ಮೂಡಿಗೆರೆ ತಾಲ್ಲೂಕು ಬಣಕಲ್ ಶ್ರೀ ವಿದ್ಯಾಭಾರತಿ ವಿದ್ಯಾಸಂಸ್ಥೆಯ 39ನೇ ಶಾಲಾ ವಾರ್ಷಿಕೋತ್ಸವ ಸಮಾರಂಭ ಶನಿವಾರ ವಿಜೃಂಭಣೆಯಿಂದ ನಡೆಯಿತು.
ಮೂಡಿಗೆರೆ ಟಿ.ಎ.ಪಿ.ಸಿ.ಎಂ.ಎಸ್ ನಿರ್ದೇಶಕ ಪಿ.ಜಿ ಅನುಕುಮಾರ್(ಪುಟ್ಟಣ್ಣ) ಮಾತನಾಡಿ ‘ಸಮಾಜದಲ್ಲಿ ಕಂಡುಬರುವ ಸಮಸ್ಯೆಗಳ ನಿವಾರಣೆಗೆ ಸ್ಪಂದನೆ ಸಿಗಬೇಕಾದರೆ ಅದು ಶಿಕ್ಷಣದಿಂದ ಮಾತ್ರ ಸಾಧ್ಯ. ಶಿಕ್ಷಣ ನೀಡುವ ಪ್ರತಿಯೊಂದು ವಿದ್ಯಾ ಸಂಸ್ಥೆ ತನ್ನ ಜವಾಬ್ದಾರಿಯನ್ನು ಅರಿತು ಮಕ್ಕಳಿಗೆ ಶಿಕ್ಷಣದ ಜೊತೆಗೆ ಸಾಮಾಜಿಕ ಅರಿವನ್ನು ಮೂಡಿಸುವ ಪ್ರಯತ್ನ ಮಾಡಬೇಕಿದೆ. ವಿದ್ಯಾ ಭಾರತಿ ವಿದ್ಯಾಸಂಸ್ಥೆಯು ಇಂತಹ ಕಾರ್ಯದಲ್ಲಿ ಒಂದು ಮಾದರಿ ವಿದ್ಯಾಸಂಸ್ಥೆಯಾಗಿದೆ’ಎಂದು ಶ್ಲಾಘಿಸಿದರು.
ಸಹಕಾರ ಭಾರತಿ ಅಧ್ಯಕ್ಷ ಕೆ.ಟಿ ಸತೀಶ್ ಮಾತನಾಡಿ ‘ವಿದ್ಯಾರ್ಥಿಗಳು ತಮ್ಮ ವಿದ್ಯಾರ್ಥಿ ಜೀವನದಲ್ಲಿ ದೊಡ್ಡ ಕನಸಿನೊಂದಿಗೆ ಸಾಗಬೇಕು. ಜೊತೆಗೆ ಅದರ ಸಾಧನೆಗೆ ಪರಿಪೂರ್ಣವಾದ ಯೋಜನೆಗಳನ್ನು ರೂಪಿಸಿಕೊಂಡರೆ ಜೀವನದಲ್ಲಿ ಉನ್ನತ ಮಟ್ಟವನ್ನು ತಲುಪಬಹುದು’ ಎಂದರು.

ಸಮಾರಂಭದಲ್ಲಿ ಬಣಕಲ್ ಗ್ರಾಮಪಂಚಾಯಿತಿ ಅಧ್ಯಕ್ಷೆ ಝರೀನಾ ಧ್ವಜಾರೋಹಣ ನೆರವೇರಿಸಿದರು. ಕಾಫಿಬೆಳೆಗಾರರಾದ ಬಿ.ಎನ್. ಶಮಂತ್ ಬಣಕಲ್,. ಬಿ.ಎಸ್.ಮೋಹನ್ ಬಾಳೂರು,ಎಸ್.ಎನ್.ಸಂತೋಷ್ ಬಿಡಿಕೆ,.ಶಾಲೆಯಲ್ಲಿ ಸಾಧನೆಗೈದ ಹಳೆಯ ವಿದ್ಯಾರ್ಥಿಗಳಾದ ಇಂದ್ರಜಿತ್,.ಬಿ.ಜಿ ಕುಮಾರಿ, ಸ್ಪಂದನ ಎಂ.ಜೆ ಅತಿಥಿಗಳಾಗಿ ಭಾಗವಹಿಸಿದ್ದರು.
