raitha 2

 

 

ಮಲೆನಾಡಿನ ಜ್ವಲಂತ ಸಮಸ್ಯೆಗಳನ್ನು ಆದ್ಯತೆಯ ಮೇರೆಗೆ ಬಗೆಹರಿಸದೇ ಇದ್ದರೆ  ಹೋರಾಟ ಅನಿವಾರ್ಯವಾಗಿರುತ್ತದೆ ಎಂದು ರೈತ ಸಂಘ ಹಸಿರು ಸೇನೆ ಜಿಲ್ಲಾ ಕಾರ್ಯಾಧ್ಯಕ್ಷ ಬಿ.ಸಿ.ದಯಾಕರ್ ಎಚ್ಚರಿಸಿದ್ದಾರೆ.

ಚಿಕ್ಕಮಗಳೂರು ಪ್ರೆಸ್ ಕ್ಲಬ್ ನಲ್ಲಿ ರೈತ ಮುಖಂಡರು ಹಮ್ಮಿಕೊಂಡಿದ್ದ ಸುದ್ದಿಗೋಷ್ಠಿಯಲ್ಲಿ ಅವರು ಮಾತನಾಡುತ್ತಿದ್ದರು.

1996 ರ ಮಧ್ಯಂತರ ಸುಪ್ರೀಂ ಕೋರ್ಟ್ (ನರ್ವೋಚ್ಚ ನ್ಯಾಯಾಲಯದ ) ಆದೇಶದಂತೆ 1980 ರ ಅರಣ್ಯ ಸಂರಕ್ಷಣಾ ಕಾಯ್ದೆ ಪ್ರಕಾರ ಅರಣ್ಯ ಪ್ರದೇಶದಲ್ಲಿ ಅರಣೋತ್ತರ ಚಟುವಟಿಕೆಗಳಿಗೆ ಮಾಡಲಾದ ಕಠಿಣ ಆದೇಶವನ್ನು ಇದುವರೆಗೆ ಅರಣ್ಯ ಇಲಾಖೆ ಮತ್ತು ಸರ್ಕಾರಗಳು ರೈತರ ಹಕ್ಕು ಭಾಧ್ಯತೆಗಳಾದ 1978 ರ ಒಳಗಿನ ಮೂರು ಎಕರೆ ಜಮೀನಿನ ಪ್ರದೇಶವನ್ನು ಗುರುತಿಸದೇ ಹಾಗೂ ಅರಣ್ಯ ವಾಸಿಗಳ ಮತ್ತು ಆದಿವಾಸಿಗಳ ಹಕ್ಕುಗಳನ್ನು ಗುರುತಿಸದೇ ನಿರ್ಲಕ್ಷ್ಯ ಮಾಡಿರುವುದು ಮತ್ತು ರಾಷ್ಟ್ರೀಯ ಹಸಿರು ಪೀಠಕ್ಕೆ ಸಮಗ್ರವಾದ ವರದಿಯನ್ನು ನೀಡದಿರುವುದು ಈ ಅರಣ್ಯ ಮತ್ತು ಕಂದಾಯ ಭೂಮಿಗಳ ಸಮಸ್ಯೆಗೆ ಮೂಲ ಕಾರಣವಾಗಿರುತ್ತದೆ.

