oplus_1024

 

 

ಮೂಡಿಗೆರೆ ತಾಲ್ಲೂಕು ದಾರದಹಳ್ಳಿ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಕೊಣಗೆರೆ ಗ್ರಾಮದಲ್ಲಿ ಶ್ರೀ ಚಾಮುಂಡೇಶ್ವರಿ ದೇವಿ ದೇವಾಲಯ ಲೋಕಾರ್ಪಣೆ ಮತ್ತು ಪುನರ್ ಪ್ರತಿಷ್ಠಾಪನಾ ಮಹೋತ್ಸವ ನವೆಂಬರ್ 9ರಿಂದ 11 ರವರೆಗೆ ನೆರವೇರಿತು.

ಮೂರುದಿನಗಳ ಕಾಲ ವಿವಿಧ ಧಾರ್ಮಿಕ ಕಾರ್ಯಗಳು ನೆರವೇರಿದವು. ನವೆಂಬರ್ 11 ರಂದು ಬ್ರಹ್ಮಕಲಶಾಭಿಷೇಕ, ನ್ಯಾಸಪೂಜೆ, ಮಹಾಪೂಜೆ, ಅನ್ನಸಂತರ್ಪಣೆ ನೆರವೇರಿತು.

ಇದೇ ಸಂದರ್ಭದಲ್ಲಿ ದಕ್ಷಿಣ ಕನ್ನಡ ಗುರುಪುರ ಶ್ರೀ ವಜ್ರದೇಹಿ ಮಠದ ಶ್ರೀಶ್ರೀಶ್ರೀ ರಾಜಶೇಖರಾನಂದ ಸ್ವಾಮೀಜಿ ಇವರಿಂದ ಆಶೀರ್ವಚನ ನೀಡಿ ಮಾತನಾಡಿ ; ಹಿಂದೂ ಸಮಾಜದ ಜೀವಾಳವಿರುವುದು ನಮ್ಮ ಧಾರ್ಮಿಕ ಮತ್ತು ಆದ್ಯಾತ್ಮಿಕ ಆಚರಣೆಗಳಲ್ಲಿ, ನಮ್ಮ ಪ್ರತಿಯೊಂದು ಆಚರಣೆಗಳಲ್ಲಿ ಆಳವಾದ ಅರ್ಥ ಮತ್ತು ವೈಜ್ಞಾನಿಕ ಮಹತ್ವ ಅಡಗಿದೆ. ಇಂದು ನಮ್ಮ ಸಂಸ್ಕೃತಿಯನ್ನು ಮರೆಯುವ ಅಸಡ್ಡೆ ಮಾಡುವ ಪ್ರವೃತ್ತಿ ಬೆಳೆಯುತ್ತಿದ್ದು, ಇದರಿಂದ ಸಮಾಜದ ಮೌಲ್ಯಗಳು ನಾಶವಾಗುತ್ತವೆ.

ಹಿಂದೂ ಸಮಾಜ ಈಗ ಹೆಚ್ಚು ಸ್ಥೈರ್ಯದಿಂದ, ಸ್ವಾಭಿಮಾನದಿಂದ ಎದ್ದು ನಿಲ್ಲುವ ಕಾಲ ಸನ್ನಿಹಿತವಾಗಿದೆ. ನಮ್ಮ ಮಕ್ಕಳು ಯುವಜನರಲ್ಲಿ ನಮ್ಮ ಸಂಸ್ಕೃತಿಯ ಬಗ್ಗೆ ಅರಿವು ಪ್ರಜ್ಞೆ ಮೂಡಿಸಬೇಕು. ಈ ನಿಟ್ಟಿನಲ್ಲಿ ಮಾತೆಯರು, ಮಹನಿಯರು ಹೆಚ್ಚಿನ ಮುತುವರ್ಜಿ ವಹಿಸಬೇಕು, ನಮ್ಮ ಕೌಟುಂಬಿಕ ವ್ಯವಸ್ಥೆ ಮತ್ತು ನಂಬಿಕೆ ಮತ್ತಷ್ಟು ಗಟ್ಟಿಗೊಳ್ಳಬೇಕು ಎಂದು ಕಿವಿಮಾತು ಹೇಳಿದರು.

