prasanth

 

 

ಚಿಕ್ಕಮಗಳೂರು ತಾಲೂಕು ಮಾಣಿಮಕ್ಕಿ ಗ್ರಾಮದಲ್ಲಿ ಇತ್ತೀಚಿಗೆ ಶ್ರೀ ಕ್ಷೇತ್ರ ಧರ್ಮಸ್ಥಳ ಜ್ಞಾನವಿಕಾಸ ಕೇಂದ್ರದ ವಾರ್ಷಿಕೋತ್ಸವ ಕಾರ್ಯಕ್ರಮ ಅದ್ದೂರಿಯಾಗಿ ನಡೆಯಿತು.

ಕಾರ್ಯಕ್ರಮವನ್ನು ಉದ್ಘಾಟಿಸಿದ ಶ್ರೀ ಧರ್ಮಸ್ಥಳ ಮಂಜುನಾಥೇಶ್ವರ ಧರ್ಮೋಥ್ಥಾನ ಟ್ರಸ್ಟಿನ, ಟ್ರಸ್ಟಿಯಾದ ಪ್ರಶಾಂತ್ ಚಿಪ್ರಗುತ್ತಿ ಮಾತನಾಡುತ್ತಾ ಜ್ಞಾನದ ಕೊರತೆಯಿಂದಾಗಿ ಸಮಾಜದಲ್ಲಿ ಜನರು ಭಯದಲ್ಲಿ ಬದುಕುತ್ತಿದ್ದಾರೆ, ಎಲ್ಲಿ ಅಜ್ಞಾನವನ್ನು ಹೋಗಿಸಿ ಜ್ಞಾನವನ್ನು ನೀಡಲಾಗುತ್ತದೆ ಅಲ್ಲಿ ಭಯ ಹೊರಟು ಹೋಗುತ್ತದೆ. ಜ್ಞಾನದಿಂದ ಅಭಯ ಅಜ್ಞಾನದಿಂದ ಭಯ ಎಂಬ ಶ್ರೀ ಕೃಷ್ಣನ ಭಗವದ್ಗೀತೆಯ ನುಡಿಯನ್ನು ಕಾರ್ಯಗತ ಮಾಡಿ  ಸಮಾಜದಲ್ಲಿ ಜ್ಞಾನವನ್ನು ಹೆಚ್ಚಾಗಿ ನೀಡುತ್ತಾ ಬರುವ ಉದ್ದೇಶದಿಂದ ಪೂಜ್ಯ ಮಾತೃಶ್ರೀ ಹೇಮಾವತಿ ವೀರೇಂದ್ರ ಹೆಗಡೆಯವರು ಜ್ಞಾನ ವಿಕಾಸದ ಕೇಂದ್ರದ ಮುಖಾಂತರ ಮಹಿಳೆಯರಲ್ಲಿ ಹೆಚ್ಚೆಚ್ಚು ಎಲ್ಲಾ ಕ್ಷೇತ್ರದಲ್ಲೂ ಜ್ಞಾನವನ್ನು ನೀಡುತ್ತಾ ಒಂದು ಕುಟುಂಬ ಹಾಗೂ ಸಮಾಜವನ್ನು ಸುಂದರವಾಗಿ ಕಟ್ಟುವಂತ ಕೆಲಸವನ್ನು ಮಾಡುತ್ತಿದ್ದಾರೆ. ಮಹಿಳೆಯರು ಜ್ಞಾನವಂತರಾದರೆ ಒಂದು ಒಳ್ಳೆಯ ಸಂಸ್ಕಾರವಂತ ಕುಟುಂಬವನ್ನು ಕಟ್ಟಲು ಸಾಧ್ಯವಾಗುತ್ತದೆ ಎಂದು ಅಭಿಪ್ರಾಯಪಟ್ಟರು.

ಕಾರ್ಯಕ್ರಮದಲ್ಲಿ ಶಾಲಾ ಪ್ರಾಂಶುಪಾಲರಾದ ಕೃಷ್ಣಮೂರ್ತಿ ರವರು ಯೋಜನೆಯ ಕಾರ್ಯಕ್ರಮದ ಬಗ್ಗೆ ಮೆಚ್ಚುಗೆಯನ್ನು ವ್ಯಕ್ತಪಡಿಸಿದರು.

ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಹಿಸಿದ ಜ್ಞಾನವಿಕಾಸ ಕೇಂದ್ರದ ಅಧ್ಯಕ್ಷರಾದ ದೇವಿರಮ್ಮ ರವರು ಮಹಿಳೆಯರ ಎಲ್ಲಾ ರೀತಿಯ ಸರ್ವೋತ್ತಮ ಅಭಿವೃದ್ಧಿಗೆ ಕಾರಣಕರ್ತರಾದ ಶ್ರೀ ವೀರೇಂದ್ರ ಹೆಗ್ಗಡೆಯವರಿಗೆ ಅಭಿನಂದನೆ ಸಲ್ಲಿಸಿದರು. ಮೇಲ್ವಿಚಾರಕರಾದ ವಿನೋದ ಹಾಗೂ ಜ್ಞಾನವಿಕಾಸ ಕೇಂದ್ರದ ಸಮನ್ವಯ ಅಧಿಕಾರಿಯದ ಶ್ರೀಮತಿ ಭಾರತಿ ಉಪಸ್ಥಿತರಿದ್ದರು.ಕೇಂದ್ರದ ಸದಸ್ಯರಾದ ಆಶಾ ಅವರು ನಿರೂಪಣೆ ಮಾಡಿದರು.

Leave a Reply

Your email address will not be published. Required fields are marked *

ಕ್ಷಮಿಸಿ ಹಕ್ಕು ಸೌಮ್ಯ ಕಾಯ್ದಿರಿಸಲಾಗಿದೆ
ಕ್ಷಮಿಸಿ ಹಕ್ಕು ಸೌಮ್ಯ ಕಾಯ್ದಿರಿಸಲಾಗಿದೆ
ಕ್ಷಮಿಸಿ ಹಕ್ಕು ಸೌಮ್ಯ ಕಾಯ್ದಿರಿಸಲಾಗಿದೆ
ಕ್ಷಮಿಸಿ ಹಕ್ಕು ಸೌಮ್ಯ ಕಾಯ್ದಿರಿಸಲಾಗಿದೆ
ಕ್ಷಮಿಸಿ ಹಕ್ಕು ಸೌಮ್ಯ ಕಾಯ್ದಿರಿಸಲಾಗಿದೆ
ಕ್ಷಮಿಸಿ ಹಕ್ಕು ಸೌಮ್ಯ ಕಾಯ್ದಿರಿಸಲಾಗಿದೆ
ಕ್ಷಮಿಸಿ ಹಕ್ಕು ಸೌಮ್ಯ ಕಾಯ್ದಿರಿಸಲಾಗಿದೆ