pulpur

 

 

ಆಟವಾಡುತ್ತಿದ್ದ ಸಂದರ್ಭದಲ್ಲಿ ಆಕಸ್ಮಿಕವಾಗಿ ಕಾಫಿ ಪಲ್ಪರ್ ಮಾಡುವ ತೊಟ್ಟಿಗೆ ಬಿದ್ದು ಬಾಲಕ ನೋರ್ವ ಮೃತಪಟ್ಟಿ ರುವ ಹೃದಯ ವಿದ್ರಾ ವಕ ಘಟನೆ ಸಕಲೇಶಪುರ ತಾಲ್ಲೂಕಿನ ಹಾಲೇ ಬೇಲೂರು ಗ್ರಾಮದಲ್ಲಿ ಬುಧವಾರ ನಡೆದಿದೆ. ಗ್ರಾಮದ ನಿವಾಸಿಗಳಾದ ತಿಲಕ್ ಮತ್ತು ವಂದಿತಾ ದಂಪತಿಯ ಒಬ್ಬನೇ ಮಗ ಆರು ವರ್ಷದ ಮೌರ್ಯ ಮೃತಪಟ್ಟ ದುರ್ದೈವಿ.

ಬಾಲಕ ಮಧ್ಯಾಹ್ನ ತನ್ನ ಮನೆಯ ಆವರಣದಲ್ಲಿ ಆಟವಾಡುತ್ತಿದ್ದ ವೇಳೆ ಪಕ್ಕದಲ್ಲೇ ಇದ್ದ ಕಾಫಿ ಪಲ್ಸರ್ ಮಾಡುವ (ಕಾಫಿ ಹಣ್ಣು ಬಿಡಿಸುವ) ತೊಟ್ಟಿಯ ಬಳಿ ಹೋಗಿದ್ದಾನೆ. ಆಟ ವಾಡುತ್ತಾ ಆಕಸ್ಮಿಕವಾಗಿ ನೀರಿನಿಂದ ತುಂಬಿದ್ದ ತೊಟ್ಟಿಯೊಳಗೆ ಬಿದ್ದಿದ್ದು, ಹೊರಬರಲಾಗದೆ ಉಸಿರುಗಟ್ಟಿ ಸ್ಥಳದಲ್ಲೇ ಮೃತಪಟ್ಟಿದ್ದಾನೆ ಎಂದು ಹೇಳಲಾಗಿದೆ.

ಬಾಲಕ ಕಾಣದಿದ್ದಾಗ ಪೋಷಕರು ಹುಡುಕಾಟ ನಡೆಸಿದ್ದು, ತೊಟ್ಟಿಯಲ್ಲಿ ಬಾಲಕನ ಶವ ಪತ್ತೆಯಾಗಿದೆ. ದಂಪತಿಯ ಏಕೈಕ ಪುತ್ರನಾಗಿದ್ದ ಮೌರ್ಯನ ಅಕಾಲಿಕ ಸಾವು ಗ್ರಾಮದಲ್ಲಿ ಶೋಕದ ಛಾಯೆ ಮೂಡಿಸಿದೆ. ವಿಷಯ ತಿಳಿಯುತ್ತಿದ್ದಂತೆಯೇ ಸಕಲೇಶಪುರ ಪಟ್ಟಣ ಠಾಣೆ ಪೊಲೀಸರು ಸ್ಥಳಕ್ಕೆ ತೆರಳಿ ಪರಿಶೀಲನೆ ನಡೆಸಿ ಪ್ರಕರಣ ದಾಖಲಿಸಿದ್ದಾರೆ.

Leave a Reply

Your email address will not be published. Required fields are marked *

ಕ್ಷಮಿಸಿ ಹಕ್ಕು ಸೌಮ್ಯ ಕಾಯ್ದಿರಿಸಲಾಗಿದೆ
ಕ್ಷಮಿಸಿ ಹಕ್ಕು ಸೌಮ್ಯ ಕಾಯ್ದಿರಿಸಲಾಗಿದೆ
ಕ್ಷಮಿಸಿ ಹಕ್ಕು ಸೌಮ್ಯ ಕಾಯ್ದಿರಿಸಲಾಗಿದೆ
ಕ್ಷಮಿಸಿ ಹಕ್ಕು ಸೌಮ್ಯ ಕಾಯ್ದಿರಿಸಲಾಗಿದೆ
ಕ್ಷಮಿಸಿ ಹಕ್ಕು ಸೌಮ್ಯ ಕಾಯ್ದಿರಿಸಲಾಗಿದೆ
ಕ್ಷಮಿಸಿ ಹಕ್ಕು ಸೌಮ್ಯ ಕಾಯ್ದಿರಿಸಲಾಗಿದೆ
ಕ್ಷಮಿಸಿ ಹಕ್ಕು ಸೌಮ್ಯ ಕಾಯ್ದಿರಿಸಲಾಗಿದೆ