may day

 

 

 

ಕೆ.ಕೆ.ಕೃಷ್ಣಪ್ಪ

 ಜಿಲ್ಲಾ ಅಧ್ಯಕ್ಷರು

 ಟ್ರೇಡ್ ಯೂನಿಯನ್ ಸೆಂಟರ್ ಆಫ್  ಇಂಡಿಯಾ(TUCI)

 ಚಿಕ್ಕಮಗಳೂರು

ಮೇ 1 ಜಗತ್ತಿನ 140ನೇ ಕಾರ್ಮಿಕ ದಿನಾಚರಣೆ. ಕಾರ್ಮಿಕರು ತಮ್ಮ ತ್ಯಾಗ,ಬಲಿದಾನದ ಮುಖಾಂತರ  ಜಗತ್ತಿನ ದುಡಿಯುವ ವರ್ಗಕ್ಕೆ ಹಕ್ಕುಗಳನ್ನು  ದೊರಕಿಸಿ  ಕೊಟ್ಟು ಜೊತೆಗೆ ಕಾರ್ಮಿಕರ ಶ್ರಮದ ಬೆವರು ಮತ್ತು  ಬಲಿದಾನದ ರಕ್ತ ಹರಿಸಿ ಕೆಂಬಾಟ ಹುಟ್ಟಿದ ದಿನ.

1880 ರಿಂದಲೂ  ಯೂರೋಪ್  ಖಂಡದಲ್ಲಿ ಅಲ್ಲಲ್ಲಿ ಸಣ್ಣ,ಪುಟ್ಟ,ಕಾರ್ಮಿಕರ ಹೋರಾಟ ನಡೆಯುತ್ತಲೇ ಇದ್ದವು. ಆದರೆ 1971ರಲ್ಲಿ ಪ್ರಾನ್ಸಿನಲ್ಲಿ ಕಾರ್ಮಿಕರು ದಂಗೆ ಎದ್ದು ರಾಜ್ಯಾಧಿಕಾರಿ ಹಿಡಿದರು. ಕಮ್ಯೂನ್ ರಚಿಸಿ ಸಂಸತ್ತಿನ ಮೇಲೆ ಒಡೆತನ ಘೋಷಿಸಿದರು. ಈ ಕ್ರಾಂತಿಯ ಪ್ರಪಂಚದ ತುಂಬಾ  ಪರಿಣಾಮ ಬೀರಿತು. ಅಮೆರಿಕ ದೇಶದಲ್ಲೂ ಕೂಡ ಹೆಚ್ಚು  ದಬ್ಬಾಳಿಕೆ, ದೌರ್ಜನ್ಯಗಳು ಕಾರ್ಮಿಕರ ಮೇಲೆ ನಡೆಯುತ್ತಲೇ ಇದ್ದವು. ಇಲ್ಲಿ ಕೆಲವೊಂದು ಸಣ್ಣಪುಟ್ಟ ಕಾರ್ಮಿಕ ಸಂಘಗಳು ಮುಷ್ಕರ ಚಳುವಳಿ ನಡೆಸುತ್ತಲಿದ್ದವು ಆದರೆ ಪ್ರಭುತ್ವ ಅದನ್ನು ಹತ್ತಿಕ್ಕುತಿದ್ದವು. 1886 ಮೇ 1ರಂದು   *12 ರಿಂದ 16 ಗಂಟೆ ಕೆಲಸದ ಅವಧಿ ಎಂಟು ಗಂಟೆಗೆ ಇಳಿಸುವುದು  *ಕಠೋರ ಕಾರ್ಮಿಕ ನಿಯಮಗಳು * ಕಾರ್ಮಿಕ ಹಕ್ಕುಗಳ ಉಲ್ಲಂಘನೆ, * ಭಯಾನಕ ಕೆಲಸ ,ಭದ್ರತೆ ಇಲ್ಲದಿರುವುದು,ಇದರಿಂದ ಕಾರ್ಮಿಕರು ಅನಾರೋಗ್ಯಕ್ಕೆ ತುತ್ತಾಗಿ ಸಾವಿಗಿಡಾಗುತ್ತಿದ್ದರು. ಈ ಮೇಲ್ಕಂಡ ಬೇಡಿಕೆಗಳನ್ನು  ಈಡೇರಿಸುವಂತೆ ಮೇ 1 ರಿಂದ ಶಾಂತಿಯುತ ಮುಷ್ಕರದಲ್ಲಿ  3 ರಿಂದ 5 ಲಕ್ಷಕ್ಕು ಹೆಚ್ಚು ಕಾರ್ಮಿಕರು ಭಾಗವಹಿಸಿ ಶಾಂತಿಯುತ ಪ್ರತಿಭಟನೆ ನಡೆಸುತ್ತಿದರು .

