gdfg_page-0001

 

 

70ನೇ ಕನ್ನಡ ರಾಜ್ಯೋತ್ಸವ ಅಂಗವಾಗಿ ಕೊಟ್ಟಿಗೆಹಾರದ ಕೆ.ಪಿ.ಪೂರ್ಣಚಂದ್ರ ತೇಜಸ್ವಿ ಪ್ರತಿಷ್ಠಾನದ ವತಿಯಿಂದ ಆಯೋಜಿಸಿದ್ದ ತೇಜಸ್ವಿಯವರಿಗೊಂದು ಪತ್ರ ಕನ್ನಡ ಕೈಬರಹ ಸ್ಪರ್ಧೆಯ ಫಲಿತಾಂಶ ಪ್ರಕಟವಾಗಿದ್ದು ಅತ್ಯುತ್ತಮ ಕೈಬರಹ ವಿಭಾಗದಲ್ಲಿ ಚಿಕ್ಕಮಗಳೂರಿನ ಬಿಜಿಎಸ್ ಕಾಲೇಜು ವಿದ್ಯಾರ್ಥಿನಿ ಶುಭ ವಿ ಪ್ರಥಮ, ಅತ್ಯುತ್ತಮ ಪತ್ರ ವಿಭಾಗದಲ್ಲಿ ಮಂಡ್ಯದ ಸಿಂಚನ ಪ್ರಥಮ ಸ್ಥಾನ ಪಡೆದಿದ್ದಾರೆ.

ಅತ್ಯುತ್ತಮ ಕನ್ನಡ ಕೈಬರಹ ವಿಭಾಗದಲ್ಲಿ ಸಾಗರ ತಾಲ್ಲೂಕಿನ ಮಾಸೂರಿನ ಸರ್ಕಾರಿ ಪ್ರೌಢಶಾಲೆಯ ವಿದ್ಯಾರ್ಥಿನಿ ಪೃಥ್ವಿ (ದ್ವಿತೀಯ), ಮೂಡಿಗೆರೆ ತಾಲ್ಲೂಕಿನ ತರುವೆಯ ಏಕಲವ್ಯ ಮಾದರಿ ವಸತಿ ಶಾಲೆಯ ವಿದ್ಯಾರ್ಥಿನಿ ರಕ್ಷಿತಾ (ತೃತೀಯ), ಬೆಂಗಳೂರಿನ ಬಗಲಕುಂಟೆಯ ರಿತುಪರ್ಣ ಆರ್, ಚಿಕ್ಕಮಗಳೂರಿನ ತನೂಡಿಯ ಪ್ರಾಚಿ ಟಿ.ವಿ, ಚಿಕ್ಕಮಗಳೂರಿನ ಆದಿಶಕ್ತಿನಗರದ ರಶ್ಮಿ ಎಸ್ (ಸಮಾಧಾನಕರ) ಬಹುಮಾನವನ್ನು ಪಡೆದುಕೊಂಡಿದ್ದಾರೆ.

ಅತ್ಯುತ್ತಮ ಪತ್ರ ವಿಭಾಗದಲ್ಲಿ ತುಮಕೂರಿನ ಧವನ್ ಡಿ.ಸ್ (ದ್ವಿತೀಯ), ಕಡೂರಿನ ಜೆಬಿಎಸ್ ಶಾಲೆಯ ವಿದ್ಯಾರ್ಥಿನಿ ಲಿಖಿತ ಬಿ (ತೃತೀಯ), ಹಾಸನದ ಹೇಮಂತ್ ಉದಾಸಿಮಠ, ಮೂಡಿಗೆರೆ ಬಿ ಹೊಸಳ್ಳಿಯ ಐಶ್ವರ್ಯ ಎಂ.ಸಿ, ಹಾಸನದ ಸ್ಪಂದನ ಎಸ್.ಎಂ (ಸಮಾಧಾನಕರ) ಬಹುಮಾನವನ್ನು ಪಡೆದಿದ್ದಾರೆ.

ಕೈಬರಹ ಸ್ಪರ್ಧೆಯ ಎರಡು ವಿಭಾಗಗಳಲ್ಲಿ ಮೊದಲ ಮೂರು ಸ್ಥಾನ ಪಡೆದ ಕೈಬರಹಗಳಿಗೆ ಕ್ರಮವಾಗಿ 5 ಸಾವಿರ, 3 ಸಾವಿರ ಹಾಗೂ 2 ಸಾವಿರ ನಗದು ಮತ್ತು ಅಭಿನಂದನಾ ಪತ್ರ ಲಭಿಸಲಿದೆ. ಕೈಬರಹ ಸ್ಪರ್ಧೆಯ ವಿಜೇತರಿಗೆ ಬಹುಮಾನ ವಿತರಣಾ ಕಾರ್ಯಕ್ರಮ ನವೆಂಬರ್ 29 ರಂದು ಬೆಳಿಗ್ಗೆ 11 ಗಂಟೆಗೆ ಕೊಟ್ಟಿಗೆಹಾರದ ಕೆ.ಪಿ.ಪೂರ್ಣಚಂದ್ರ ತೇಜಸ್ವಿ ಪ್ರತಿಷ್ಠಾನದಲ್ಲಿ ನಡೆಯಲಿದೆ.