ರಾಜ್ಯದಲ್ಲಿ ಅರಣ್ಯ ಭೂಮಿ ಸಮಸ್ಯೆ ಮತ್ತು ಕಂದಾಯ ಭೂಮಿ ಸಮಸ್ಯೆಗಳನ್ನು ಕೂಡಲೆ ಅರಣ್ಯ ಇಲಾಖೆ ಮತ್ತು ಸರ್ಕಾರ ಇದುವರೆಗೆ ಆಗಿರುವಂತಹ ಲೋಪ ದೋಷಗಳು ಅಂದರೆ, 1980 ಈಚೆಗೆ ಲಕ್ಷಗಟ್ಟಲೆ ಎಕರೆ ಕಂದಾಯ ಭೂಮಿಯನ್ನು ಸಾಮಾಜಿಕ ಅರಣ್ಯ ನಡುತೋಪು ಮಾಡಲು ಕಂದಾಯ ಇಲಾಖೆ ಮತ್ತು ಅರಣ್ಯ ಇಲಾಖೆ ಒಂದು ಷರತ್ತು ಮತ್ತು ಒಪ್ಪಂದದ ಮೇರೆಗೆ ಸಾಮಾಜಿಕ ಅರಣ್ಯ ಮಾಡಲು ಕಂದಾಯ ಇಲಾಖೆಯಿಂದ ವರ್ಗಾಯಿಸಲಾಗಿದೆ. ಈಗ ಅರಣ್ಯ ಇಲಾಖೆಯವರು ಕಾನೂನು ಬಾಹಿರವಾಗಿ ವರ್ಗಾವಣೆ ಮಾಡಿಕೊಂಡ ಕಂದಾಯ ಭೂಮಿಗಳೆಲ್ಲ 1980 ಅರಣ್ಯ ಸಂರಕ್ಷಣಾ ಕಾಯ್ದೆ ಪ್ರಕಾರ ಈ ಭೂಮಿ ಎಲ್ಲಾ ಅರಣ್ಯ ಭೂಮಿ ಎಂದು ಪಹಣಿಯಲ್ಲಿ ನಮೂದಿಸಿ ರಾಜ್ಯದಲ್ಲಿ ರೈತರ. ದಲಿತರ, ಬಡವರಮನೆ ಮತ್ತು ಕೃಷಿ ಜಮೀನನ್ನು ಸ್ಮಷಾಣ, ದಾರಿ. ಶಾಲೆ ಹಾಗೂ ಭವಿಷ್ಯದ ಅಭಿವೃದ್ಧಿ ಯೋಜನೆಗಳಿಗೆ ಕಂದಾಯ ಜಾಗವನ್ನು ಮೀಸಲಿಡದೇ 1980 ರ ನಂತರದಲ್ಲಿ ಅಧಿಸೂಚಿತ ಅರಣ್ಯ ಪ್ರದೇಶಗಳಲ್ಲಿ ಮಾಡಲಾದ ಎಲ್ಲಾ ಮಂಜೂರಾತಿಗಳು ಕಾನೂನು ಬಾಹಿರ ಮಂಜೂರಾತಿಗಳೆಂದು ಪರಿಗಣಿಸತಕ್ಕದ್ದು ಎಂದು ರಾಜ್ಯದ ರೈತರಿಗೆ ಮತ್ತೊಂದು ಮರಣ ಶಾಸನವಾಗಲಿರುವ ಸರ್ಕ್ಯೂಲರ್ ಮತ್ತು ಎಸ್.ಐ.ಟಿ ರಚನೆ ಮಾಡಿರುವುದು ಸೂಕ್ತವಲ್ಲ. ಆದ್ದರಿಂದ ರಾಜ್ಯ ಸರ್ಕಾರ ಸರ್ಕಾರದ ಮಟ್ಟದಲ್ಲಿ ಉನ್ನತ ಮಟ್ಟದ ಜಂಟಿ ಸಮಿತಿಯನ್ನು ಮಾಡಿ ಗ್ರಾಮ ಮಟ್ಟದಲ್ಲಿ ವರದಿಯನ್ನು ತಯಾರಿಸಿ ಸರ್ಕಾರ ಈ ಕಗ್ಗಂಟಾದ ಅರಣ್ಯ ಮತ್ತು ಕಂದಾಯ ಭೂಮಿ ಸಮಸ್ಯೆಯನ್ನು ಬಗೆಹರಿಸಬೇಕು.

ಅರಣ್ಯ ಇಲಾಖೆ ಪರಿಸರಕ್ಕೆ ಮಾರಕವಾದ ಅಕೇಶಿಯ, ನಿಲಗಿರಿ, ಸಾಗುವಾನಿ ಮರಗಳನ್ನು ಬೆಳೆಸಿ ಕಾಡು ಪ್ರಾಣಿಗಳಾದ ಆನೆ, ಹುಲಿ, ಕಾಡುಕೋಣ, ಮಂಗಗಳು. ನವಿಲು, ಕಾಡು ಹಂದಿಗಳು ರೈತ ಕಾಫಿ ಬೆಳೆಗಾರರ ತೋಟ, ಹೊಲ, ಗದ್ದೆಗಳಿಗೆ ಬಂದು ವಿಪರೀತ ಬೆಳೆ ನಾಶ ಮನುಷ್ಯರ ಪ್ರಾಣ ಹಾನಿಗೆ ಕಾರಣವಾಗಿರುತ್ತದೆ. ರೈತರ ಬೆಳೆಗಳಿಗೆ ವೈಜ್ಞಾನಿಕ ಬೆಲೆ ಪರಿಹಾರ ನಿಗದಿ ಮಾಡಬೇಕು ಎಂದರು.

