guddali 1

 

 

ಮೂಡಿಗೆರೆ ತಾಲೂಕಿನ ಬಾಳೂರು ಗ್ರಾಮ ಪಂಚಾಯತಿ ವ್ಯಾಪ್ತಿಯ ಬಾಳೂರು ಗ್ರಾಮ ಹಾಗೂ ಹೇಮಾವತಿ ನದಿಗೆ ಸುಗಮ ಸಂಪರ್ಕ ಕಲ್ಪಿಸುವ ಬಹು ನಿರೀಕ್ಷಿತ 50 ಲಕ್ಷ ರೂ. ಮೌಲ್ಯದ ಸೇತುವೆ ನಿರ್ಮಾಣ ಕಾರ್ಯಕ್ಕೆ ಇಂದು ಶಾಸಕಿ ನಯನ ಮೋಟಮ್ಮ ಅವರಿಂದ ಗದ್ದುಲಿ ಪೂಜೆ ನೆರವೇರಿತು.

ಗ್ರಾಮಸ್ಥರ ಹರ್ಷೋದ್ಘಾರ ಮಧ್ಯೆ ಮಾತನಾಡಿದ ಶಾಸಕಿ ನಯನ ಮೋಟಮ್ಮ ಅವರು, “ಈ ಸೇತುವೆ ಬಾಳೂರಿನ ಸಂಚಾರಕ್ಕೆ ಹೊಸ ಜೀವ ತುಂಬುವ ಜೊತೆಗೆ ಕೃಷಿ, ಮತ್ತು ವಿದ್ಯಾರ್ಥಿಗಳ ಸಂಚಾರಕ್ಕೆ ಹೊಸ ಬೆಳಕಾಗುತ್ತದೆ. ಬಾಳೂರಿನ ಪ್ರಗತಿ ನಮ್ಮ ಜವಾಬ್ದಾರಿ—ಈ ಯೋಜನೆ ಗ್ರಾಮಾಭಿವೃದ್ಧಿಗೆ ದೊಡ್ಡ ಹೆಜ್ಜೆ,” ಎಂದು ಹೇಳಿದರು.

ಕಾರ್ಯಕ್ರಮದಲ್ಲಿ ಬಿಜಿ ಶ್ರೀನಾಥ್, ಉಪೇಂದ್ರ ಗೌಡ, ಮಂಜುನಾಥ್, ಮಹೇಶ್ ಬಾಳೂರು, ಲಾರೆನ್ಸ್, ಸತೀಶ್ ಬಾಳೂರು, ಸುರೇಶ್, ಶರಣ್ ಪಟೇಲ್, ಬಾಲಕೃಷ್ಣ, ವಿಜೇಂದ್ರ ಗೌಡ, ಆದರ್ಶ್ ಸೇರಿದಂತೆ ಅನೇಕ ಗ್ರಾಮಸ್ಥರು ಭಾಗವಹಿಸಿ ಗುದ್ದಲಿ ಪೂಜೆಗೆ ಸಕ್ರಿಯ ಬೆಂಬಲ ನೀಡಿದ್ದಾರೆ.

ಹೊಸ ಸೇತುವೆಯ ನಿರ್ಮಾಣ ಆರಂಭದಿಂದ ಬಾಳೂರಿನ ಕನಸು ನನಸಾಗಿರುವುದಾಗಿ ಗ್ರಾಮಸ್ಥರು ಸಂತೋಷ ವ್ಯಕ್ತಪಡಿಸಿದರು. ಗ್ರಾಮಾಭಿವೃದ್ಧಿಗೆ ಹೊಸ ಬಾಗಿಲು ತೆರೆಯಲಿರುವ ಈ ಯೋಜನೆಗೆ ಜನರು ಭರವಸೆ ಮತ್ತು ಹರ್ಷವನ್ನು ವ್ಯಕ್ತಪಡಿಸಿದರು.

****************

ಮೂಡಿಗೆರೆ ತಾಲೂಕಿನ ಕೊಟ್ಟಿಗೆಹಾರದ ತರುವೆ ಗ್ರಾಮದಲ್ಲಿ ಕೆಆರ್‌ಐಡಿಎಲ್ ಇಲಾಖೆಯಿಂದ ಮಂಜೂರಾದ ಒಟ್ಟು ₹47 ಲಕ್ಷ ವೆಚ್ಚದ ರಸ್ತೆ ನಿರ್ಮಾಣ ಕಾಮಗಾರಿಗೆ ಶಾಸಕಿ ನಯನ ಮೋಟಮ್ಮ ಗುದ್ದಲಿ ಪೂಜೆ ನೆರವೇರಿಸಿದರು.

ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, “ಗ್ರಾಮಗಳ ಅಭಿವೃದ್ಧಿಯೇ ನಿಜವಾದ ಸಮಗ್ರ ಅಭಿವೃದ್ಧಿ. ಈ ರಸ್ತೆ ನಿರ್ಮಾಣದಿಂದ ಜನಜೀವನಕ್ಕೆ ಹೆಚ್ಚಿನ ಸುಗಮತೆ ಲಭಿಸಲಿದೆ. ತರುವೆ ಗ್ರಾಮ ಪಂಚಾಯಿತಿಗೆ ಅಗತ್ಯವಾದ ಎಲ್ಲಾ ಯೋಜನೆಗಳನ್ನು ಹಂತ ಹಂತವಾಗಿ ಜಾರಿಗೆ ತರುವ ಕೆಲಸ ನಡೆಯುತ್ತಿದೆ. ಜನರ ಬೇಡಿಕೆಗಳಿಗೆ ಸ್ಪಂದಿಸುವುದು ನಮ್ಮ ಜವಾಬ್ದಾರಿ. ಅಭಿವೃದ್ಧಿ ಕಾರ್ಯಗಳಲ್ಲಿ ರಾಜಕೀಯಕ್ಕಿಂತ ಸೇವೆಗೆ ಹೆಚ್ಚಿನ ಪ್ರಾಮುಖ್ಯತೆ ನೀಡುತ್ತಿದ್ದೇವೆ,” ಎಂದು ಹೇಳಿದರು.

ಕಾರ್ಯಕ್ರಮದಲ್ಲಿ ಇಂಜಿನಿಯರ್ ಚಂದನ್, ಗ್ರಾಮ ಪಂಚಾಯಿತಿ ಅಧ್ಯಕ್ಷೆ ಸುಶೀಲ ಗೋಪಾಲ್, ಸದಸ್ಯರು ಸತೀಶ್ ಗೌಡ, ರಘು, ಮುಖಂಡರಾದ ರಾಮಚಂದ್ರಗೌಡ, ಸೋಮೇಶ್ ಗೌಡ, ಟಿ.ಎ. ಖಾದರ್, ಅಜೀದ್, ವಿಜಯಗೌಡ, ವಿನಯ್, ಬಣಕಲ್ ಹೋಬಳಿಯ ಕಾಂಗ್ರೆಸ್ ಅಧ್ಯಕ್ಷ ಸುಬ್ರಮಣ್ಯ ಸೇರಿದಂತೆ ಹಲವು ಮಂದಿ ಜನಪ್ರತಿನಿಧಿಗಳು, ಕಾರ್ಯಕರ್ತರು ಹಾಗೂ ಗ್ರಾಮಸ್ಥರು ಭಾಗವಹಿಸಿದ್ದರು.

Leave a Reply

Your email address will not be published. Required fields are marked *

ಕ್ಷಮಿಸಿ ಹಕ್ಕು ಸೌಮ್ಯ ಕಾಯ್ದಿರಿಸಲಾಗಿದೆ
ಕ್ಷಮಿಸಿ ಹಕ್ಕು ಸೌಮ್ಯ ಕಾಯ್ದಿರಿಸಲಾಗಿದೆ
ಕ್ಷಮಿಸಿ ಹಕ್ಕು ಸೌಮ್ಯ ಕಾಯ್ದಿರಿಸಲಾಗಿದೆ
ಕ್ಷಮಿಸಿ ಹಕ್ಕು ಸೌಮ್ಯ ಕಾಯ್ದಿರಿಸಲಾಗಿದೆ
ಕ್ಷಮಿಸಿ ಹಕ್ಕು ಸೌಮ್ಯ ಕಾಯ್ದಿರಿಸಲಾಗಿದೆ
ಕ್ಷಮಿಸಿ ಹಕ್ಕು ಸೌಮ್ಯ ಕಾಯ್ದಿರಿಸಲಾಗಿದೆ
ಕ್ಷಮಿಸಿ ಹಕ್ಕು ಸೌಮ್ಯ ಕಾಯ್ದಿರಿಸಲಾಗಿದೆ