ಆದರೆ ಮೇ 4ರಂದು  ಬಾಂಬ್ ಸ್ಫೋಟಗೊಂಡು  ಪ್ರತಿಭಟನೆ ಹಿಂಸಾ ರೂಪಕ್ಕೆ ತಿರುಗಿ ಪೊಲೀಸರು ಗುಂಡಿನ  ಮಳೆಗೆಯ್ಯುತ್ತಾರೆ. ಇದಕ್ಕೆ ಸರ್ಕಾರದ ಜೊತೆಗೆ ಕೆಲವೊಂದು ಕಂಪನಿಗಳು  ಬೆಂಬಲಿಸುತ್ತದೆ. ಸಾವಿರಾರು ಕಾರ್ಮಿಕರು  ಜೀವ ಕಳೆದುಕೊಂಡರೆ, ಹಲವಾರು ಜನ ಗಾಯಗೊಳ್ಳುತ್ತಾರೆ. ಶಾಂತಿಯ ಸಂಕೇತವಾದ ಬಿಳಿ ಬಟ್ಟೆ ರಕ್ತದಲ್ಲಿ ಒದ್ದೆಯಾಗಿ  ಕೆಂಪಾದ ಆ ಬಟ್ಟೆಯನ್ನು ಎತ್ತಿ  ಇಂಕ್ವಿಲಾಬ್ ಘೋಷಣೆ ಕೂಗುತ್ತಾ ಜಗತ್ತಿನ ಕೆಂಬಾವುಟ ಹುಟ್ಟಿಗೆ   ಹಾಗೂ ಕಾರ್ಮಿಕರ ಹಕ್ಕುಗಳನ್ನು ಇಡೀ ಜಗತ್ತಿಗೆ  ತ್ಯಾಗ ಬಲಿದಾನದ ಮೂಲಕ ದೊರಕಿಸಿಕೊಟ್ಟಿತು.ಈ ಹೋರಾಟದಲ್ಲಿ  ಕಾರ್ಮಿಕ ಮುಖಂಡರಿಗೆ  ನಂತರ 4 ಜನ ಗಲ್ಲು ಶಿಕ್ಷೆ, ಎರಡು ಜನ  ಜೀವಾವಧಿ, ಒಬ್ಬರು ಜೈಲಿನಲ್ಲಿ ಮೃತಪಡುತ್ತಾರೆ. ಈ ದಿನವನ್ನು ಅಂತರಾಷ್ಟ್ರೀಯ ಮೇ ದಿನಾಚರಣೆಯನ್ನಾಗಿ ಇಡೀ ಪ್ರಪಂಚದಲ್ಲಿ ಆಚರಿಸುತ್ತಾರೆ.

1889 ರಲ್ಲಿ ಪ್ಯಾರಿಸ್ ನಲ್ಲಿ ಅಂತರರಾಷ್ಟ್ರೀಯ ಕಾಂಗ್ರೆಸ್ ನಲ್ಲಿ ಮೇ 1 ಅಂತರಾಷ್ಟ್ರೀಯ ಕಾರ್ಮಿಕ ದಿನಾಚರಣೆಯಾಗಿ ಆಚರಿಸಲು ತೀರ್ಮಾನಿಸಲಾಯಿತು. ಭಾರತದಲ್ಲಿ ಪ್ರಪ್ರಥಮವಾಗಿ  ಮುದ್ರಾಸಿನ” ಲೇಬರ್ ಕಿಶನ್ ಪಾರ್ಟಿ ಆಫ್ ಹಿಂದುಸ್ತಾನ್ ” ವತಿಯಿಂದ ಕಾಮ್ರೆಡ್ ಸಿಂಗರ್ ವೆಲಾರ್ ನೇತೃತ್ವದಲ್ಲಿ ಆಚರಿಸಲಾಯಿತು. ಪ್ರಪಂಚದಾದ್ಯಂತ ದುಡಿಯುವ ಅವಧಿ ಎಂಟು ಗಂಟೆಗೆ ನಿಗದಿಪಡಿಸಲಾಯಿತು. ಕಾರ್ಮಿಕರ ಹಕ್ಕುಗಳನ್ನು ಎತ್ತಿ ಹಿಡಿಯಲಾಯಿತು.

