಸಮಾಜದ ಸುಭೀಕ್ಷೆ ಸಾಧ್ಯವೆಂಬ ನಂಬಿಕೆ ಇದೆ.  ಮನೆಗಳಲ್ಲಿ ಎಲ್ಲ ಆಚರಣೆಗಳನ್ನು ನಡೆಸಿಕೊಂಡು ಬರುವವರು ಹೆಣ್ಣುಮಕ್ಕಳಾದ್ದರಿಂದ ಹೆಣ್ಣು ಸಂಸಾರದಕಣ್ಣು ಎಂಬ ಮಾತಿದೆ ಎಂದರು.

ಆಚರಣೆಗಳ ಅರ್ಥ ಅರಿತು ಮುನ್ನಡೆಯುವುದರಲ್ಲಿ ನಿಜವಾದ ಸಾರ್ಥಕತೆ ಇದೆ.  ಪಾರ್ವತಿ ಮಹಿಳಾಮಂಡಳಿ ಆ ನಿಟ್ಟಿನಲ್ಲಿ ಮುಂದಡಿ ಇಟ್ಟು ಧಾರ್ಮಿಕ ಹಬ್ಬಗಳ ಚಿಂತನ ಕಾರ್ಯಕ್ರಮ ನಡೆಸಿಕೊಂಡು ಬರುತ್ತಿರುವುದು ಶ್ಲಾಘನೀಯ ಎಂದ ನಿಶ್ಚಿತಾ,  ವಿದ್ಯೆಗೆ ಅಪಾರವಾದ ಶಕ್ತಿ ಇದೆ.  ಹೆಣ್ಣುಮಕ್ಕಳನ್ನು ವಿದ್ಯಾವಂತರನ್ನಾಗಿಸಿದರೆ ಸಬಲೀಕರಣ ಸಾಧ್ಯ.  ಕರ್ತೃತ್ವ, ನೇತೃತ್ವ ಮತ್ತು ಮಾತೃತ್ವ ಮೂರು ಪ್ರಮುಖ ಲಕ್ಷಣಗಳನ್ನು ಸ್ವಾಮಿವಿವೇಕಾನಂದರು ಸ್ತ್ರೀಯರಲ್ಲಿ ಇರಬೇಕೆಂದು ಹೇಳಿರುವುದನ್ನು ಉಲ್ಲೇಖಿಸಿದರು.

ಸಮಾರಂಭ ಉದ್ಘಾಟಿಸಿದ ಸುಮಾಬಸವರಾಜು ಅಸತ್ಯದಿಂದ ಸತ್ಯದೆಡೆಗೆ, ಕತ್ತಲೆಯಿಂದ ಬೆಳಕಿನಡೆಗೆ ಕರೆದೊಯ್ಯುವುದೇ ಈ ಕಾರ್ತೀಕಮಾಸದ ವಿಶೇಷತೆ ಎಂದರು.

ಶ್ರೀಪಾರ್ವತಿ ಮಹಿಳಾ ಮಂಡಳಿ ಅಧ್ಯಕ್ಷೆ ಸುಮಿತ್ರಾಶಾಸ್ತ್ರಿ ಅಧ್ಯಕ್ಷತೆವಹಿಸಿ ಮಾತನಾಡಿ ದೀಪ ತ್ಯಾಗದ ಸಂಕೇತ.  ಹಣತೆ ಎಂದೂ ಮಾತನಾಡುವುದಿಲ್ಲ ಬೆಳಕಿನ ಮೂಲಕ ತನ್ನ ಪರಿಚಯಿಸುತ್ತದೆ.  ಮನೆಯ ಮುಂದೆ ಸಂಜೆ ದೀಪಹಚ್ಚುವ ವೈಜ್ಞಾನಿಕ ಕಾರಣ ಕ್ರಿಮಿ-ಕೀಟಗಳ ಹಾವಳಿ ನಿಯಂತ್ರಿಸಲು ದವಸ ಧಾನ್ಯಗಳನ್ನು ಸಂರಕ್ಷಿಸುವುದು ಆಗಿರುತ್ತದೆ.