ರೈತ ಸಂಘದ ಮೂಡಿಗೆರೆ ತಾಲ್ಲೂಕು ಅಧ್ಯಕ್ಷ ಎಸ್.ಪಿ. ರಾಜು ಮಾತನಾಡಿ ; ಮೂಗ್ತಿಹಳ್ಳಿ ಯಿಂದ ಮೂಡಿಗೆರೆ ಹ್ಯಾಂಡ್ ಪೋಸ್ಟ್ ವರೆಗೆ ರಾಷ್ಟ್ರೀಯ ಹೆದ್ದಾರಿ ಕಾಮಗಾರಿಯನ್ನು ಕೂಡಲೇ ಅರಂಭಿಸಬೇಕು. ಜಿಲ್ಲೆಯ ಎಲ್ಲಾ ರಸ್ತೆಯ ಹೊಂಡ ಗುಂಡಿಗಳನ್ನು ಮುಚ್ಚಬೇಕು. ಮತ್ತು ರಸ್ತೆ ಬದಿಯ ಕಾಡುಗಳನ್ನು ತೆರವುಗೊಳಿಸಬೇಕು. ಮತ್ತು ಕೇಂದ್ರ ಸರ್ಕಾರದ ಅಭಿವೃದ್ಧಿ ಪರವಾದ ಎಲ್ಲಾ ಯೋಜನೆಗಳನ್ನು ಕಟ್ಟುನಿಟ್ಟಾಗಿ ಜಾರಿ ಮಾಡಬೇಕು. ಹಾಗೂ ಹರ್‌ಗರ್ ಜಲ್ ಯೋಜನೆಯಲ್ಲಿ ಮಾಡಿದ ಲೋಪದೋಷಗಳನ್ನು ಕೂಡಲೇ ಬಗೆಹರಿಸಬೇಕು.

ಆಗುಂಬೆ ಮಲೆನಾಡಿನ ಪ್ರದೇಶದಲ್ಲಿ ಕಾಳಿಂಗ ಸರ್ಪಗಳ ಅಧ್ಯಯನದ ಹೆಸರಿನಲ್ಲಿ ಕಾಳಿಂಗ ಸರ್ಪಗಳ ಮೊಟ್ಟೆಗಳನ್ನು ತಂದು ಕೃತಕವಾಗಿ ಮರಿಮಾಡಿ ಅವುಗಳಿಗೆ ಪಿ.ಐ.ಜಿ ಟ್ಯಾಗ್‌ಗಳನ್ನು ಅಳವಡಿಸಿ ಅಧ್ಯಯನದ ಹೆಸರಿನಲ್ಲಿ ಕಾಡಿನಲ್ಲಿ ಹೋಂಸ್ಟೇ ಮಾಡಿಕೊಂಡಿರುವುದು, ಈ ಅವೈಜ್ಞಾನಿಕ ಅಧ್ಯಯನದಿಂದ ಕಾಳಿಂಗ ಸರ್ಪಗಳ ಸ್ವಾಭಾವಿಕ ಜೀವನಕ್ಕೆ ದಕ್ಕೆ ಉಂಟಾಗಿರುತ್ತದೆ. ಇದರ ಬಗ್ಗೆ ಕೂಡಲೇ ಕ್ರಮ ಕೈಗೊಳ್ಳಬೇಕು  ಎಂದು ಆಗ್ರಹಿಸಿದರು.

ರೈತ ಸಂಘದ ಜಿಲ್ಲಾ ಸಂಚಾಲಕ ಡಿ.ಎಸ್.ರಮೇಶ್ ಮಾತನಾಡಿ ;  ಆನೆ ಮತ್ತು ಕಾಡು ಪ್ರಾಣಿಗಳ ಹಾವಳಿಯಿಂದ ರಾಜ್ಯದಲ್ಲಿ ಕಳೆದ 5 ವರ್ಷಗಳಿಂದ 300 ಜನಕ್ಕೂ ಹೆಚ್ಚು ಸಾವನಪ್ಪಿರುತ್ತಾರೆ. ಹಾಗೂ ಸಾವಿರಾರು ಜನ ಶಾಶ್ವತ ಅಂಗವಿಕಲರು ಮತ್ತು ಅರ್ಧ  ಅಂಗವಿಕಲರಾಗಿರುತ್ತಾರೆ. ಆದ್ದರಿಂದ ಇನ್ನುಮುಂದೆ ಪ್ರಾಣಿಗಳ ಹಾವಳಿಯಿಂದ ಸಾವನ್ನಪ್ಪಿದರೆ ಮತ್ತು ಅಂಗವಿಕಲರಾದರೆ ಅರಣ್ಯ ಇಲಾಖೆ ಮತ್ತು ಸರ್ಕಾರದ ವತಿಯಿಂದ ಮರಣಹೊಂದಿದವರಿಗೆ 1 ಕೋಟಿ ರೂಪಾಯಿಗಳು, ಅಂಗವಿಕಲರಾದವರಿಗೆ 50 ಲಕ್ಷ ರೂಪಾಯಿಗಳ ಪರಿಹಾರ ನೀಡಬೇಕು. ಹಾಗೇಯೇ ಆನೆ ಮತ್ತು ಕಾಡು ಪ್ರಾಣಿಗಳು ಹಾವಳಿ ತಪ್ಪಿಸಲು ಅರಣ್ಯ ಇಲಾಖೆ ಮತ್ತು ಸರ್ಕಾರ ತಕ್ಷಣ ಪರಿಹಾರ ಮತ್ತು ಶಾಶ್ವತ ಪರಿಹಾರಕ್ಕೆ ಕೂಡಲೇ ಕ್ರಮ ಕೈಗೊಳ್ಳಬೇಕು ಎಂದರು.