ಭಾರತದಲ್ಲಿ  1860ರಿಂದ  ಹೋರಾಟ ಪ್ರಾರಂಭವಾದವು ಪರಿಣಾಮವಾಗಿ 1875 ರಲ್ಲಿ ಕಾರ್ಖಾನೆ ಆಯೋಗ ರಚನೆಯಾಯಿತು. 1877 ರಲ್ಲಿ ನಾಗಪುರ 1882 ರಲ್ಲಿ ಬಾಂಬೆ ಜವಳಿ ಕಾರ್ಮಿಕರ ಚಳುವಳಿ ಪ್ರಮುಖವಾದವು. 1919 ರಿಂದ 1921ರವರೆಗೆ ಹಲವಾರು ಚಳುವಳಿಗಳು ನಡೆದವು. 1922ರ ಚೌರ ಚೌರಿ ದಂಗೆ ನಡೆದು ಕಾರ್ಮಿಕ ಪರಿಹಾರ ಕಾಯ್ದೆ ಜಾರಿಯಾಯಿತು.  1924ರಲ್ಲಿ  ಕಮ್ಯುನಿಸ್ಟ್ ಪಕ್ಷ   ಸ್ಥಾಪನೆಯಾಯಿತು. 1926ರಲ್ಲಿ ಭಗತ್ ಸಿಂಗ್ ನವ ಭಾರತ ಸೇನೆ  ಅಸ್ತಿತ್ವಕ್ಕೆ ಬಂತು. 1926ರಲ್ಲಿ ಟ್ರೇಡ್ ಯೂನಿಯನ್ ಕಾಯ್ದೆ ಜಾರಿಗೆ ಬಂತು. ಈ  ಮಧ್ಯೆ ಹಲವಾರು ಕಾರ್ಮಿಕರ ಕಾಯ್ದೆ ಕಾನೂನುಗಳು ಸುಧಾರಣೆಗೊಂಡವು, 1947ರ ಸ್ವಾತಂತ್ರ್ಯದ ನಂತರ ಭಾರತ ಸಂವಿಧಾನದಲ್ಲಿ ಕಾರ್ಮಿಕರ ಪರವಾಗಿ 44 ಕಾರ್ಮಿಕ ಕಾಯ್ದೆಗಳು ಹಕ್ಕುಗಳಾಗಿ ರೂಪಗೊಂಡವು. ಡಾ. ಬಿ ಆರ್ ಅಂಬೇಡ್ಕರ್ ರವರು ಮೇಡೇ ಯನ್ನು ಕಾರ್ಮಿಕ ದಿನಾಚರಣೆಯನ್ನಾಗಿ 12 ಗಂಟೆ ದುಡಿಮೆ ಅವಧಿಯನ್ನು 8 ಗಂಟೆಗೆ OT ,ಡಬಲ್ ಪೇಮೆಂಟ್, ಇಸಿಎಫ್,ಇಎಸ್ ಐ ರಜೆಯನ್ನು ಜಾರಿಗೆ ತಂದರು. 1991ರ ಹೊಸ  ಆರ್ಥಿಕ  ನೀತಿ ಜಾರಿಯಾದ ನಂತರ  ಸ್ವದೇಶ ಮತ್ತು ವಿದೇಶದಿಂದ ಹಲವಾರು ಕಾರ್ಪೊರೇಟ್ ಕಂಪನಿಗಳು ಮತ್ತು ಬಹುರಾಷ್ಟ್ರೀಯ ಬಂಡವಾಳ ಹೂಡಿಕೆದಾರರ ಪರಿಣಾಮ ಕಾರ್ಮಿಕರ ಹಕ್ಕುಗಳು ನಾಶವಾಗುತ್ತಾ ಬಂದವು. 2014ರಲ್ಲಿ ಅಧಿಕಾರಿಕೆ ಬಂದ ಮೋದಿ ನೇತೃತ್ವದ ಎನ್‌ಡಿಎ ಸರ್ಕಾರ ಕಾರ್ಮಿಕರ ಮೇಲೆ ಇನ್ನಷ್ಟು  ಕಠಿಣ ನಿಯಮಗಳನ್ನು ಜಾರಿ ತಂದವು. ಅಭಿವೃದ್ಧಿ ನೆಪದಲ್ಲಿ  29 ಕಾರ್ಮಿಕರ ಕಾಯ್ದೆ ರದ್ದು ಮಾಡಿ 4 ಸಂಹಿತೆ  ಜಾರಿ ತರಲು ಮುಂದಾಯಿತು. ಕಾರ್ಮಿಕರ ಪ್ರತಿರೋಧದ ನಡುವೆಯೂ  2025 ನವಂಬರ್ ತಿಂಗಳಿನಲ್ಲಿ  ಅನುಷ್ಠಾನಗೊಳಿಸಿತು. 2026  ಏಪ್ರಿಲ್ ಕೊನೆಯಲ್ಲಿ  ಜಾರಿಯಾಗುವ ನಿರೀಕ್ಷೆಯಿದೆ. ಜಾರಿಯಾದರೆ ಹೊಸ ನಿಯಮದಲ್ಲಿ ಕೆಲಸದ ಅವಧಿ 12 ಗಂಟೆವರೆಗೆ,ವೇತನ,ಸಾಮಾಜಿಕ ಭದ್ರತೆ, ರಜೆ ನಿಯಮಗಳು ಭಾರಿ ಬದಲಾವಣೆ ಜೊತೆಗೆ ಕಾರ್ಪೊರೇಟ್ ಮಾಲೀಕರ ಪರವಾದ  ನಿಯಮ ಜಾರಿಯಾಗಬಹುದು.