ಬದುಕಿಗೆ ಬೇಕಾದ ದಶಧರ್ಮಸೂತ್ರಗಳನ್ನು ನೀಡಿರುವ ರೇಣುಕರ ತತ್ವಾದರ್ಶಗಳನ್ನು ಪ್ರಚುರಪಡಿಸುವುದರೊಂದಿಗೆ ಧಾರ್ಮಿಕ ಆಚರಣೆಗಳ ನಿಜಆಶಯಗಳನ್ನು ಚಿಂತಿಸುವ, ಚರ್ಚಿಸುವ, ತಿಳಿಸುವ ಕಾರ್ಯವನ್ನು ನಮ್ಮ ಮಂಡಳಿ 9ವರ್ಷಗಳಿಂದ ನಿರಂತರವಾಗಿ ಮಾಡಿಕೊಂಡು ಬಂದಿದೆ ಎಂದÀು ಸುಮಿತ್ರಾ ನುಡಿದರು.

ಕಾರ್ಯದರ್ಶಿ ಭವಾನಿವಿಜಯಾನಂದ, ಉಪಾಧ್ಯಕ್ಷೆ ಮಂಜುಳಾಮಹೇಶ್ ಮತ್ತು ಖಜಾಂಚಿ ಸೌಭಾಗ್ಯಜಯಣ್ಣ, ವೇದಿಕೆಯಲ್ಲಿ ಉಪಸ್ಥಿತರಿದ್ದರು.  ಸಾಮೂಹಿಕ ರೇಣುಕಾಗೀತೆಗಳನ್ನು ಶೈಲಾಬಸವರಾಜು ನೇತೃತ್ವದಲ್ಲಿ ಹಾಡಲಾಯಿತು.

ಉಪಾಧ್ಯಕ್ಷೆ ಶೈಲಾ ಪ್ರಾಸ್ತಾವಿಸಿದ್ದು, ಸಹಕಾರ್ಯದರ್ಶಿ ಪಾರ್ವತಿಬಸವರಾಜು ಕಾರ್ಯಕ್ರಮ ನಿರೂಪಿಸಿದರು.  ಸದಸ್ಯರಾದ ಶಿಲ್ಪಾರಘು ಸ್ವಾಗತಿಸಿ, ಗೀತಾಬಾಲಿ ವಂದಿಸಿದರು.  ಸುಮಾಬಸವರಾಜ್ ಅತಿಥಿ ಪರಿಚಯಿಸಿದರು. ರೂಪಾತೀರ್ಥೇಶ್ ಪ್ರಾರ್ಥಿಸಿ, ಸುಶೀಲಮ್ಮ ಮತ್ತು ಸರೋಜಮ್ಮ ವೇದಘೋಷ ಮಾಡಿದರು.  ಇದೇ ಸಂದರ್ಭದಲ್ಲಿ ವಿವಿಧ ಆಟೋಟ ಸ್ಪರ್ಧಾಗಳನ್ನು ನಡೆಸಿದ್ದು ವಿಜೇತರಿಗೆ ಆಯೋಜಕರಾದ ಸುಮಾ ಮತ್ತು ರೂಪಾ ಬಹುಮಾನ ವಿತರಿಸಿದರು.

Leave a Reply

Your email address will not be published. Required fields are marked *

ಕ್ಷಮಿಸಿ ಹಕ್ಕು ಸೌಮ್ಯ ಕಾಯ್ದಿರಿಸಲಾಗಿದೆ
ಕ್ಷಮಿಸಿ ಹಕ್ಕು ಸೌಮ್ಯ ಕಾಯ್ದಿರಿಸಲಾಗಿದೆ
ಕ್ಷಮಿಸಿ ಹಕ್ಕು ಸೌಮ್ಯ ಕಾಯ್ದಿರಿಸಲಾಗಿದೆ
ಕ್ಷಮಿಸಿ ಹಕ್ಕು ಸೌಮ್ಯ ಕಾಯ್ದಿರಿಸಲಾಗಿದೆ
ಕ್ಷಮಿಸಿ ಹಕ್ಕು ಸೌಮ್ಯ ಕಾಯ್ದಿರಿಸಲಾಗಿದೆ
ಕ್ಷಮಿಸಿ ಹಕ್ಕು ಸೌಮ್ಯ ಕಾಯ್ದಿರಿಸಲಾಗಿದೆ
ಕ್ಷಮಿಸಿ ಹಕ್ಕು ಸೌಮ್ಯ ಕಾಯ್ದಿರಿಸಲಾಗಿದೆ