ಚಿಕ್ಕಮಗಳೂರಿನ ಕುವೆಂಪು ಕಲಾಮಂದಿರದಲ್ಲಿ ಡಿಸೆಂಬರ್ 20 ರ ಶನಿವಾರ ಸಂಜೆ 6 ಗಂಟೆಗೆ ನನ್ನ ತೇಜಸ್ವಿ ನಾಟಕ ಪ್ರದರ್ಶನ ನಡೆಯಲಿದೆ ಎಂದು ಕನ್ನಡ ಮತ್ತು ಸಂಸ್ಕøತಿ ಇಲಾಖೆಯ ಸಹಾಯಕ ನಿರ್ದೇಶಕರು ಹಾಗೂ ತೇಜಸ್ವಿ ಪ್ರತಿಷ್ಠಾನದ ಸದಸ್ಯ ಕಾರ್ಯದರ್ಶಿಗಳಾದ ಡಾ.ಸಿ ರಮೇಶ್ ತಿಳಿಸಿದ್ದಾರೆ.
ಈ ಬಗ್ಗೆ ಪತ್ರಿಕಾ ಹೇಳಿಕೆ ನೀಡಿ ಮಾತನಾಡಿದ ಅವರು, ಕೊಟ್ಟಿಗೆಹಾರದ ಕೆ.ಪಿ.ಪೂರ್ಣಚಂದ್ರ ತೇಜಸ್ವಿ ಪ್ರತಿಷ್ಠಾನದ ವತಿಯಿಂದ ರಾಜೇಶ್ವರಿ ತೇಜಸ್ವಿ ಅವರ ಕೃತಿ ಆಧಾರಿತ ನನ್ನ ತೇಜಸ್ವಿ ನಾಟಕ ಪ್ರದರ್ಶನ ನಡೆಯಲಿದ್ದು ಕಲಾಮಾಧ್ಯಮ ತಂಡ ಪ್ರಸ್ತುತ ಪಡಿಸಿರುವ ಈ ನಾಟಕವನ್ನು ಬಿ.ಎಂ.ಗಿರಿರಾಜ ಅವರು ನಿರ್ದೇಶಿದ್ದಾರೆ.
ಪೂರ್ಣಚಂದ್ರ ತೇಜಸ್ವಿ ಮತ್ತು ರಾಜೇಶ್ವರಿ ಅವರ ಪ್ರೇಮ, ಮದುವೆ ವೈವಾಹಿಕ ಜೀವನದ ವಿವರಗಳು ಈ ನಾಟಕದಲ್ಲಿ ದಟ್ಟೈಸಿವೆ. ಈಗಾಗಲೇ ಹಲವು ಪ್ರದರ್ಶನಗಳನ್ನು ಕಂಡು ಪ್ರೇಕ್ಷಕರಿಂದ ಉತ್ತಮ ಪ್ರತಿಕ್ರಿಯೆ ಪಡೆದುಕೊಂಡಿದೆ.
ಕುವೆಂಪು ಕಲಾಮಂದಿರದಲ್ಲಿ ಡಿಸೆಂಬರ್ 20 ರ ಸಂಜೆ 6 ಗಂಟೆಗೆ ನಾಟಕ ಪ್ರದರ್ಶನ ನಡೆಯಲಿದ್ದು ಟಿಕೆಟ್ ದರ 50 ರೂಗಳಿದ್ದು ಟಿಕೆಟ್‍ನ್ನು ಚಿಕ್ಕಮಗಳೂರಿನ ಕುವೆಂಪು ಕಲಾಮಂದಿರ, ಮೂಡಿಗೆರೆ ಪಟ್ಟಣದ ಪಶು ಆಸ್ಪತ್ರೆ ಕಚೇರಿ, ಕೊಟ್ಟಿಗೆಹಾರದ ಕೆ.ಪಿ.ಪೂರ್ಣಚಂದ್ರ ತೇಜಸ್ವಿ ಪ್ರತಿಷ್ಠಾನದಲ್ಲಿ ಪಡೆಯಬಹುದಾಗಿದೆ.
ಹೆಚ್ಚಿನ ಮಾಹಿತಿಗೆ 9663098873 ಈ ಸಂಖ್ಯೆಗೆ ಸಂರ್ಪಕಿಸಬಹುದು ಎಂದು ತಿಳಿಸಿದ್ದಾರೆ.