ಕರ್ನಾಟಕದ ಮಲೆನಾಡಿನ ಮೂರು ಜಿಲ್ಲೆಗಳು ಸಂಪತ್ಪರಿತವಾದವು, ಇಲ್ಲಿನ ಮುಖ್ಯ ಬೆಳೆ ಕಾಫಿ. 5.70 ಲಕ್ಷಕ್ಕು ಹೆಚ್ಚು ಕಾರ್ಮಿಕರಿದ್ದಾರೆ. ಇಲ್ಲಿನ ಕಾರ್ಮಿಕರ ಸಂವಿಧಾನ ” 1951ರ ಪ್ಲಾಂಟೇಶನ್ ಕಾಯ್ದೆ ” ಮತ್ತು 1956 ನಿಯಮ ಸಂಪೂರ್ಣ ಜಾರಿಯಾಗುತ್ತಿಲ್ಲ. 85 % ಅಸಂಘಟಿತ ಕಾರ್ಮಿಕರು. ಕಾರ್ಮಿಕರ ಮೂಲಭೂತ ಹಕ್ಕುಗಳಾದ ಕಾರ್ಮಿಕ  ಸಂಘ ಕಟ್ಟುವುದನು ಬಿಡುತ್ತಿಲ್ಲ. 1948ರ ಕಾಯ್ದೆ ಪ್ರಕಾರ ಸಿಗಬೇಕಾದ ಕನಿಷ್ಠ ವೇತನ ಕೂಡ ಪಾವತಿಯಾಗುತ್ತಿಲ್ಲ ಕೆಲವೊಂದು ಗ್ರಾಮದಲ್ಲಿ ಜೀತ ಪದ್ಧತಿ, ಇನ್ನೂ ಕಾಣಬಹುದು.