ಸಮಾರಂಭದ ಅಧ್ಯಕ್ಷತೆಯನ್ನು ಶಾಲಾ ಆಡಳಿತ ಮಂಡಳಿಯ ಅಧ್ಯಕ್ಷ ಬಿ.ಶಿವರಾಮ ಶೆಟ್ಟಿ ವಹಿಸಿದ್ದರು.
ಸಮಾರಂಭದಲ್ಲಿ ಸಂಸ್ಥೆಯ ಉಪಾಧ್ಯಕ್ಷ ಬಿ.ಈ.ಸುಬ್ರಾಯಗೌಡ, ಕಾರ್ಯದರ್ಶಿ ಬಿ.ಪಿ.ಲಿಂಗಪ್ಪ, ಕೋಶಾಧಿಕಾರಿ ಯು.ಪಿ.ರಾಮಚಂದ್ರ ಹೊಳ್ಳ,ನಿರ್ದೇಶಕರಾದ ಬಿ.ರಮೇಶ್, ಬಿ.ಬಿ.ಮಂಜುನಾಥ್ ಮತ್ತು ಸ್ಥಳೀಯ ಮುಖಂಡರು, ವಿವಿಧ ಶಾಲೆಗಳ ಅಧ್ಯಕ್ಷರು ,ಮುಖ್ಯ ಶಿಕ್ಷಕರು, ಶಾಲಾ ಪೋಷಕರು ಉಪಸ್ಥಿತರಿದ್ದರು. .ಪ್ರೌಢಶಾಲಾ ಮುಖ್ಯ ಶಿಕ್ಷಕಿ ಮಾಲತಿ ಟಿ.ಆರ್ ಶಾಲಾ ವಾರ್ಷಿಕ ವರದಿಯನ್ನು ಮಂಡಿಸಿದರು.ಪ್ರಾಥಮಿಕ ಶಾಲಾ ಮುಖ್ಯ ಶಿಕ್ಷಕ ನಾಗರಾಜು ಸರ್ವರನ್ನು ಸ್ವಾಗತಿಸಿದರು.ಶಾಲಾ ಉಪಮುಖ್ಯ ಶಿಕ್ಷಕ ಕಾರ್ಯಕ್ರಮವನ್ನು ನಿರೂಪಿಸಿದರು. ಸಹಶಿಕ್ಷಕಿ ಕುಮಾರಿ ಪದ್ಮಶ್ರೀ ಸರ್ವರನ್ನು ವಂದಿಸಿದರು.
ವಿಜೃಂಭಣೆಯಿಂದ ನಡೆದ ಸಮಾರಂಭದಲ್ಲಿ ಶಾಲಾ ಶಿಕ್ಷಕರಾದ ಕುಸುಮ ಎಸ್ ಶೆಟ್ಟಿ ,ಭಕ್ತೇಶ್ ,. ಶೇಖರಪ್ಪ, ವಿಜಯೇಂದ್ರ,. ಶ್ವೇತಾ, ಸಂಗೀತ, ಕನ್ನಿಕಾ, ಸಂಗೀತಾ, ಲೋಕೇಶ್, ಪ್ರತಾಪ್., ಲಿಂಗರಾಜು, ಕಮಲಮ್ಮ, ಅಶ್ವಿತಾ, ಪೂಜಾ,. ಆಶಾ, ಅನುಷ, ಆರೋಗ್ಯವಾಣಿ, ಪ್ರೀತಿ.,ಚಂದನ,ಸುಶ್ಮಿತಾ,ನೃತ್ಯ ಶಿಕ್ಷಕ ಕಿಶೋರ್, ಶಾಲಾ ಬೋಧಕೇತರ ಸಿಬ್ಬಂದಿ.ಅಡುಗೆ ಸಿಬ್ಬಂದಿ,ಹಳೇ ವಿದ್ಯಾರ್ಥಿಗಳು ಉಪಸ್ಥಿತರಿದ್ದರು.
ವೇದಿಕೆ ಕಾರ್ಯಕ್ರಮದ ನಂತರ ಸಾಂಸ್ಕೃತಿಕ ಕಾರ್ಯಕ್ರಮಗಳು ನೆರೆದವರನ್ನು ರಂಜಿಸಿದವು.




