ಬನ್ನಿ ಕೈಜೋಡಿಸಿ ಡ್ರಗ್ಸ್ ಮುಕ್ತ ಕರ್ನಾಟಕ ಸಂಕಲ್ಪಕ್ಕೆ ಜೆ.ಸಿ.ಐ ಮೂಡಿಗೆರೆ ಸನಾತನ ಸಂಸ್ಥೆ, ರೋಟರಿ ಕ್ಲಬ್ ಲಯನ್ಸ್ ಸಂಸ್ಥೆ ಇವರ ಸಂಯುಕ್ತಾಶ್ರಯದಲ್ಲಿ ಬಿ.ಜಿ.ಎಸ್ ಶಾಲೆಯ ಆವರಣದಲ್ಲಿ ಜಾಗೃತಿ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿತ್ತು , ಮಕ್ಕಳಿಗೆ ಸ್ತಬ್ಧ ಚಿತ್ರದ ವಾಹನದ ಮೂಲಕ ಡ್ರಗ್ಸ್ ವ್ಯಸನಕ್ಕೆ ಒಳಗಾಗದಂತೆ ಮಾದರಿಯನ್ನು ಹಾಗೂ ಬಿತ್ತಿ ಪತ್ರಗಳನ್ನು ನೀಡಿ ಎಚ್ಚರಿಸುತ್ತ ಯುವ ಜನತೆಗೆ ಎಚ್ಚರಿಕೆಯನ್ನು ಮೂಡಿಸಲಾಯಿತು.

ಈ ಕಾರ್ಯಕ್ರಮದಲ್ಲಿ ಬಿ.ಜಿ.ಎಸ್ ಶಾಲೆಯ ಮಕ್ಕಳು ಹಾಗೂ ಶಿಕ್ಷಕ ವರ್ಗ , ಸನಾತನ ಸಂಸ್ಥೆಯ ವರ್ಗ,ಜೆ. ಸಿ. ಐ ನೂತನ ಅಧ್ಯಕ್ಷರಾದ ಸುನಿಲ್ ಕುಮಾರ್ ಹಾಗೂ ಕಾರ್ಯದರ್ಶಿಗಳಾದ ಜೇಸಿ ಸುದೀಪ್ , ಜೆ.ಸಿ ಪೂರ್ವ ಅಧ್ಯಕ್ಷರಾದ ತೇಜಸ್ವಿ, ಜೇಸಿ ಪದಾಧಿಕಾರಿಗಳಾದ ಅಬ್ದುಲ್ ನಾಜಿಮ್,ಹಾಗೂ ವಿಜಯಲಕ್ಷ್ಮಿ ಮುಂತಾದವರು ಉಪಸ್ಥಿತರಿದ್ದರು.