ಈ ದೇಶದ ಸಕಲ ಸಂಪತ್ತನ್ನು ಸೃಷ್ಟಿಸಿದವರು ದುಡಿಯುವ ವರ್ಗ ಮತ್ತು ಗಮನಿತ ಜನಾಂಗ ಎಂಬ ಕಡು ಸತ್ಯಕ್ಕೆ ಈಗ ದೊಡ್ಡ ಸವಾಲು ಎದುರಾಗಿದೆ. ನಮ್ಮ ನೆಲ, ಜಲ, ಪ್ರಕೃತಿ ಸಂಪತ್ತನ್ನು  ದೋಚುವವರನ್ನೇ  ದೇಶಪ್ರೇಮಿಗಳೆಂದು ಬಿಂಬಿಸುವ ಕೆಟ್ಟ ದಿನದಲ್ಲಿದ್ದೇವೆ. 85% ಗುತ್ತಿಗೆ ಕಾರ್ಮಿಕರಿದ್ದಾರೆ. ಇಂತಹ ಸಂದರ್ಭದಲ್ಲಿ ದುಡಿಯುವ ವರ್ಗ ಹಾಗೂ ದಮನೀತ ಜನರು ಆತ್ಮ ವಿಮರ್ಶೆ ಮಾಡಿಕೊಳ್ಳಬೇಕಾಗಿದೆ. ಚಿಕಾಗೋ ಅಮರ ವೀರಾರು ಮತ್ತು ದೇಶದ ಸ್ವತಂತ್ರ  ಚಳುವಳಿಯಲ್ಲಿ ದುಡಿಯುವ ವರ್ಗ ಮಾಡಿದ ತ್ಯಾಗ ಬಲಿದಾನವನ್ನು ನೆನಪಿಸಿಕೊಳ್ಳಬೇಕಾಗಿದೆ. ಹಾಗಾಗಿ ಇತಿಹಾಸದಿಂದ ಪಾಠ ಕಲಿಯಬೇಕಾಗಿದೆ. ದುಡಿಯುವ ವರ್ಗದ ನಡುವೆ ಜಾಗೃತಿ ಮೂಡಿಸಬೇಕು. 140 ವರ್ಷಗಳ ಕಾರ್ಮಿಕ ಚಳುವಳಿಯ ನಂತರವೂ ಕಾರ್ಮಿಕರ ಸ್ಥಿತಿ ಬದಲಾಗುವ ಬದಲು ಬಲಿಯಾಗುತ್ತ ಸಾಗಿವೆ ಏಕೆ .? ಎಂದು ನಮ್ಮನ್ನೇ ನಾವು ಪ್ರಶ್ನಿಸಿಕೊಳ್ಳಬೇಕಾಗಿದೆ.

“ತ್ಯಾಗ ಬಲಿದಾನದ ಮೂಲಕ ಹುತಾತ್ಮರಾದ ಎಲ್ಲಾ ಸಂಗಾತಿಗಳಿಗೂ  ಕೆಂಪು ವಂದನೆಗಳು ”

ಕೆ.ಕೆ.ಕೃಷ್ಣಪ್ಪ

 ಜಿಲ್ಲಾ ಅಧ್ಯಕ್ಷರು

 ಟ್ರೇಡ್ ಯೂನಿಯನ್ ಸೆಂಟರ್ ಆಫ್  ಇಂಡಿಯಾ(TUCI)

 ಚಿಕ್ಕಮಗಳೂರು

Leave a Reply

Your email address will not be published. Required fields are marked *

ಕ್ಷಮಿಸಿ ಹಕ್ಕು ಸೌಮ್ಯ ಕಾಯ್ದಿರಿಸಲಾಗಿದೆ
ಕ್ಷಮಿಸಿ ಹಕ್ಕು ಸೌಮ್ಯ ಕಾಯ್ದಿರಿಸಲಾಗಿದೆ
ಕ್ಷಮಿಸಿ ಹಕ್ಕು ಸೌಮ್ಯ ಕಾಯ್ದಿರಿಸಲಾಗಿದೆ
ಕ್ಷಮಿಸಿ ಹಕ್ಕು ಸೌಮ್ಯ ಕಾಯ್ದಿರಿಸಲಾಗಿದೆ
ಕ್ಷಮಿಸಿ ಹಕ್ಕು ಸೌಮ್ಯ ಕಾಯ್ದಿರಿಸಲಾಗಿದೆ
ಕ್ಷಮಿಸಿ ಹಕ್ಕು ಸೌಮ್ಯ ಕಾಯ್ದಿರಿಸಲಾಗಿದೆ
ಕ್ಷಮಿಸಿ ಹಕ್ಕು ಸೌಮ್ಯ ಕಾಯ್ದಿರಿಸಲಾಗಿದೆ