ಚಿರತೆ ದಾಳಿಗೆ ಮಗು ಸಾವನಪ್ಪಿರುವ ದಾರುಣ ಘಟನೆ ಚಿಕ್ಕಮಗಳೂರು ಜಿಲ್ಲೆಯಲ್ಲಿ ನಡೆದಿದೆ.
ಚಿಕ್ಕಮಗಳೂರು ಜಿಲ್ಲೆಯ ತರೀಕೆರೆ ತಾಲೂಕಿನಲ್ಲಿ ಗುರುವಾರ ಈ ದುರ್ಘಟನೆ ನಡೆದಿದೆ.
5 ವರ್ಷದ ಸಾನ್ವಿ ಎಂಬ ಮಗುವನ್ನು ಚಿರತೆ ಹೊತ್ತುಕೊಂಡು ಹೋಗಿ ಕೊಂದು ಹಾಕಿದೆ
ತರೀಕೆರೆ ತಾಲೂಕಿನ ಮುಂಡ್ರೆ ಸಮೀಪದ ನವಿಲೇಕಲ್ ಗುಡ್ಡ ಗ್ರಾಮದಲ್ಲಿ ಘಟನೆ ಸಂಭವಿಸಿದೆ.
ಮನೆಯ ಹಿಂದೆ ಕೊಟ್ಟಿಗೆಯಲ್ಲಿ ಆಟವಾಡುತ್ತಿದ್ದ ಮಗು ಮೇಲೆ ದಾಳಿ ಮಾಡಿದ ಚಿರತೆ
ಮಗು ಕೂಗುತ್ತಿದ್ದಂತೆ ಓಡಿ ಬಂದ ಮನೆಯವರು
ಮಗುವನ್ನ ಕಾಡಿನತ್ತ ಎಳೆದುಕೊಂಡು ಹೋದ ಚಿರತೆ
ಸ್ಥಳಿಯರು ಹುಡುಕಾಡಿದಾಗ ಕಾಡಂಚಿನಲ್ಲಿ ಪತ್ತೆಯಾದ ಮಗು ಮೃತದೇಹ
ಬೀರೂರು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.