ರೈತ ಸಂಘದ ಚಿಕ್ಕಮಗಳೂರು ತಾಲ್ಲೂಕು ಅಧ್ಯಕ್ಷ ತುಳಸೇಗೌಡ ;   ಸರ್ಫಾಸಿ ಕಾಯ್ದೆಯನ್ನು ಆರ್.ಬಿ.ಐ ಕೃಷಿಯೇತರ ಚಟುವಟಿಕೆಗೆ ಮಾಡಿದ ಕಾನೂನನ್ನು ನಮ್ಮ ರಾಜ್ಯದ ರಾಷ್ಟ್ರೀಯ ಬ್ಯಾಂಕುಗಳು ರೈತರು, ಬಡವರು ಕೃಷಿಕರು ಬೆಳೆ ಸಾಲ ಮತ್ತು ಅಭಿವೃದ್ಧಿ ಸಾಲಗಳ ವಸೂಲಾತಿಗಾಗಿ ಯಾವುದೇ ವಿಚಾರಣೆ ಮಾಡದೇ ಈ ಕಾನೂನು ಬಾಹಿರ ತುರ್ತು ಸರ್ಫಾಸಿ ಕಾಯ್ದೆಯನ್ನು ಅಳವಡಿಸಿಕೊಂಡಿರುವುದು ರಾಜ್ಯ ರೈತರಿಗೆ ಮರಣ ಶಾಸನವಾಗಿರುತ್ತದೆ. ಇದನ್ನು ಕೂಡಲೇ ಸರ್ಕಾರ ಮತ್ತು ಅಧಿಕಾರಿಗಳು ರಾಜ್ಯ ಮಟ್ಟದಲ್ಲಿ ತೀರ್ಮಾನ ಮಾಡಿ ಕೇಂದ್ರ ಸರ್ಕಾರಕ್ಕೆ ಪ್ರಸ್ತಾವನೆಯನ್ನು ಕೂಡಲೆ ಕಳಿಸಿಕೊಡಬೇಕು ಎಂದು ಆಗ್ರಹಿಸಿದರು.

ಜಿಲ್ಲಾ ಮಟ್ಟದಲ್ಲಿ ಅಧಿಕಾರಿಗಳು ಜನಪ್ರತಿನಿಧಿಗಳು ರೈತರು ಜನಸಾಮಾನ್ಯರು ಒಳಗೊಂಡಂತೆ ಸಭೆಯನ್ನು ಮಾಡಿ ಸಮಸ್ಯೆಗಳನ್ನು ಬಗೆಹರಿಸಬೇಕು. ಬಗೆಹರಿಸದಿದ್ದಲ್ಲಿ ಹೋರಾಟ ಅನಿವಾರ್ಯವಾಗಿರುತ್ತದೆ ಎಂದು  ರೈತ ಮುಖಂಡರು ಎಚ್ಚರಿಸಿದ್ಧಾರೆ.

Leave a Reply

Your email address will not be published. Required fields are marked *

ಕ್ಷಮಿಸಿ ಹಕ್ಕು ಸೌಮ್ಯ ಕಾಯ್ದಿರಿಸಲಾಗಿದೆ
ಕ್ಷಮಿಸಿ ಹಕ್ಕು ಸೌಮ್ಯ ಕಾಯ್ದಿರಿಸಲಾಗಿದೆ
ಕ್ಷಮಿಸಿ ಹಕ್ಕು ಸೌಮ್ಯ ಕಾಯ್ದಿರಿಸಲಾಗಿದೆ
ಕ್ಷಮಿಸಿ ಹಕ್ಕು ಸೌಮ್ಯ ಕಾಯ್ದಿರಿಸಲಾಗಿದೆ
ಕ್ಷಮಿಸಿ ಹಕ್ಕು ಸೌಮ್ಯ ಕಾಯ್ದಿರಿಸಲಾಗಿದೆ
ಕ್ಷಮಿಸಿ ಹಕ್ಕು ಸೌಮ್ಯ ಕಾಯ್ದಿರಿಸಲಾಗಿದೆ
ಕ್ಷಮಿಸಿ ಹಕ್ಕು ಸೌಮ್ಯ ಕಾಯ್ದಿರಿಸಲಾಗಿದೆ