ಚಿಕ್ಕಮಗಳೂರು ಜಿಲ್ಲಾ ಪೊಲೀಸ್ ವಾರ್ಷಿಕ ಕ್ರೀಡಾಕೂಟ-2025 ರ ಸಮಾರೋಪ ಸಮಾರಂಭವು ಪೊಲೀಸ್ ಕವಾಯತು ಮೈದಾನದಲ್ಲಿ ಡಿಸೆಂಬರ್ 14 ರಂದು ನೆರವೇರಿತು. ಕಾರ್ಯಕ್ರಮದ ಮುಖ್ಯ ಅತಿಥಿಗಳಾಗಿ ಶ್ರೀಮತಿ. ಮೀನಾ ನಾಗರಾಜ್ ಸಿ ಎನ್, IAS, ಮಾನ್ಯ ಜಿಲ್ಲಾಧಿಕಾರಿಗಳು ಆಗಮಿಸಿದ್ದರು.

ಪೊಲೀಸ್ ವಾರ್ಷಿಕ ಕ್ರೀಡಾಕೂಟ-2025 ರ ಟೀಮ್ ಚಾಂಪಿಯನ್‌ಶಿಪ್ ಅನ್ನು ಡಿ.ಎ.ಆರ್. ತಂಡ ಮತ್ತು ವೈಯಕ್ತಿಕ ಚಾಂಪಿಯನ್‌ಶಿಪ್ ಅನ್ನು ಪುರುಷರಲ್ಲಿ ಪ್ರಸನ್ನ ಜಿ ಕೆ, ಎ.ಪಿ.ಸಿ., ಡಿ.ಎ.ಆರ್. ಮತ್ತು ಮಹಿಳೆಯರಲ್ಲಿ ಕು. ಆತ್ಮೀಯ,, ಕೊಪ್ಪ ಪೊಲೀಸ್ ಠಾಣೆ ರವರು ಪಡೆದುಕೊಂಡಿರುತ್ತಾರೆ.

100 ಮೀ. ಓಟ ಮತ್ತು Tug-of-War ಅಂತಿಮ ಸ್ಪರ್ಧೆಗಳು ಸೇರಿದಂತೆ ವಿವಿಧ ಮನೋರಂಜನಾ ಕ್ರೀಡೆಗಳನ್ನು ನಡೆಸಲಾಯಿತು. ಪಥ ಸಂಚಲನದ ನಂತರ ಕ್ರೀಡೆಗಳಲ್ಲಿ ವಿಜೇತರಿಗೆ ಬಹುಮಾನ ಮತ್ತು ತೀರ್ಪುಗಾರರಿಗೆ ನೆನಪಿನ ಕಾಣಿಕೆ ನೀಡಲಾಯಿತು. ಅಂತಿಮದಲ್ಲಿ ಪೊಲೀಸ್ ಬ್ಯಾಂಡ್ ನಿಂದ ರಿಟ್ರೀಟ್ ಮತ್ತು ರಾಷ್ಟ್ರಗೀತೆ ನುಡಿಸಲಾಯಿತು.
ಜಿಲ್ಲಾ ಪೊಲೀಸ್ ಅಧೀಕ್ಷಕ ಡಾ. ವಿಕ್ರಂ ಅಮಟೆ ಸೇರಿದಂತೆ ಜಿಲ್ಲೆಯ ಹಿರಿಯ ಪೊಲೀಸ್ ಅಧಿಕಾರಿಗಳು ಉಪಸ್ಥಿತರಿದ್ದರು.