ಕಾರ್ಯಕ್ರಮದಲ್ಲಿ ವಿಧಾನಪರಿಷತ್ ಉಪಸಭಾಪತಿ ಎಂ.ಕೆ. ಪ್ರಾಣೇಶ್, ಮಾಜಿ ಸಚಿವ ಬಿ.ಬಿ.ನಿಂಗಯ್ಯ, ಹಿರಿಯರಾದ ಎಂ.ಎಂ. ಲಕ್ಷ್ಮಣಗೌಡ ಮಾತನಾಡಿದರು. ಮೂಡಿಗೆರೆ ಶಾಸಕಿ ನಯನಾ ಮೋಟಮ್ಮ ಮಹೋತ್ಸವದಲ್ಲಿ ಭಾಗಿಯಾಗಿದ್ದರು.

ಕಾರ್ಯಕ್ರಮದ ಅಧ್ಯಕ್ಷತೆಯನ್ನು ಗ್ರಾಮದ ದಲಿತ ಸಮುದಾಯದ ಹಿರಿಯರಾದ ಪುಟ್ಟಯ್ಯನವರಿಗೆ ನೀಡಿ ಗೌರವ ಸೂಚಿಸಲಾಯಿತು.

ಕೊಣಗೆರೆ ಗ್ರಾಮದ ಪಟೇಲ್ ಕುಟುಂಬದ ದಿ.ಪಟೇಲ್ ಪದ್ಮೇಗೌಡ ಮತ್ತು ದಿ. ಶ್ರೀಮತಿ ಗಂಗಮ್ಮ ನವರು ಮಕ್ಕಳಾದ ಕೆ.ಪಿ.  ಸುರೇಶ್, ಕೆ.ಪಿ. ಸುಧಾ ಹೊನ್ನೇಗೌಡ, ಕೆ.ಪಿ. ಸುಮಿತ್ರೇಗೌಡ, ಕೆ.ಪಿ.ಶಿವಕುಮಾರ್, ಕೆ.ಪಿ. ಸುಧಾಕರ್, ಕೆ.ಪಿ. ಸುಂದ್ರೇಶ್, ಕೆ.ಪಿ. ಸುರೇಂದ್ರ ಕುಟುಂಬವರ್ಗದವರು ಮುತುವರ್ಜಿ ವಹಿಸಿ ಗ್ರಾಮಸ್ಥರ ಸಹಕಾರದೊಂದಿಗೆ ಬಹಳ ಹಿಂದಿನ ಕಾಲದಲ್ಲಿ ಇತ್ತೆಂದು ಬೆಳಕಿಗೆ ಬಂದ ಶ್ರೀ ಚಾಮುಂಡೇಶ್ವರಿ ದೇವಿ ದೇವಾಲಯವನ್ನು ಪುನರ್ ನಿರ್ಮಾಣ ಮಾಡಿ, ವಿಜೃಂಭಣೆಯಿಂದ ಪುನರ್ ಪ್ರತಿಷ್ಠಾಪನೆ ನೆರವೇರಿಸಿದರು.

ಕಾರ್ಯಕ್ರಮದಲ್ಲಿ ಸಾವಿರಾರು ಭಕ್ತಾಧಿಗಳು ಭಾಗವಹಿಸಿ ಆಶೀರ್ವಚನ ಪಡೆದರು,

Leave a Reply

Your email address will not be published. Required fields are marked *

ಕ್ಷಮಿಸಿ ಹಕ್ಕು ಸೌಮ್ಯ ಕಾಯ್ದಿರಿಸಲಾಗಿದೆ
ಕ್ಷಮಿಸಿ ಹಕ್ಕು ಸೌಮ್ಯ ಕಾಯ್ದಿರಿಸಲಾಗಿದೆ
ಕ್ಷಮಿಸಿ ಹಕ್ಕು ಸೌಮ್ಯ ಕಾಯ್ದಿರಿಸಲಾಗಿದೆ
ಕ್ಷಮಿಸಿ ಹಕ್ಕು ಸೌಮ್ಯ ಕಾಯ್ದಿರಿಸಲಾಗಿದೆ
ಕ್ಷಮಿಸಿ ಹಕ್ಕು ಸೌಮ್ಯ ಕಾಯ್ದಿರಿಸಲಾಗಿದೆ
ಕ್ಷಮಿಸಿ ಹಕ್ಕು ಸೌಮ್ಯ ಕಾಯ್ದಿರಿಸಲಾಗಿದೆ
ಕ್ಷಮಿಸಿ ಹಕ್ಕು ಸೌಮ್ಯ ಕಾಯ್ದಿರಿಸಲಾಗಿದೆ