ಮೂಡಿಗೆರೆ ತಾಲೂಕು, ಹಾಲೂರು ಗ್ರಾಮದ ಹಿರಿಯರಾದ ಶ್ರೀಮತಿ ತಂಗ್ಯಮ್ಮ (ದಿವಂಗತ ಅಪ್ಪಣ್ಣ ಗೌಡರ ಧರ್ಮಪತ್ನಿ) ಮಂಗಳವಾರ ಸಂಜೆ ಬೆಂಗಳೂರಿನಲ್ಲಿ ನಿಧನ ಹೊಂದಿರುತ್ತಾರೆ. (ಹಾಲೂರು ದಿವಂಗತ ಸತೀಶ್ ಮತ್ತು ದಿವಗಂತ ಮಹೇಶ್ ರವರ ತಾಯಿ) ಅವರಿಗೆ 93 ವರ್ಷ ವಯಸ್ಸಾಗಿತ್ತು.
ಮೃತರ ಅಂತ್ಯಸಂಸ್ಕಾರ ಇಂದು (7-1-2026) ಬುಧವಾರ ಮಧ್ಯಾಹ್ನ 2 ಗಂಟೆಗೆ ಸ್ವಗ್ರಾಮ ಹಾಲೂರಿನಲ್ಲಿ ನೆರವೇರಲಿದೆ.
ತಂಗ್ಯಮ್ಮ ಅವರ ಆತ್ಮಕ್ಕೆ ಚಿರಶಾಂತಿಯನ್ನು ಕೋರುತ್ತಾ, ಇವರ ಕುಟುಂಬದವರಿಗೆ ದುಃಖವನ್ನು ಸಹಿಸುವ ಶಕ್ತಿಯನ್ನು ದೇವರು ಕರುಣಿಸಲಿ ಎಂದು ಹೆಚ್.ಬಿ.ಶಿವಣ್ಣ ಅಧ್ಯಕ್ಷರು / ಟಿ .ಪಿ.ಸುರೇಂದ್ರ ಪ್ರಧಾನ ಕಾರ್ಯದರ್ಶಿ / ಪದಾಧಿಕಾರಿಗಳು /ನಿರ್ದೇಶಕರು ಹಾಗೂ ಮಾಜಿ ಅಧ್ಯಕ್ಷರುಗಳು , ಕರ್ನಾಟಕ ಬೆಳೆಗಾರರ ಒಕ್ಕೂಟ.
ಬಿ .ಆರ್ ಬಾಲಕೃಷ್ಣ ಅಧ್ಯಕ್ಷರು ಮೂಡಿಗೆರೆ ತಾಲ್ಲೂಕು ಬೆಳೆಗಾರರ ಸಂಘ , ಹಾಗು ಬಿ ಎಸ್ ಜೈರಾಂ ಮಾಜಿ ಅಧ್ಯಕ್ಷರು ,ಕೆ ಜಿ ಎಫ್ , ಕೆ .ಡಿ .ಮನೋಹರ್ ಕಾರ್ಯದರ್ಶಿ ಮೂಡಿಗೆರೆ ತಾಲ್ಲೂಕು ಬೆಳೆಗಾರರ ಸಂಘ ,ಹಾಗು ಬಿ.ಬಸವರಾಜು , ಹೆಚ್ .ಪಿ .ರೇವಣ್ಣ ಗೌಡ , ಹೆಚ್ .ಪಿ .ದೇವರಾಜು ,ಡಿ ಎಸ್ .ರಘು ಹಾಗು ಮೂಡಿಗೆರೆ ತಾಲ್ಲೂಕು ಬೆಳೆಗಾರರ ಸಂಘದ ಕಾರ್ಯಕಾರಿ ಮಂಡಳಿ, ಸೇರಿದಂತೆ ಹಲವು ಗಣ್ಯರು ತಮ್ಮ ಸಂತಾಪ ವ್ಯಕ್ತಪಡಿಸಿದ್ದಾರೆ.