ರಾಜ್ಯದ ವಿವಿಧ ಜಿಲ್ಲೆಗಳಿಂದ ನೂರಕ್ಕೂ ಹೆಚ್ಚು ಕೈಬರಹಗಳು ಸ್ಪರ್ಧೆಗೆ ಬಂದಿದ್ದವು. ಕಲಾವಿದರಾದ ಸುರೇಶ್ ಚಂದ್ರ ದತ್ತ, ಕ್ಯಾಲಿಗ್ರಾಫರ್ ಮತ್ತು ಕೈಬರಹ ತಜ್ಞರಾದ ಟಿ.ಬಿ.ಕೋಡಿಹಳ್ಳಿ, ಲೇಖಕರಾದ ಡಾ.ಸಂಪತ್ ಬೆಟ್ಟಗೆರೆ, ಕನ್ನಡ ಮತ್ತು ಸಂಸ್ಕøತಿ ಇಲಾಖೆಯ ಸಹಾಯಕ ನಿರ್ದೇಶಕರು ಮತ್ತು ತೇಜಸ್ವಿ ಪ್ರತಿಷ್ಠಾನದ ಸದಸ್ಯ ಕಾರ್ಯದರ್ಶಿಗಳಾದ ಡಾ.ಸಿ ರಮೇಶ್ ಅವರು ಸ್ಪರ್ಧೆಯ ತೀರ್ಪುಗಾರರಾಗಿ ಭಾಗವಹಿಸಿದ್ದರು.

ಮಕ್ಕಳಿಂದ ತೇಜಸ್ವಿಗೆ ಪ್ರೀತಿಯ ಪತ್ರ
ಪ್ರೀತಿಯ ಅಯ್ಯ, ತಾತ, ಅಜ್ಜ ಎಂದೆಲ್ಲಾ ತೇಜಸ್ವಿ ಅವರಿಗೆ ರಾಜ್ಯದ ಮೂಲೆಮೂಲೆಗಳಿಂದ ಮಕ್ಕಳು ಅವರಿಗೆ ಪತ್ರ ಬರೆದಿದ್ದು ವಿಶೇಷವಾಗಿತ್ತು. ಹಕ್ಕಿಯ ಬಗ್ಗೆ, ಚಿಟ್ಟೆಯ ಬಗ್ಗೆ ಪರಿಸರದ ಬಗ್ಗೆ ನಿಮ್ಮಿಂದ ತಿಳಿದುಕೊಂಡೆವು. ನಿಮ್ಮ ಆಸೆ ಮತ್ತು ಕನಸನ್ನು ನನಸು ಮಾಡಲು ನಾವೆಲ್ಲ ಕೈ ಜೋಡಿಸುತ್ತೇವೆ. ಪರಿಸರ ಉಳಿಸುತ್ತೇವೆ. ನೀವು ಇರಬೇಕಿತ್ತು ತಾತ. ಮಿಸ್ ಯೂ ಎಂದೆಲ್ಲಾ ಮಕ್ಕಳು ಮುದ್ದಾದ ಕೈಬರಹದಲ್ಲಿ ಬರೆದು ಪತ್ರ ಕಳಿಸಿದ್ದರು.

Leave a Reply

Your email address will not be published. Required fields are marked *

ಕ್ಷಮಿಸಿ ಹಕ್ಕು ಸೌಮ್ಯ ಕಾಯ್ದಿರಿಸಲಾಗಿದೆ
ಕ್ಷಮಿಸಿ ಹಕ್ಕು ಸೌಮ್ಯ ಕಾಯ್ದಿರಿಸಲಾಗಿದೆ
ಕ್ಷಮಿಸಿ ಹಕ್ಕು ಸೌಮ್ಯ ಕಾಯ್ದಿರಿಸಲಾಗಿದೆ
ಕ್ಷಮಿಸಿ ಹಕ್ಕು ಸೌಮ್ಯ ಕಾಯ್ದಿರಿಸಲಾಗಿದೆ
ಕ್ಷಮಿಸಿ ಹಕ್ಕು ಸೌಮ್ಯ ಕಾಯ್ದಿರಿಸಲಾಗಿದೆ
ಕ್ಷಮಿಸಿ ಹಕ್ಕು ಸೌಮ್ಯ ಕಾಯ್ದಿರಿಸಲಾಗಿದೆ
ಕ್ಷಮಿಸಿ ಹಕ್ಕು ಸೌಮ್ಯ ಕಾಯ್ದಿರಿಸಲಾಗಿದೆ