ಮೂಡಿಗೆರೆ ಲಯನ್ಸ್ ಸಂಸ್ಥೆ ವತಿಯಿಂದ ಮೂಡಿಗೆರೆ ಎಂಜಿಎಂ ಆಸ್ಪತ್ರೆಗೆ ಅತ್ಯಾಧುನಿಕ ಕಣ್ಣಿನ ಸ್ಕ್ಯಾನಿಂಗ್ ಉಪಕರಣ ಕೊಡುಗೆಯಾಗಿ ನೀಡಲಾಯಿತು.
3 ಲಕ್ಷ ರೂಪಾಯಿ ಮೌಲ್ಯದ ಈ ಉಪಕರಣವನ್ನು ಸಾರ್ವಜನಿಕರ ಉಪಯೋಗಕ್ಕಾಗಿ ಲಯನ್ಸ್ ಸಂಸ್ಥೆ ಮೂಡಿಗೆರೆ ವತಿಯಿಂದ ಕೊಡುಗೆಯಾಗಿ ನೀಡಲಾಯಿತು.
ಲಯನ್ಸ್ ಜಿಲ್ಲಾ ರಾಜ್ಯಪಾಲರ ಲ.ಕುಡುಪಿ ಅರವಿಂದ್ ಶೆಣೈ ಅವರು ಮೂಡಿಗೆರೆ ಘಟಕಕ್ಕೆ ಅಧಿಕೃತ ಭೇಟಿ ಕಾರ್ಯಕ್ರಮದ ಸಂದರ್ಭದಲ್ಲಿ ಉಪಕರಣವನ್ನು ಮೂಡಿಗೆರೆ ಎಂ.ಜಿ.ಎಂ. ಆಸ್ಪತ್ರೆಗೆ ಹಸ್ತಾಂತರಿಸಲಾಯಿತು.

ಲಯನ್ಸ್ ಕ್ಲಬ್ ಮೂಡಿಗೆರೆ ಅಧ್ಯಕ್ಷರಾದ ಬಿ ಎಲ್ ದಿನೇಶ್, ಎಂ.ಜಿ.ಎಂ. ಆಸ್ಪತ್ರೆ ಆಡಳಿತಾಧಿಕಾರಿ ಡಾ. ಪ್ರಿಯಾಂಕ, ಹಿರಿಯ ವೈದ್ಯರಾದ ಡಾ. ಅನಂತ ಪದ್ಮನಾಭ, ಕಣ್ಣಿನ ತಜ್ಞ ಡಾ. ಸತೀಶ್, ಲಯನ್ಸ್ ಸಂಸ್ಥೆ ಮಾಜಿ ಅಧ್ಯಕ್ಷರುಗಳಾದ ಎನ್ ಎಲ್ ಪುಣ್ಯಮೂರ್ತಿ, ಹಳೇಕೋಟೆ ರಮೇಶ್, ಎಂ ಬಿ ಗೋಪಾಲ ಗೌಡ, ಎಂ ಈ ಜಯಕುಮಾರ್, ಕೆ ಟಿ ದೇವಪ್ಪ ಕಾರ್ಯದರ್ಶಿ ಅಣ್ಣೆಗೌಡ, ಖಜಾಂಚಿ ಎಂ ಎಚ್ ಹರ್ಷ ಮುಂತಾದವರು ಉಪಸ್ಥಿತರಿದ್ದರು.




