2025 ರ ಡಿಸೆಂಬರ್ 28ರಂದು ಶಿವಮೊಗ್ಗದ ಶಿರಾಳ ಕೊಪ್ಪದಲ್ಲಿ ನಡೆದ ರಾಷ್ಟ್ರೀಯ ಮಟ್ಟದ ಪ್ಯಾಶನ್ ಶೋನಲ್ಲಿ ಮೂಡಿಗೆರೆಯ ಇರ್ಷಾನ್ ಭಾಗವಹಿಸಿ ಐಕಾನ್ ಆಫ್ ಕರ್ನಾಟಕ 2025 ಪ್ರಶಸ್ತಿಯನ್ನು ಪಡೆಯುವುದರೊಂದಿಗೆ ರಾಷ್ಟ್ರೀಯ ಮಟ್ಟದಲ್ಲಿ ಪ್ರಥಮ ಸ್ಥಾನ ಪಡೆಯುವುದರೊಂದಿಗೆ ಚಿಕ್ಕಮಗಳೂರು ಜಿಲ್ಲೆಯ ಮೂಡಿಗೆರೆಗೆ ಹೆಸರು ತಂದಿದ್ದಾರೆ.
ತಂದೆ ಹಸೈನಾರ್ ಬಿ.ಎಂ. ಟಿಂಬರ್ ಕೆಲಸಗಾರ, ತಾಯಿ ಫಾತಿಮಾ ದಂಪತಿಗಳ ಪುತ್ರ ಇರ್ಷಾನ್ ಅವಾರ್ಡ್ ಪಡೆದ ಯುವಕ, ಓದಿದ್ದು ಮೂಡಿಗೆರೆ ನಳಂದ ಶಾಲೆಯಲ್ಲಿ ಫ್ರೈಮರಿ ಯವರಗೆ, ಹೈಸ್ಕೂಲ್ ಸೈಂಟ್ ಮಾರ್ಥಾಸ್ ಕಾನ್ವೆಂಟ್ ಶಾಲೆಯಲ್ಲಿ, ಜೂನಿಯರ್ ಕಾಲೇಜಿನಲ್ಲಿ ಪಿಯು ಮುಗಿಸಿ ಬೆಂಗಳೂರಿನ ಮೌಂಟೇನ್ ಟ್ರಯಲ್ಸ ನಲ್ಲಿ ಬಿಎಚ್‌ಎಂ ಆರು ತಿಂಗಳುಗಳ ಕಾಲ ತರಭೇತಿ ಮುಗಿಸಿ ಮೂಡಿಗೆರೆ ಹಿಂದಿರುಗಿದ ಯುವಕ.

ಯುವಕ ಓದಿದ್ದು ಬಿಎಹೆಚ್‌ಎಂ ಆತನಿಗೆ ಪುಸ್ತಕ ಎಂದರೆ ಅಚ್ಚುಮೆಚ್ಚು. ಫ್ರಿಯಾಗಿದ್ದಾಗ ಇನ್‌ಸ್ಟ್ರಾ ಗ್ರಾಂ ನಲ್ಲಿ ಸಮಯ ಕಳೆಯುತ್ತಿದ್ದ. ಅದೇ ಇನ್‌ಸ್ರ್ಟಾಗ್ರಾಂ ಆ ಯುವಕನನ್ನು ರಾಷ್ಟ್ರೀಯ ಮಟ್ಟದ ಅವಾರ್ಡ್ ಪಡೆಯಲು ಸ್ಪೂರ್ತಿಯಾಗಿದೆ.
ಇರ್ಷಾನ್ ಸೋಷಿಯಲ್ ಮೀಡಿಯಾದಲ್ಲಿ ಇನ್ ಸ್ಟ್ರಾ ಗ್ರಾಮ್ ನಲ್ಲಿ ಪ್ಯಾಶನ್ ಶೋ ನೋಡುತ್ತಿರಬೇಕಾದರೆ ತಾನು ಪ್ಯಾಶನ್ ಶೋ ನಲ್ಲಿ ಭಾಗವಹಿಸಿ ಊರಿಗೆ ಕೀರ್ತಿ ತರಬೇಕೆಂದು ನಿರ್ಧರಿಸಿದವನೇ ಮೂಡಿಗೆರೆ ಪಟ್ಟಣದಲ್ಲಿ ಪ್ಯಾಶನ್ ಶೋ ತರಭೇತು ನೀಡುತ್ತಿದ್ದ ಅಪ್ಸನ್ ಅವರ ಬಳಿ ಪ್ಯಾಶನ್ ಶೋ ತರಭೇತಿ ಪಡೆದರು.
2025ರ 16 ನವೆಂಬರ್ ರಂದು ಮೂಡಿಗೆರೆ ಪಟ್ಟಣದ ಅಡ್ಯಂತಾಯ ರಂಗಮಂದಿರದಲ್ಲಿ ನಡೆದ ಮಲೆನಾಡು ಇವೇಂಟ್ಸ್ ನ ವತಿಯಿಂದ ನಡೆದ ಪ್ಯಾಶನ್ ಶೋ ನಲ್ಲಿ ಭಾಗವಹಿಸಿ ಪ್ರಥಮ ಸ್ಥಾನ ಪಡೆದು ನಂತರ 2026 ರ ಜನವರಿ 11 ರಂದು ಮಂಗಳೂರಿನಲ್ಲಿ ನಡೆಯುತ್ತಿರುವ ರಾಷ್ಟ್ರೀಯ ಮಟ್ಟದ ಪ್ಯಾಷನ್‌ಶೋನಲ್ಲಿ ಭಾಗವಹಿಸಿ ಪ್ರಥಮ ಸ್ಥಾನ ಪಡೆಯಬೇಕೆನ್ನುವುದು ತಮ್ಮ ಗುರಿಯನ್ನು ವ್ಯಕ್ತಪಡಿಸಿದ್ದಾರೆ.

ಇನ್‌ಸ್ಟ್ರಾ ಗ್ರಾಂ ಎನ್ನುವುದು ಬರೀ ರೀಲ್ಸ್ ಮಾಡುವುದು ಅಲ್ಲಾ ಅದರಿಂದ ಕಲಿಯಬೇಕಾಗಿದ್ದು ಬಹಳಷ್ಟಿದೆ. ಇನ್‌ಸ್ಟ್ರಾ ಗ್ರಾಂ ಒಂದು ಭಾಗವಾದರೆ ಪುಸ್ತಕ ಬಹಳ ಮಹತ್ವವನ್ನು ಹೊಂದಿದೆ ಎನ್ನುವುದಕ್ಕೆ ನನ್ನ ಸಹೋದರ ಒಂದು ಉದಾಹರಣೆಯಾಗಿದ್ದಾರೆ.
ಮುಫೀದಾ, ಇರ್ಫಾನ್ ಸಹೋದರಿ



