ತೀರಾ ಅಳಿವಿನಂಚಿನಲ್ಲಿರುವ ಅಪರೂಪದ ಪ್ರಾಣಿ 3 ಕೃಷ್ಣಮೃಗಗಳನ್ನು ಹತ್ಯೆ ಮಾಡಿರುವ ಘಟನೆ ಚಿಕ್ಕಮಗಳೂರು ಜಿಲ್ಲೆಯಲ್ಲಿ ನಡೆದಿದೆ. ರಾಜ್ಯದಲ್ಲಿ ಹಾವೇರಿ-ಚಿಕ್ಕಮಗಳೂರಿನಲ್ಲಿ ಮಾತ್ರ ಕಾಣಸಿಗೋ ಕೃಷ್ಣಮೃಗ
ಕಡೂರು ತಾಲೂಕಿನ ಬಾಸೂರು ಕಾವಲ್ ನಲ್ಲಿ ಘಟನೆ, ಬಾಸೂರು ಕೃಷ್ಣಮೃಗಗಳ ಸಂರಕ್ಷಿತ ಪ್ರದೇಶದ ಪಕ್ಕದ ಜಮೀನಿನಲ್ಲಿ ಕೃತ್ಯ.
ಅತ್ಯಾಧುನಿಕ ಶಸ್ತ್ರಾಸ್ತ್ರಗಳಿಂದ ಶೂಟ್ ಮಾಡಿರೋ ಬೇಟೆಗಾರರು, 2 ಹೆಣ್ಣು ಹಾಗೂ 1 ಗಂಡು ಕೃಷ್ಣಮೃಗಗಳ ಸಾವು, ಮೂರು ಕೃಷ್ಣಮೃಗಗಳಿಗೂ ಅಂದಾಜು 2 ವರ್ಷ ಪ್ರಾಯ, ಸ್ಥಳಕ್ಕೆ ಅರಣ್ಯ ಅಧಿಕಾರಿಗಳ ಭೇಟಿ, ಪರಿಶೀಲನೆ ನಡೆಸಿದ್ದಾರೆ.

ಪ್ರಕರಣ ಮುಚ್ಚಿ ಹಾಕಲು ಅರಣ್ಯ ಇಲಾಖೆ ಯತ್ನದ ಆರೋಪ, ಅರಣ್ಯಾಧಿಕಾರಿಗಳು ಪ್ರಕರಣ ಮುಚ್ಚಿ ಹಾಕಲು ಯತ್ನಿಸುತ್ತಿದ್ದಾರೆ ಪರಿಸರವಾದಿಗಳ ಆರೋಪ, ಪ್ರಕರಣ ಮುಚ್ಚಿ ಹಾಕಲು ಸಂಜೆಯೇ ಕೃಷ್ಣಮೃಗಗಳನ್ನ ಅಂತ್ಯ ಸಂಸ್ಕಾರ ಮಾಡಿರೋ ಆರೋಪ, ಸಂಜೆ ಬಳಿಕ ಅವಸರದಲ್ಲಿ ಅಂತ್ಯ ಸಂಸ್ಕಾರ ಕಾಡುವ ಆತುರವೆನಿತ್ತು, ಸಂಜೆ ಬಳಿಕ ಪ್ರಾಣಿಗಳ ಶವಪರೀಕ್ಷೆ-ಅಂತ್ಯ ಸಂಸ್ಕಾರ ಮಾಡುವಂತಿಲ್ಲ, ಅಪರಾಧಿಗಳ ರಕ್ಷಣೆಗೆ ಆತುರದಲ್ಲಿ ಅಂತ್ಯ ಸಂಸ್ಕಾರ ಮಾಡಿದ್ದಾರೆಂದು ಆರೋಪ, ಬೀರೂರು ವಲಯ ಅರಣ್ಯ ಅಧಿಕಾರಿಗಳ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.



